ದಲಿತ ಕವಿ ಸಿದ್ದಲಿಂಗಯ್ಯ ಇನ್ನಿಲ್ಲ
ಬೆಂಗಳೂರು,ಜೂ,11:ಕಳೆದ ಹಲವು ದಿನಗಳಿಂದ ಕೊರೊನಾ ಸೋಂಕಿನಿಂದ ನರಳುತ್ತಿದ್ದ ಡಾ.ಸಿದ್ದಲಿಂಗಯ್ಯ ಕೊನೆಯಿಸಿರೆಳದಿದ್ದಾರೆ. ಕೊರೊನಾ ಸೋಂಕು ದೃಡ ಪಟ್ಟ ನಂತರ ಅವರಿಗೆ ಬೆಡ್ ಸಿಗದೆ ಆಸ್ಪತ್ರೆ ಗಳಿಗೆ ಅಲೆದಾಡಿದ್ದರು.ಕಳೆದ ಹಲವು ದಿನಗಳಿಂದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿದ್ದು ಅವರು ಸಾವಿರಾರು ಸಾಹಿತ್ಯಾಭಿಮಾನಿಗಳನ್ನು ಹೊಂದಿದ್ದರು. ಕವಿ ಸಿದ್ಧಲಿಂಗಯ್ಯನವರು ಬಡ ಕುಟುಂಬವೊಂದರಲ್ಲಿ ದೇವಯ್ಯ ಮತ್ತು ವೆಂಕಟಮ್ಮನವರ ಪುತ್ರರಾಗಿ 1954 ರ ಫೆಬ್ರವರಿ 3 ರಂದು ರಾಮನಗರ…




















