ವೃತ್ತ,ಮೇಲ್ಸೇತುವೆಗೆ ಡಾ. ಸಿದ್ದಲಿಂಗಯ್ಯ ನಾಮಕರಣ ಮಾಡಲು ಸಿಎಂಗೆ ರಾಮುಲು ಮನವಿ
ಬೆಂಗಳೂರು. ಜೂ.೧೪: ಸಾಮಾಜಿಕ ಸಮಾನತೆಗಾಗಿ ಕಾವ್ಯ, ಸಾಹಿತ್ಯಗಳನ್ನು ರಚಿಸಿ ಪ್ರೇರಣೆ ನೀಡಿ, ಜನಮಾನಸದಲ್ಲಿರುವ ಖ್ಯಾತ ಲೇಖಕ, ಕವಿ ಡಾ. ಸಿದ್ದಲಿಂಗಯ್ಯ ಅವರ ಸ್ಮರಣಾರ್ಥ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರತಿಷ್ಠಿತ ವೃತ್ತ ಅಥವಾ ಮೆಲ್ಸೇತೆಗೆ ಡಾ. ಸಿದ್ದಲಿಂಗಯ್ಯ ಅವರ ನಾಮಕರಣ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಮಾಜ ಕಲ್ಯಾಣ ಖಾತೆ ಸಚಿವ ಬಿ. ಶ್ರೀರಾಮುಲು ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಡಾ.ಸಿದ್ದಲಿಂಗಯ್ಯ ಅವರ ನಿಧನದಿಂದ ಸಾಹಿತ್ಯಕ್ಷೇತ್ರಕ್ಕೆ ಹಾಗೂ ಇಡೀ ರಾಜ್ಯಕ್ಕೆ ಭರಿಸಲಾರದ ನಷ್ಟ ಉಂಟಾಗಿದೆ.…




















