ಮಾನವತೆಯ ಹುಡುಕುತಲಿರುವೆ ……
ನಿಶ್ಯಬ್ದ, ನಿರ್ಜನ ರಸ್ತೆಗಳ ನೀರವತೆಯಲಿ ಮೌನ ಜನನಿಬಿಡ ಗಲ್ಲಿಗಳ ಪಿಸುಮಾತಲಿ ಪೊಲೀಸರ ಬೂಟಿನ ಶಬ್ದದ ಕರತಾಡನದಲಿ ಬಣ್ಣದ ಲಾಠಿಯ ಹೊಡೆತದ ರೌದ್ರಾವತೆಯಲಿ ಮಾನವತೆಯ ಹುಡುಕುತಲಿರುವೆ …… ಹೊಟ್ಟೆಗೆ ಹಿಟ್ಟಿಲ್ಲದ ಸಂತ್ರಸ್ತರ ಕಣ್ಣ ಕಪ್ಪಿನ ಅಂಚಿನಲಿ ವೇತನವಿಲದೆ ಮನೆ ಮಾಲೀಕನ ಕಾಲ ಹಿಡಿವ ನಡುಗುವ ಕೈಗಳ ಅಭದ್ರತೆಯಲಿ ಧ್ವಂಸವಾದ ಭರವಸೆಗಳ ಬೂದಿ ಮಣ್ಣಿನ ತುತ್ತತುದಿಯಲಿ ನಾಳೆಗಳು ಬಾರದಿರಲಿ ಎಂದು ಆಶಿಸುವ ಹೃದಯಗಳಾವರಣದಲಿ ಮಾನವತೆಯ ಹುಡುಕುತಲಿರುವೆ …… ಆಸ್ಪತ್ರೆಯ ಶಿಥಿಲ ಗೋಡೆಗಳ ಬಿರುಕುಗಳಲಿ ಅರಳಿದ ಗಿಡಬಳ್ಳಿಗಳಲಿ ದಾದಿಯರ ಶ್ವೇತವರ್ಣದುಡಿಗೆಯ…