ವಿವಿ ಕರಡನ್ನು ವಾಪಾಸ್ ಪಡೆಯಲು ಸಿಎಂ ಆಗ್ರಹ
ವಿವಿ ಕರಡನ್ನು ವಾಪಾಸ್ ಪಡೆಯಲು ಸಿಎಂ ಆಗ್ರಹ by-ಕೆಂಧೂಳಿ ಬೆಂಗಳೂರು, ಫೆ,07- ಒಕ್ಕೂಟ ವ್ಯವಸ್ಥೆ ಗೆ ವಿರುದ್ಧವಾಗಿರುವ ವಿಶ್ವವಿದ್ಯಾಲಯಗಳ ಕರಡನ್ನು ಕೂಡಲೇ ವಾಪಸ್ಸ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ನಗರದಲ್ಲಿ ನಡೆದ ವಿವಿಧ ರಾಜ್ಯಗಳ ಉನ್ನತ ಶಿಕ್ಷಣ ಸಚಿವ ಸಮಾವೇಶಕ್ಕೆ ಕಳುಹಿಸಿದ್ದ ವಿಡಿಯೋ ಸಂದೇಶದಲ್ಲಿ ಈ ಆಗ್ರಹ ಮಾಡಿದ್ದಾರೆ. ರಾಜ್ಯ ಸರ್ಕಾರಗಳಿಂದ ಸ್ಥಾಪಿತವಾದ ವಿಶ್ವವಿದ್ಯಾಲಯಗಳಿಗೆ ರಾಜ್ಯ ಸರ್ಕಾರವೇ ಒಟ್ಟಾರೆ ಅಭಿವೃದ್ಧಿಗಾಗಿ, ವೇತನ ಮತ್ತು ಇತರೆ ಭತ್ಯೆಗಳು, ಮಾನವ, ಭೌತಿಕ ಮತ್ತು ತಾಂತ್ರಿಕ ಮೂಲಸೌಕರ್ಯಗಳ ಸೃಜನೆ ಮತ್ತು ನಿರ್ವಹಣೆ,…