ಮೀನಾ ತೂಗುದೀಪ ಶ್ರೀನಿವಾಸ್ ಆಶೀರ್ವಾದ ಪಡೆದ ಟಕ್ಕರ್!
ಮನೋಜ್ ಕುಮಾರ್ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ, ಪುಟ್ಟಗೌರಿ ಮದುವೆ ಮತ್ತು ಈಗ ಕನ್ನಡತಿ ಧಾರಾವಾಹಿಯ ಮೂಲಕ ಮನೆ ಮನಗಳಿಗೆ ಪರಿಚಯವಾಗಿರುವ ರಂಜನಿ ರಾಘವನ್ ಅಭಿನಯದ ಚಿತ್ರ ʻಟಕ್ಕರ್ʼ. ವಿ. ರಘುಶಾಸ್ತ್ರಿ ನಿರ್ದೇಶನದ ಸಿನಿಮಾ ಬರುವ ಮೇ 6ರಂದು ತೆರೆಗೆ ಬರುತ್ತಿದೆ. ಹೀಗಾಗಿ ಚಿತ್ರತಂಡ ಪ್ರಚಾರ ಆರಂಭಿಸಿದೆ. ಮೈಸೂರಿಗೆ ತೆರಳಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ. ನಂತರ ಹಿರಿಯ ನಟ ದಿವಂಗತ ತೂಗುದೀಪ ಶ್ರೀನಿವಾಸ್ ಅವರ ಮನೆಗೆ ತೆರಳಿ ಮೀನಾ ತೂಗುದೀಪ ಅವರ ಆಶೀರ್ವಾದ ಪಡೆದಿದಾರೆ. ವರಸೆಯಲ್ಲಿ…