ಗ್ರಾಮೀಣ ಬದುಕು ಮತ್ತು ನಂಬಿಕೆ
ಗ್ರಾಮೀಣ ಬದುಕು ಮತ್ತು ನಂಬಿಕೆ ನನಗೆ ಚಿಕ್ಕಂದಿನಿಂದಲೂ ಪವಾಡಗಳೆಂದರೆ ಏನೋ ಒಂದು ವಿಧವಾದ ಆಸಕ್ತಿ. ಊರಲ್ಲಿ ಯಾರ ಮೈಮೇಲಾದರೂ ದೇವರು ಬಂದಿದೆ ಎಂದು ಕೇಳಿದ ಮರುಕ್ಷಣ ಅಲ್ಲಿಗೆ ಹಾಜರಾಗುತ್ತಿದ್ದೆ. ಹಾಗೆಯೇ ಭವಿಷ್ಯ ನುಡಿಯುವವರನ್ನು, ಕೋಲೆಬಸವದವರನ್ನು, ಗೊರಯ್ಯದವರನ್ನು, ಕಾರಣಿಕದವರನ್ನು, ಜೋಗತಿಯರನ್ನು ಅತಿಯಾಗಿ ನಂಬುತ್ತಿದ್ದೆ, ಅವರು ಹೇಳುವುದು ಖಂಡಿತವಾಗಿ ಜರುಗಿಯೆ ತೀರುತ್ತದೆ ಎಂದು ಬಲವಾಗಿ ನಂಬಿದ್ದೆ. ಇಂತಹ ಒಂದು ನಂಬಿಕೆಯನ್ನು ಗಟ್ಟಿಮಾಡಿದ ಪ್ರಸಂಗವೊಂದು ನಾನು ನಾಲ್ಕನೇ ಕ್ಲಾಸಿನಲ್ಲಿ ಇರುವಾಗ ಸಂಭವಿಸಿದ್ದು ನನ್ನ ಮನಃಪಟಲದಲ್ಲಿ ಇನ್ನೂ ಹಸಿರಾಗಿದೆ. ಅದು ೧೯೭೬-೭೭…



















