ಸಿದ್ಧಸೂಕ್ತಿ ; ಬೆಳೆಯುವ ಸಿರಿ ಮೊಳಕೆಯಲ್ಲಿ
ಬೆಳಗಿನ ಸೂರ್ಯೋದಯದ ಕಾಲದಲ್ಲಿ ಮನಸಿನ ಭಾವಗಳಿಗೆ ಒಂದಿಷ್ಟು ಹಿತವೆನಿಸುವ ಮಾತುಗಳು..ಸಂದೇಶದ ಅಣಿಮುತ್ತುಗಳನ್ನು ಇನ್ನೂ ಪ್ರತಿ ದಿನ ಬೆಳಗಿನ ಹೊತ್ತು ಡಾ.ಆರೂಢಭಾರತೀ ಸ್ವಾಮೀಜಿ ಅವರು ‘ಸಿದ್ಧಸೂಕ್ತಿ ‘ಯಲ್ಲಿ ನೀಡುತ್ತಾರೆ. ಡಾ ಆರೂಢಭಾರತೀ ಸ್ವಾಮೀಜಿ. ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ, ರಾಮೋಹಳ್ಳಿ. ಬೆಳೆಯುವ ಸಿರಿ ಮೊಳಕೆಯಲ್ಲಿ. ಉತ್ತಿ ಗೊಬ್ಬರ ಹಾಕಿ ಬಿತ್ತಿ ನೀರುಣಿಸಿದ ಬೀಜ ಸಂಭ್ರಮದಿ ಮೊಳೆಯುವುದು. ಅದು ಉತ್ತಮ ಫಸಲು ನೀಡುವ ಸಂಕೇತ. ಸೊರಗುತಲೆದ್ದ ಮೊಳಕೆ ಬಾಡಿ ಒಣಗುವುದು, ಬದುಕಿದರೆ ಫಲ ಹೀಚು ಜೊಳ್ಳು…




















