ಕಪ್ಪು ಜಗದ ಬೆಳಕಿನ ಕಿರಣ
ಕಪ್ಪು ಜಗದ ಬೆಳಕಿನ ಕಿರಣ ಅದು ೨೦೧೬ ರ ಡಿಸೆಂಬರ್ ತಿಂಗಳಲ್ಲಿ ೬ರಂದು ಪತ್ರಕರ್ತ ಮತ್ತು ಸಂಘಟಕ ಮಹೇಶ್ ಊಗಿನಹಳ್ಳಿಯವರು ಏರ್ಪಡಿಸಿದ್ದ ಚಂದಾಪುರದ ಛತ್ರಖಾನೆ ಶಾಲೆಯಲ್ಲಿ ಜೇನುಗೂಡು ವೇದಿಕೆಯ ಕನ್ನಡದ ಕಾರ್ಯಕ್ರಮವಿತ್ತು. ಅಂದು ನಮ್ಮ ತಾಲ್ಲೂಕಿನವರೇ ಆದ ಸೂಕ್ಷ್ಮ ಸಂವೇದನೆಯ ಲೇಖPರಾದ ಶೂದ್ರ ಶ್ರೀನಿವಾಸರು ಮತ್ತು ದಲಿತಕವಿ ಎಂದೇ ಕರೆಯಲ್ಪಡುವ ಬಂಡಾಯ ಕವಿ ಸಿದ್ದಲಿಂಗಯ್ಯನವರು ಕಾರ್ಯಕ್ರಮಕ್ಕೆ ಬಂದಿದ್ದರು. ಕಾರ್ಯಕ್ರಮದಲ್ಲಿ ಕವಿ ಸಿದ್ದಲಿಂಗಯ್ಯನವರು ಯಾವಾಗ ಮಾತನಾಡಿzರೂ ನವಿರಾದ ಹಾಸ್ಯ ಸುತ್ತಮುತ್ತಲಿನವರನ್ನು ಮಂದಸ್ಮಿತರನ್ನಾಗಿಸುತ್ತಿತ್ತು. ಅವರು ಮಾತನಾಡುವ ಸರದಿ ಬಂದಾಗ ಹೀಗೇ…



















