ಶಿವಾಜಿ ಗಣೇಶನ್ಅಭಿನಯದ ಪಂತುಲು ನಿರ್ಮಾಣದ ಮೊದಲ ಚಿತ್ರಮೊದಲತೇದಿ
ಸ್ಕೂಲ್ ಮಾಸ್ಟರ್, ಶ್ರೀಕೃಷ್ಣದೇವರಾಯ, ಕಿತ್ತೂರುಚೆನ್ನಮ್ಮ ಮೊದಲಾದ ಮಹೋನ್ನತ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ಅಭಿನಯಿಸಿದ ಬಿ.ಆರ್.ಪಂತುಲುತಮ್ಮ‘ಪದ್ಮಿನಿ ಪಿಕ್ಚರ್ಸ್‘ ಲಾಂಛನದಲ್ಲಿತೆರೆಗೆತಂದ ಮೊದಲ ಕನ್ನಡಚಿತ್ರ ‘ಮೊದಲ ತೇದಿ‘.ಮೊದಲ ಬಾರಿಗೆಕನ್ನಡಚಿತ್ರವೊಂದರಲ್ಲಿ ತಮಿಳಿನ ಖ್ಯಾತ ನಟ ಶಿವಾಜಿಗಣೇಶನ್ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸಿದ್ದು ಈ ಚಿತ್ರದ ವಿಶೇಷವಾಗಿತ್ತು.ಚಿ.ಸದಾಶಿವಯ್ಯನವರು ಈ ಚಿತ್ರದ ಮೂಲಕ ಸಾಹಿತಿಯಾಗಿಚಿತ್ರರಂಗ ಪ್ರವೇಶಿಸಿದರು.ಕನ್ನಡಕ್ಕೆ ಮಧುರ ಗೀತೆಗಳನ್ನು ನೀಡಿದ ಟಿ.ಜಿ.ಲಿಂಗಪ್ಪ ಸಂಗೀತ ನೀಡಿದ ಮೊದಲ ಚಿತ್ರವೂ ಹೌದು. ವಿಶೇಷವೆಂದರೆ ಈ ಚಿತ್ರದ ಮೂಲಕ ಚಿ.ಉದಯಶಂಕರ್ ಸಣ್ಣ ಪಾತ್ರವೊಂದನ್ನು ನಿರ್ವಹಿಸಿದ್ದೇ ಅಲ್ಲದೆ, ಸಹಾಯಕ ನಿರ್ದೇಶಕರಾಗುವ ಮೂಲಕ ಕನ್ನಡಚಿತ್ರರಂಗ…




















