Girl in a jacket

Author kendhooli_editor

ಸಿಎಸ್ ವಾಪಾಸ್ ಕಳೆಸಲಾಗದು-ಮೋದಿಗೆ ಪತ್ರ ಬರೆದ ಮಮತಾ

ಕೋಲ್ಕತಾ,ಮೇ,೩೧: ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಅವರ ಸೇವೆಯನ್ನು ಹಿಂಪಡಡೆಯವಂತೆ ಕೇಂದ್ರ ಸರ್ಕಾರ ನೀಡಿದ ಅದೇಶದ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸಂಘರ್ಷ ಮುಂದುವರೆದಿದೆ. ಯಾವುದೇ ಕಾರಣಕ್ಕೂ ಮುಖ್ಯಕಾರ್ಯದರ್ಶಿ ಅವರನ್ನು ಬಿಟ್ಟುಕೊಡುವುದಿಲ್ಲ ಎಂದು ಮಮತಾ ಪ್ರಧಾನಿ ಮೋದಿಯವರಿಗೆ ಪತ್ರವನ್ನು ರವಾನಿಸಿದ್ದಾರೆ ಈ ಕುರಿತು ಇಂದು ೫ ಪುಟಗಳ ಪತ್ರವನ್ನು ಪ್ರಧಾನಿಗೆ ಬರೆದಿರುವ ಸಿಎಂ ಮಮತಾ, ಮೂರು ತಿಂಗಳ ವಿಸ್ತರಣೆ ನೀಡಿ ಮುಖ್ಯ ಕಾರ್ಯದರ್ಶಿಗಳ ಸೇವೆಯನ್ನು ವಿಸ್ತರಿಸಿ ಇದೀಗ…

ಸೆಟ್ರಲ್ ವಿಸ್ಟ್ರಾ ಯೋಜನೆ ಸ್ಥಗಿತಗೊಳಿಸಲು ಕೋರಿದ್ದ ಅರ್ಜಿ ವಜಾ

ನವದೆಹಲಿ,ಮೇ,೩೧: ಸೆಂಟ್ರಲ್ ವಸ್ಟಾ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ಈ ಯೋಜನೆ ಒಂದು ರಾಷ್ಟ್ರೀಯ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಹೇಳಿದೆ. ಅಲ್ಲದೆ ಈ ಅರ್ಜಿ ನಿಜವಾದ ಅರ್ಜಿಯಲ್ಲಿ ಇದು ಅರ್ಜಿದಾರರ ಪ್ರೇರಿತವಾಗಿದೆ ಹಾಗಾಗಿ ಅರ್ಜಿಯನ್ನು ೧,೦೦,೦೦೦ ವೆಚ್ಚದೊಂದಿಗೆ ವಜಾಗೊಳಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ವಿಭಾಗೀಯ ಪೀಠವು ಸೆಂಟ್ರಲ್ ವಿಸ್ಟಾ ಅವೆನ್ಯೂದಲ್ಲಿನ ಕೆಲಸವು ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್‌ನಲ್ಲಿನ ಕೆಲಸದ…

ರಾಜ್ಯದಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ

ಬೆಂಗಳೂರು ,ಮೇ 31:ಕೇರಳಕ್ಕೆ ಜೂನ್ 3 ರಿಂದ ಮುಂಗಾರು ತಡವಾಗಿ ಪ್ರವೇಶಲಿದ್ದು,ಇದರ ಪರಿಣಾಮ ನಾಳೆ ರಾಜ್ಯದಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದಿನಿಂದ 5 ದಿನಗಳವರೆಗೆ ಕೇರಳ ಮತ್ತು ಮಾಹೆ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ನಾಳೆಯಿಂದ ಮೂರು ದಿನ ಭಾರೀ ಮಳೆಯಾಗಲಿದೆ. ಇಂದಿನಿಂದ ಕೇರಳ, ಅಸ್ಸಾಂ, ಮೇಘಾಲಯ, ಆಂಧ್ರಪ್ರದೇಶದ ಕರಾವಳಿ ಪ್ರದೇಶ, ಅರುಣಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಕರಾವಳಿ…

ಭಾರತದಲ್ಲಿ 1,52,734 ಕೋವಿಡ್ ಪ್ರಕರಣ ದೃಡ

ನವದೆಹಲಿ,ಮೇ31:ಕೋವಿಡ್ ಸೋಂಕಿರತ ಸಂಖ್ಯೆ ಕಳೆದ ಒಂದು ವಾರದಲ್ಲಿ ಇಳಿಕೆ ಕಂಡಿದ್ದು ಇಂದು ಕೊಂಚ ಏರಿಕೆಯಾಗಿದೆ. ಕಳೆದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 1,52,734 ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಇದು ಕಳೆದ 50 ದಿನಗಳಲ್ಲಿಯೇ ಕನಿಷ್ಟ ಸಂಖ್ಯೆಯಾಗಿದೆ. ಇದೇ ವೇಳೆ ಒಂದೇ ದಿನ 3,128 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,80,47,534ಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 3,29,100ಕ್ಕೆ ತಲುಪಿದೆ. ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 20,26,092ಕ್ಕೆ…

ಟೀಕಿಸಿದ ಜನಪ್ರತಿನಿಧಿಗಳಿಗೆ ಲೆಕ್ಕಪತ್ರಗಳ ಮೂಲಕ ತಿರುಗೇಟು ನೀಡಿದ ರೋಹಿಣಿ

ಮೈಸೂರು, ಮೇ 31: ಮೈಸೂರು ಜಿಲ್ಲಾಧಿಕಾರ ಹಾಗೂ ಜನಪ್ರತಿನಿಧಿಗಳ ಜತೆಗಿನ ಕತ್ತಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ..ಆದರೆ ಇದ್ಯಾವುದಕ್ಕೂ ಜಗ್ಗದ ರೋಹಿಣಿ ತಮ್ಮ ಮೇಲಿನ ಆರೋಪಗಳಿಗೆ ಕಡಕ್ಕಾಗಿಯೇ ಉತ್ತರ ನೀಡುತ್ತಾ ಬಂದಿದ್ದಾರೆ. ಈಗ ಸಂಸದ ಪ್ರತಾಪ್ ಸಿಂಹ ಮಾಡಿರುವ ಆರೋಪಕ್ಕೆ ದಾಖಲೆ ಸಮೇತ ಉತ್ತರಿಸಿದ್ದಾರೆ. ರೋಹಿಣಿ ಸಿಂಧೂರಿ ವಿರುದ್ಧ ಸಿಡಿದೆದ್ದ ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇವರ ಬೆನ್ನಲ್ಲೇ ಶಾಸಕ ಸಾ.ರಾ ಮಹೇಶ್ ಸಹ ಡಿಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.…

ಮಾನವ ಕೊಟ್ಟಿದ್ದು ಮನೆತನಕ, ದೇವರು ಕೊಟ್ಟಿದ್ದು ಕೊನೆತನಕ

ಶ್ರಿ.ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ: ಮಾನವ ಕೊಟ್ಟಿದ್ದು ಮನೆತನಕ, ದೇವರು ಕೊಟ್ಟಿದ್ದು ಕೊನೆತನಕ. ಅವರಿವರು ನೆರವಾಗಬೇಕೆಂದು ಬಯಸುತ್ತೇವೆ,ಹಾತೊರೆಯುತ್ತೇವೆ.ಪಡೆಯಲು ಪುಸಲಾಯಿಸುತ್ತೇವೆ, ಹೊಗಳುತ್ತೇವೆ, ಸಲಾಂ ಹಾಕುತ್ತೇವೆ, ಅಂಗಲಾಚಿ ಬೇಡುತ್ತೇವೆ, ಹರಸಾಹಸ ಪಡುತ್ತೇವೆ! ಅವರಿವರು ಕೊಡುವುದೂ ಉಂಟು! ನೆರವು- ದಾನ-ಅನುದಾನ, ಅಗತ್ಯತೆ-ಲಭ್ಯತೆ-ಕೊಡುವವರ ಮನದಧೀನ. ಅವರು ಕೊಟ್ಟಷ್ಟು, ನಮಗೆ ಸಿಕ್ಕಷ್ಟು! ನೆರವು ನೀಡಿದವನ, ನೀಡಿಸಿದವನ ಹಂಗು! ನೆರವು ಪಡೆದರೆಂದು ಅವರಿವರ ಕೊಂಕು ನುಡಿ! ನೆರವಿನ ಭಾಗಾಂಶಕ್ಕಾಗಿ ಹಾತೊರೆಯುವವರ ಕಾಟ! ನೆರವು ಎಷ್ಟು ಸಿಕ್ಕರೂ ಅಷ್ಟು ಸಿಗಲಿಲ್ಲವೆಂಬ ದಾಹ! ನೆನಪಿರಲಿ :ನೆರವು ಸಾಂದರ್ಭಿಕ, ಉತ್ತೇಜಕ!…

ಕೊಲೆ ಯತ್ನ-ನಾಲ್ವರು ರೌಡಿಶೀಟರ್‌ಗಳ ಬಂಧನ

ಬೆಂಗಳೂರು,ಮೇ,೩೦: ತನ್ನ ಎದುರಾಳಿ ತಂಡದ ರೌಡಿಶೀಟರ್ ಕೊಲೆಗೆ ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ರೌಡಿಶೀಟರ್ ಗಳಾದ ಸೋಮ, ಮಧು, ಸುಮಂತ್ ಹಾಗೂ ಮುನಿಮಲ್ಲಪ್ಪ ಬಂಧಿತ ಆರೋಪಿಗಳು. ಬಂಧಿತರು ವಿರೋಧಿ ಬಣದಲ್ಲಿದ್ದ ರೌಡಿಶೀಟರ್ ರೋಹಿತ್ ಹತ್ಯೆಗೆ ಸಂಚುರೂಪಿಸಿದ್ದರು. ರೋಹಿತ್ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದನು. ವರ್ತೂರು ಕೆರೆ ಕೊಡಿ ಬಳಿ ರೋಹಿತ್ ಬರಲಿದ್ದಾನೆ ಎಂಬ ಮಾಹಿತಿ ಅರಿತ ಆರೋಪಿಗಳು ಮಾರಕಾಸ್ತ್ರ ಹಿಡಿದು ಕೊಲೆಗೆ ಸಂಚು ರೂಪಿಸಿದ್ದರು. ಈ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ…

ಮತ್ತೇ ರಾಜಕಾರಣಕ್ಕೆ ಬರುವ ಇಂಗಿತ ವ್ಯಕ್ತಪಡಿಸಿರುವ ಶಶಿಕಲಾ

ಚೆನ್ನೈ,ಮೇ,೩೦: ತಮಿಳುನಾಡಿನಲ್ಲಿ ಎಐಡಿಎಂಕೆ ಪಕ್ಷದಲ್ಲಿ ಆಂತರಿಕ ಕಿತ್ತಾಟಗಳ ಈ ಸಂದರ್ಭದಲ್ಲಿ ಶಶಿಕಲಾ ಸಕ್ರಿಯ ರಾಜಕಾರಣಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದು ಇದಕ್ಕೆ ಸಂಬಂಧಿಸಿದ ಆಡಿಯೋ ಒಂದು ಬಹಿರಂಗವಾರುವುದು ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ. ಪಕ್ಷದಲ್ಲಿ ಆಗಿರುವ ಎರಡು ಬಣಗಳಿಂದ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದೆ ಹೀಗಾಗಿ ರಾಜ್ಯದಲ್ಲಿ ಮತ್ತೇ ಪಕ್ಷವನ್ನು ಸರಿದಾರಿಗೆ ತರಬೇಕು ಎಂದರೆ ಅದಕ್ಕೆ ಶಶಿಕಲಾಗೆ ಮಾತ್ರ ಸಾದ್ಯ ಈ ಹಿನ್ನೆಲೆಯಲ್ಲಿ ಇಬ್ಬರು ನಾಯಕರು ಮಾತನಾಡಿರುವ ಆಡಿಯೋ ಕ್ಲಿಪ್ ಈಗ ಬಹಿರಂಗವಾಗಿದೆ. ಮಾಜಿ ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ…

ಜೆ.ಎಚ್.ಪಟೇಲ್ ಸಿಎಂ ಆದ ಘಟನೆಯ ನೆನಪು…

ದೇವೇಗೌಡರು ಪ್ರಧಾನಿ ಪಟ್ಟ ಏರುವುದು ಖಚಿತವಾಗುತ್ತಿದ್ದಂತೆ ರಾಜ್ಯದಲ್ಲಿ ಅವರ ಉತ್ತರಾಧಿಕಾರಿಯಾಗಲು ನಡೆದ ಆ ಘಟನಾವಳಿಗೆ ಇಂದಿಗೆ ೨೫ ವರ್ಷವಾಗಿದೆ ಅದರ ನೆನಪು ಮತ್ತು ಅಂದು ನಡೆದ ಆ ರಾಜಕೀಯ ನಡುವಳಿಗಳ ಕುರಿತು ಹಿರಿಯ ಪತ್ರಕರ್ತರಾದ ಸಿ. ರುದ್ರಪ್ಪ ಅವರು ಕಟ್ಟಿಕೊಟ್ಟಿದ್ದಾರೆ. ಸಿ. ರುದ್ರಪ್ಪ.ಹಿರಿಯ ಪತ್ರಕರ್ತರು ಇಪ್ಪತ್ತೈದು ವರ್ಷಗಳ ಹಿಂದಿನ ಇಂದಿನ ಕಾಲಮಾನ ರಾಜ್ಯ ರಾಜಕಾರಣದಲ್ಲಿ ಒಂದು ಪ್ರಮುಖ ಕಾಲಘಟ್ಟ.ಕನ್ನಡಿಗರೊಬ್ಬರು ಪ್ರಧಾನಿ ಪಟ್ಟಕ್ಕೇರಿದ ಕ್ಷಣ.ಮುಖ್ಯಮಂತ್ರಿಯಾಗಿದ್ದ ಎಚ್ ಡಿ ದೇವೇಗೌಡರು ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ ಅವರ ಉತ್ತರಾಧಿಕಾರಿಯಾಗಲು ನಡೆದ ಪೈಪೋಟಿ,ದೇವೇ ಗೌಡರ…

ಆಂಗ್ಲಭಾಷೆ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನ!

ಲೇಖಕರ ಪರಿಚಯ; ಎನ್.ಸಿ.ಶಿವಪ್ರಕಾಶ್ ಮೂಲ ತುರುವನೂರು ನಿವಾಸಿ,ಅವರು ಆರಿಸಿಕೊಂಡ ವೃತ್ತಿಯಿಂದ ಒಮಾನ್ ದೇಶದ ಮಸ್ಕತ್‌ನಲ್ಲಿ ವಾಸವಾಗಿದ್ದಾರೆ.ಆದರೆ ತಾಯ್ನಾಡಿನ ಮಣ್ಣಿನ ವಾಸನೆಯನ್ನು ಎಂದೂ ಮರೆತವರಲ್ಲ ಅದರಲ್ಲೂ ಆಡಿ-ಬೆಳದ ಗ್ರಾಮದ ವೈಶಿಷ್ಟ್ಯಗಳ ಕುರಿತು ಮೆಲುಕು ಹಾಕುತ್ತಲೆ ಇರುತ್ತಾರೆ, ಯಾಕೆಂದರೆ ಅಲ್ಲಿನ ಭಾವನಾತ್ಮಕ ಸಂಬಂಧಗಳ ಬೆಸುಗೆ ಎಂದೂ ಕಳಚಲಾಗದ ನೆನಪುಗಳು.ಹಾಗಾಗಿಯೇ ಗ್ರಾಮದ ಪ್ರತಿ ನೆನಪು ಅವರಲ್ಲಿ ಮಾಸದೆ ಉಳಿದವೆ.ಆ ನೆನಪುಗಳ ಭುತ್ತಿಯ ಒಂದಿಷ್ಟು ಘಟನೆಳನ್ನು ಇಲ್ಲಿ ಹೇಳಿದ್ದಾರೆ. ಶಿವಪ್ರಕಾಶ್ ಅವರು ಹತ್ತನೇ ತರಗತಿಯವರೆಗೂ ತುರುವನೂರಿನಲ್ಲೇ ಓದಿದ್ದು ನಂತರ ಪಿಯುಸಿ ಚಿತ್ರದುರ್ಗದ ಸರ್ಕಾರಿ…

ಮಾತು ಬೆಳ್ಳಿ, ಮೌನ ಬಂಗಾರ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ‌‌   ಸಿದ್ಧಸೂಕ್ತಿ : ‌ಮಾತು ಬೆಳ್ಳಿ, ಮೌನ ಬಂಗಾರ. ಮಾತು ಅಭಿಪ್ರಾಯಸಾಧನ. ನಾಮಪದ ಕ್ರಿಯಾಪದ ಒಳಗೊಂಡ ಪೂರ್ಣಾರ್ಥ ವಾಕ್ಯ. ಅಕ್ಷರ ಶಬ್ದ ಪದ ವಾಕ್ಯದ ಉಚ್ಚಾರ ತಪ್ಪಿರದ ಸ್ಫುಟವಿರಲಿ, ಭಾಷೆ ಕೊಲೆಯಾಗದಿರಲಿ. ಭಾಷೆಯ ಆಳ ವಿಸ್ತಾರ ಅರಿತರೆ ಚೆನ್ನ! ಕೇಳುಗರಿಗೆ ಅರ್ಥವಾಗದ ಮಾತು ಬೇಡ. ಮಗು ಮೊದಲು ಮಾತನಾಡಿದರೆ ಚಪ್ಪಾಳೆ, ಹಿತ ಮಿತ ಮೀರಿ ಆಡಿದರೆ ಸಾಕು ನಿಲ್ಲಿಸುವ ಪೆಟ್ಟು! ಅಗತ್ಯ ಹಿತ ಮಿತದ ಮಾತು ಅಮೃತ, ಅನಗತ್ಯ ಅಹಿತ ಮನಬಂದಂತೆ…

ಅನಾಥಮಕ್ಕಳಿಗೆ ಬಾಲಸೇವಾಯೋಜನೆ ಘೋಷಿಸಿ ,ಪ್ರಧಾನಿ,ಸಿಎಂಗೆ ಸ್ವಾಗತಿಸಿದ ಜೊಲ್ಲೆ

ಬೆಂಗಳೂರು,ಮೇ,29: ಮಹಾಮಾರಿ ಕೊರೊನಾ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆರ್ಥಿಕ ನೆರವಿನ ಸಹಾಯ ಹಸ್ತ ಚಾಚಿರುವ ಪ್ರಧಾನಿ ಹಾಗೂ ಸಿಎಂಗೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸ್ವಾಗತಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕೊರೊನಾ ಸೋಂಕಿನಿಂದ ಬಹಳಷ್ಟು ಮಕ್ಕಳು ತಂದೆ ತಾಯಿಗಳನ್ನು ಕಳೆದುಕೊಂಡಿದ್ದಾರೆ. ಕೆಲವು ಮಕ್ಕಳಿಗೆ ಪೋಷಕರೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಹ ಮಕ್ಕಳನ್ನು ನಮ್ಮ ಇಲಾಖೆ ಗುರುತಿಸಿ ಅವರಿಗೆ ನೆರವು ನೀಡಲು ಈಗಾಗಲೇ…

ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಅನಾಥರಿಗೆ ಪರಿಹಾರ ಘೋಷಿಸಿದ ಮೋದಿ

ದೆಹಲಿ,ಮೇ,29: ಕೊರೊನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡು ಅನಾಥ ಮಕ್ಕಳಿಗೆ ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕೇರ್ಸ್ ಅಡಿ ಈ ಯೋಜನೆ ಘೋಶಿಸಿದ್ದು, ಅನಾಥ ಮಕ್ಕಳಿಗೆ 18 ವರ್ಷ ತುಂಬಿದಾಗ ಪ್ರತಿ ತಿಂಗಳು ಅಂದರೆ 5 ವರ್ಷಗಳ ಕಾಲ ಸ್ಟೈಫಂಡ್ ನೀಡಲಾಗುವುದು. 23 ವರ್ಷ ತುಂಬಿದ ಮೇಲೆ ಪಿಎಂ ಕೇರ್ಸ್ ನಿಂದ 10 ಲಕ್ಷ ರೂಪಾಯಿ ನಗದು ಹಣ ನೀಡಲಾಗುವುದು ಎಂದು ಹೇಳಿದ್ದಾರೆ. ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳು…

ಕೋವಿಡ್ ನಿಂದ ಹೆತ್ತವರ ಕಳೆದುಕೊಂಡ ಮಕ್ಕಳಿಗೆ ಪರಿಹಾರ ಘೋಷಣೆ

ಬೆಂಗಳೂರು, ಮೇ 29: ಕೋವಿಡ್-19 ದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ನೆರವಿಗಾಗಿ ಬಾಲ ಸೇವಾ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.ಈ ಯೋಜನೆಯಡಿ, ಕೊರೊನಾ ಕಾರಣವಾಗಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಪ್ರತಿ ತಿಂಗಳು 3500 ರೂ ಹಾಗೂ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು. ಕೇಂದ್ರ ಸರ್ಕಾರದ ಸಲಹೆ ಮೇರೆಗೆ, ಅನಾಥ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ನೆರವು ನೀಡಲಾಗುತ್ತಿದೆ. ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು…

ಬಂಗಾಳದ ಅಭಿವೃದ್ಧಿಗಾಗಿ ಮೋದಿ ಕಾಲುಹಿಡಿಯಲು ಸಿದ್ದ-ದೀದಿ

ಕೋಲ್ಕತ್ತ,ಮೇ29: ಪಶ್ಚಿಮ ಬಂಗಾಳದ ಕಲ್ಯಾಣ ಮತ್ತು ಅಮೂಲಾಗ್ರ ಅಭಿವೃದ್ಧಿಗಾಗಿ ಪ್ರಧಾನಿ ಮೋದಿಯವರು ಕಾಲು ಹಿಡಿಯಲೂ ಸಿದ್ದ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದರೆ,ಮೋದಿ ಮತ್ತು ಅಮಿತ್ ಉದ್ದೇಶ ಪೂರ್ವಕವಾಗಿ ತೊಂದರೆ ಕೊಡುತ್ತಿದ್ದಾರೆ..ನನಗೆ ನನ್ನ ರಾಜ್ಯದ ಅಭಿವೃದ್ಧಿ ಗೆ ಏನುಬೇಕಾದರೂ ಮಾಡಬಲ್ಲೆ ಎಂದಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಅಲಪನ್‌ ಬಂಡೋಪಾಧ್ಯಾಯ ಅವರನ್ನು ವಾಪಸ್‌ ಕರೆಸಿಕೊಳ್ಳುವ ನಿರ್ಧಾರವನ್ನು ಹಿಂಪಡೆಯಬೇಕು. ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸಲು ಅವರಿಗೆ ಅನುವು ಮಾಡಿಕೊಡಬೇಕು ಎಂದು ಅವರು…

ನಾಯಕನ ಜೊತೆ ಮಲಗಲು ಹೇಳಿದ್ದ ನಿರ್ಮಾಪಕ-ಅನುಭವ ಬಿಚ್ಚಿಟ್ಟ ಕಿಶ್ವೆರ್

ಮುಂಬ್ಯೆ,ಮೇ,೨೯: ಚಿತ್ರದಲ್ಲಿ ನಟಿಸುವ ಅವಕಾಶ ಬೇಕೆಂದರೆ ನಾಯಕನೊಂದಿಗೆ ಮಲಬಗೇಕು ಎಂದು ದೊಡ್ಡ ಚಿತ್ರ ನಿರ್ಮಾಪಕರೊಬ್ಬರು ಹೇಳಿದ್ದಾಗಿ ನಟಿ ಕಿಶ್ವೆರ್ ಮರ್ಚೆಂಟ್ ತಮಗಾದ ಅನುಭವವನ್ನು ಬಹಿರಂಗ ಪಡಿಸಿದ್ದಾರೆ. ಇ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯವನ್ನು ಬಿಚ್ಚಿಟ್ಟ ಅವರು ತಮಗಾದ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಅಲ್ಲದೆ ಆ ಅವಕಾಶವನ್ನು ನಯವಾಗಿಯೇ ನಿರಾಕರಿಸಿ ಬಂದಿದ್ದೆ ಎಂದು ಅವರು ತಿಳಿಸಿದ್ದಾರೆ. ಸದ್ಯ, ಸಾಂಸಾರಿಕ ಜೀವನದಲ್ಲಿ ಸಂತಸದಿಂದಿರುವ ನಟಿ ಕಿಶ್ವರ್ ಮರ್ಚೆಂಟ್ ಮತ್ತು ಪತಿ ಗಾಯಕ ಸುಯಾಶ್ ರಾಯ್ ಮೊದಲ…

ಕೋವಿಡ್ ಪರಿಹಾರ ಕುರಿತು ಚರ್ಚಿಸಿದ ವಿದೇಶಾಂಗ ಸಚಿವ ಜೈಶಂಕರ್

ವಾಷಿಂಗ್ಟನ್,ಮೇ,೨೯: ಭಾರತದಲ್ಲಿನ ಕೋವಿಡ್-೧೯ ಪರಿಹಾರ,ಹವಾಮಾನ ಬದಲಾವಣೆ ಮತ್ತು ಭಾರತ-ಫೆಸಿಫಿಕ್ ಪ್ರಾಂತ್ಯದಲ್ಲಿ ಸಹಕಾರ ಬಲವರ್ಧನೆ ಕರಿತಂತೆ ಚರ್ಚಿಸಲಾಗಿದೆ ಅಮೆರಿಕ ಪ್ರವಾದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಶುಕ್ರವಾರ ಅಲ್ಲಿನ ವಿದೇಶಾಂಗ ಸಚಿವ ಆಂಟೊನಿ ಬ್ಲಿಂಕೆನ್ ಅವರನ್ನು ಭೇಟಿ ಮಾಡಿ, ದ್ವಿಪಕ್ಷಿಯ ಮಾತುಕತೆ ಸಂಬಂಧಿಸಿದಂತೆ ಸುಧೀರ್ಘ ಚರ್ಚೆ ಮಾಡಿದ್ದಾರೆ ಇದರಲ್ಲಿ ಪ್ರಮುಖವಾಗಿ ಕೋವಿಡ್-೧೯ ಪರಿಹಾರ ಮತ್ತು ಅದರ ನಿಯಂತ್ರಣ ಕುರಿತಂತೆಯೇ ಇತ್ತು . ಭಾರತ-ಅಮೆರಿಕ ನಡುವಿನ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆ ಹೆಚ್ಚಿಸುವ ಅಮೆರಿಕದ ಬದ್ಧತೆಯನ್ನು ಪ್ರತಿಪಾದಿಸಿದ್ದಾರೆ. ಇಬ್ಬರೂ ನಾಯಕರು ಕೋವಿಡ್…

ಕೊರೊನಾ ಸ್ಥಿತಿಗತಿ ನೋಡಿ ಲಾಕ್‌ಡೌನ್ ವಿಸ್ತರಣೆ ಕುರಿತು ನಿರ್ಧಾರ-ಸಿಎಂ

ಬೆಂಗಳೂರು,ಮೇ,೨೯: ಕೊರೊನಾ ಸೋಂಕಿತರ ಸಂಖ್ಯೆಯ ಮೇಲೆ ಆಧರಿಸಿ ಮುಂದಿನ ವಾರ ಲಾಕ್‌ಡೌನ್ ವಿಸ್ತರಣೆ ಮಾಡಬೇಕೆ ಬೇಡವೇ ಎನ್ನುವ ಕುರಿತು ಜೂನ್ ೫ ರಂದು ನಿರ್ಧಾರ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ ಜಿಲ್ಲೆಗಳನ ಸ್ಥಿತಿಗತಿ ಕುರಿತು ಮತ್ತು ಮುಂದೆ ತಗೆದುಕೊಳ್ಳಬೇಕಾದ ಸಿದ್ದತೆಗಳ ಕುರಿತು ವಿಡಿಯೋಕಾನ್ಫರೆನ್ಸ್ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ೭ರ ವರೆಗೆ ಎಂದಿನಂತೆ ಲಾಕ್‌ಡೌನ್ ಇರುತ್ತದೆ. ಜೂನ್ ೭ರ ನಂತರ ಲಾಕ್‌ಡೌನ್ ಪ್ರಶ್ನೆ ಉದ್ಭವಿಸಲ್ಲ ಎಂದೆನಿಸುತ್ತದೆ. ಆದರೆ ರಾಜ್ಯದ ಸ್ಥಿತಿಗತಿ ನೋಡಿಕೊಂಡು ಲಾಕ್‌ಡೌನ್…

೧೯೭೮ರಲ್ಲಿ ಮುಚ್ಚಿದ್ದ ಶಾಲೆಯಲ್ಲಿ ೨೧೫ ವಿದ್ಯಾರ್ಥಿಗಳ ಕಳೇಬರ ಪತ್ತೆ!

ಟೊರೊಂಟೊ,ಮೇ,೨೯: ಅಪೌಷ್ಕತೆಯಿಂದ ಶಾಲೆಯಲ್ಲಿನ ಹಿಂಸಾಕೃತ್ಯದ ಮತ್ತು ಅಲ್ಲಿನ ದೌರ್ಜನ್ಯಗಳ ಕಾರಣಗಳಿಂದ ೧೯೭೮ರಲ್ಲಿ ಸಾವನ್ನಪ್ಪಿದ್ದ ವಸತಿಶಾಲೆಯ ವಿದ್ಯಾರ್ಥಿಗಳ ಕಳೆಬರಹಗಳು ಈಗ ಪತ್ತೆಯಾಗಿವೆ. ಇದು ಆಶ್ಚರ್ಯವಾದರೂ ಸತ್ಯ ಇದು ನಡೆದಿರುವುದು ಕೆನಾಡಾದ ’ಟಿಕೆಎಮ್ಲುಪ್ಸ್ ಟೆ ಸೆಕ್ವೆಪೆಮ್‌ಕೆ ನೇಷನ್’ಶಾಲೆಯಲ್ಲಿ ಇದರಲ್ಲಿ ಒಟ್ಟು ೨೧೫ ಮಕ್ಕಳ ಕಳೇಬರಹ ಪತ್ತೆಯಾಗಿವೆ ಈ ಘೋರ ಕೃತ್ಯವನ್ನು ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೋ ಇದೊಂದು ಹೃದಯ ವಿದ್ರಾವಕ ಎಂದು ಹೇಳಿದ್ದಾರೆ ಅಲ್ಲದೆ ಇದು ನಮ್ಮ ದೇಶದ ಇತಿಹಾಸದ ಆ ಕರಾಳ ಮತ್ತು ನಾಚಿಕೆಗೇಡಿನ ಅಧ್ಯಾಯವನ್ನು ನೆನಪಿಸುತ್ತದೆ’ ಎಂದಿದ್ದಾರೆ.…

ಐಪಿಎಲ್ ಪುನಾರಂಭಿಸಲು ಬಿಸಿಸಿಐ ನಿರ್ಧಾರ

ನವದೆಹಲಿ,ಮೇ,೨೯ :ಕೋವಿಡ್ ಅಟ್ಟಹಾಸದಿಂದ ರದ್ದಾಗಿದ್ದ ೧೪ನೇ ಆವೃತ್ತಿಯ ಐಪಿಎಲ್ ಪಂದ್ಯವಾಳಿಯನ್ನು ಪುನಾರಂಭಿಸಲು ಬಿಸಿಸಿಐ ನಿರ್ಧರಿಸಿದೆ. ಈ ಪಂದ್ಯಗಳು ಭಾರತದ ಬದಲಾಗಿಎ ಅರಬ್‌ನಲ್ಲಿ (ಯುನೈಟೆಡ್ ಅರಬ್ ಎಮಿರೇಟ್ಸ್-ಯುಎಇ) ನಡೆಯಲಿದೆ. ಬಾಕಿ ಉಳಿದ ೩೧ ಪಂದ್ಯಗಳು ನಡೆಯಲಿದ್ದು ಆ ಕುರಿತು ಎಲ್ಲೆಲ್ಲಿ ನಡೆಯಲಿವೆ ಎನ್ನುವುದನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ ಇಂದು ವಿಶೇಷ ಸಾಮಾನ್ಯ ಸಭೆ ನಡೆಸಿದ ಬಳಿಕ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮಳೆಗಾಲ ಇರುವುದರಿಂದ ಯುಎಇನಲ್ಲಿ ಬಾಕಿ ಉಳಿದಿರುವ…

1 108 109 110 111 112 122
Girl in a jacket