Browsing: ರಾಷ್ಟ್ರೀಯ

ರಾಷ್ಟ್ರೀಯ

೧೨ನೇ ತರಗಿ ಪರೀಕ್ಷೆ ವೇಳೆ ಯಾರೇ ಸಾವಪ್ಪಿದರೂ ಸರ್ಕಾರವೇ ಹೊಣೆ-ಸುಪ್ರೀಂ

ನವ ದೆಹಲಿ,ಜೂ, ೨೪;ಕೊರೊನಾ ಸೋಂಕಿನ ಸಂಕಷ್ಟದಲ್ಲಿಯೂ ಆಂಧ್ರ ಸರ್ಕಾರ ೧೨ನೇ ತರಗತಿ ಪರೀಕ್ಷೆ ನಡೆಸಲು ಮುಂದಾಗಿರುವುದನ್ನು ಪ್ರಶ್ನಿಸಿರು ಸುಪ್ರೀಂಕೋರ್ಟ್ ಒಂದು ವೇಳೆ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಒಂದು ಸಾವಾದರೂ ಅದಕ್ಕೆ ಆ ಸರ್ಕಾರವೇ ನೇರ ಹೊಣೆಯಾಗಲಿದ್ದು ಸಾವನ್ನಪ್ಪಿದ ವಿದ್ಯಾರ್ಥಿ ಕುಟುಂಬಕ್ಕೆ ಒಂದು ಕೋಟಿ ರೂ ಪರಿಹಾರ ನೀಡುವಂತೆ ಎಚ್ಚರಿಸಿದೆ ಆಂಧ್ರಪ್ರದೇಶ ೧೨ನೇ ತರಗತಿ ಪರೀಕ್ಷೆ ನಡೆಸಲು ಮುಂದಾಗಿರುವ ನಿರ್ಣಯವನ್ನು ಖಂಡಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇಂದು ಈ ಅರ್ಜಿಯ ವಿಚಾರಣೆಗೆ ಮುಂದಾದ ನ್ಯಾಯಮೂರ್ತಿಗಳಾದ…

ನ ಕಲಿ ಟಿಆರ್‌ಪಿ ಹಗರಣ: ಅರ್ನಬ್ ಆರೋಪಿ

ಮುಂಬೈಜೂ,೨೨: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯಕ್ಕೆ ಮುಂಬೈ ಪೊಲೀಸರು ಮಂಗಳವಾರ ಎರಡನೇ ಚಾರ್ಜ್‌ಶೀಟ್ ಸಲ್ಲಿಸಿದ್ದು, ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆಹಗರಣ ಕುರಿತು ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್‌ನ ಕ್ರೈಂ ಇಂಟೆಲಿಜೆನ್ಸ್ ಯುನಿಟ್ (ಸಿಐಯು) ಈ ಚಾರ್ಜ್‌ಶೀಟನ್ನು ಸಲ್ಲಿಸಿದೆ.ಚಾರ್ಜ್‌ಶೀಟ್‌ನಲ್ಲಿ ಹಲವು ಆರೋಪಿಗಳ ಹೆಸರುಗಳಿದ್ದು, ಅರ್ನಬ್ ಗೋಸ್ವಾಮಿ ಹಾಗೂ ಎಆರ್‌ಜಿ ಔಟ್‌ಲಿಯರ್ ಸಂಸ್ಥೆಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ’ ಎಂದು ಗೋಸ್ವಾಮಿ ಪರ ವಕೀಲರು ತಿಳಿಸಿದ್ದಾರೆನಕಲಿ ಟಿಆರ್‌ಪಿ ಹಗರಣ ಕಳೆದ ವರ್ಷ ಅಕ್ಟೋಬರ್‌ನಲ್ಲಿ…

ತೃತೀಯ ರಂಗ ರಚನೆಗೆ ಪುಷ್ಟಿ ನೀಡಿದ ಕಿಶೋರ್ ,ಶರದ್ ಪವಾರ್ ಮಾತುಕತೆ

ಬಿಜೆಪಿಯೇತರ ತೃತೀಯ ರಂಗ ಉದಯವಾಗಲಿದೆ ಎಂಬ ಉಹಾಪೋಗಳ ಮಧ್ಯೆ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಮತ್ತು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ನಡೆಸಿದ ಮಾತುಕತೆ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತದೆ ನವದೆಹಲಿ,ಜೂ,21: ಬಿಜೆಪಿಯೇತರ ತೃತೀಯ ರಂಗ  ರಚನೆಯಾಗುವ ಲಕ್ಷಣಗಳು ಇತ್ತೀಚಗೆ ಬಲವಾಗಿ ಗೋಚರಿಸುತ್ತವೆ. ಇದಕ್ಕೆ ಪುಷ್ಟಿ ನೀಡುವಂತೆ ರಸಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಎನ್ ಸಿಪಿ ಮುಖ್ಯಸ್ಥ ಶರದ್ ಪವರ್ ಜತೆ ಮಾತುಕತೆ ನಡೆಸಿರುವುದು ಮತ್ತಷ್ಟು ಊಹಾಪೋಹಗಳು ಎದ್ದಿವೆ. ಶರದ್ ಪವಾರ್ ಅವರ ನಿವಾಸದಲ್ಲಿ…

ಕೊರೊನಾ ವಿರುದ್ಧದ ಹೋರಾಟಕ್ಕೆ ಯೋಗ ಆಶಾಕಿರಣ; ಮೋದಿ

ನವದೆಹಲಿ,ಜೂ,21: ಭಾರತೀಯ ಮೂಲದ ಯೋಗ ಪದ್ದತಿಯನ್ನು ಅಳವಡಿಸಿಕೊಂಡಿದ್ದು,ಇದರಿಂದ ಕೊರೊನಾ ಕಾಲದ ಈ ಸಮಯದಲ್ಲಿ ಯೋಗಾಭ್ಯಾಸ ಒಂದು ಉತ್ತಮ ಅಂಶವಾಗಿದೆ ಇದರಿಂದ ದೇಹ ಮತ್ತು ಮನಸ್ಸು ಮತ್ತಷ್ಟು ದೃಡವಾಗುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು,ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು ಎನ್ನುವ ಮೂಲಕ ಮಾತು ಆರಂಭಿಸಿ, ಕೊರೊನಾ ನಡುವೆ ಯೋಗ ಆಶಾಕಿರಣವಾಗಿದೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಯೋಗದಿಂದ ಬಲ ಸಿಕ್ಕಿದೆ ಎಂದು ತಿಳಿಸಿದ್ದಾರೆ. ವಿಶ್ವದ ಮೂಲೆಮೂಲೆಯಲ್ಲಿ ಲಕ್ಷಾಂತರ ಜನರು…

ಶೈಲಜಾ ಟೀಚರ್ ಗೆ ಯುರೋಪಿಯನ್ ಓಪನ್ ಸೊಸೈಟಿ ಪ್ರಶಸ್ತಿ

ತಿರುವನಂತಪುರಂ,ಜೂ,29: ಕೇರಳ ಸರ್ಕಾರದ ಮಾಜಿ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಅವರು ಸಮುದಾಯ ಆರೋಗ್ಯ ಸೇವೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪ್ರತಿಷ್ಟಿತ ಸೆಂಟ್ರಲ್ ಯುರೋಪಿಯನ್ ಯೂನಿವರ್ಸಿಟಿಯ ‘ಓಪನ್ ಸೊಸೈಟಿ‘ ಪ್ರಶಸ್ತಿ ದೊರಕಿದೆ. ಇತ್ತೀಚೆಗೆ ವರ್ಚುವಲ್ ಮೂಲಕ ನಡೆದ ಯೂನಿವರ್ಸಿಟಿಯ 30 ನೇ ಪದವಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ. 1994 ರಲ್ಲಿ ತತ್ವಶಾಸ್ತ್ರಜ್ಞ ಸರ್ ಕಾರ್ಲ್ ಪಾಪರ್ ಅವರಿಗೆ ‘ಓಪನ್ ಸೊಸೈಟಿ‘ಯ ಮೊದಲ ಪ್ರಶಸ್ತಿ ಸಂದಿತ್ತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿವಿಯ ಅಧ್ಯಕ್ಷ ಮಿಚೆಲ್…

ಅಪ್ಪಂದಿರ ದಿನವನ್ನು ವಿಶೇಷವಾಗಿ ಸಂಭ್ರಿಸಿದ ಗೂಗಲ್

ಇಂದು ಅಪ್ಪಂದಿರ ದಿನಾಚರಣೆ ಈ ಸಂದರ್ಭದಲ್ಲಿ ಗೂಬಲ್ ಇದನ್ನು ವಿಶೇಷವಾಗಿ ಸಂಭ್ರಮಿಸಿದೆ. ಬಣ್ಣ ಬಣ್ಣದ ಅಲಂಕಾರದ ಜತೆ ಡೂಡಲ್ ಮೂಲಕ ಅಪ್ಪಂದಿರ ದಿನದ ಶುಭಾಶಯ ತಿಳಿಸಿದೆ. ಡೂಡಲ್‌ನೊಂದಿಗೆ ವಿಶೇಷವಾಗಿ ‘ಅಪ್ಪಂದಿರ ದಿನದ ಶುಭಾಶಯಗಳು’! ಎಂದು ಸಂದೇಶ ಸಾರುವ ಮೂಲಕ ಗೂಗಲ್ ಶುಭಕೋರಿದೆ. ಅನಿಮೇಟೆಡ್? ಡೂಡಲ್ ರಚಿಸುವ ಮೂಲಕ ಗೂಗಲ್ ಶುಭಾಶಯ ತಿಳಿಸಿದೆ ಕೊರೊನಾ ವೈರಸ್ ಹಾವಳಿಯಿಂದಾಗಿ ಕಳೆದ ವರ್ಷದಂತೆಯೇ ಈ ವರ್ಷವೂ ಕೂಡಾ ಹೆಚ್ಚು ವಿಜೃಂಭಣೆಯಿಂದ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತಿಲ್ಲ. ಹೆಚ್ಚಿನ ಜನರು ಗ್ರೀಟಿಂಗ್ ಕೊಡುವ ಮೂಲಕ…

ಅತ್ಯಾಚಾರ ಆರೋಪ;ತಮಿಳುನಾಡು ಮಾಜಿ ಸಚಿವ ಮಣಿಕಂದನ್ ಬಂಧನ

ಬೆಂಗಳೂರು,ಜೂ.೨೦: ಎಐಡಿಎಂಕೆ ಪಕ್ಷದ ಮಾಜಿ ಸಚಿವ ಮಣಿಕಂದನ್ ಅವರನ್ನು ಅತ್ಯಾಚಾರ ಆರೋಪದ ಮೇಲೆ ಇಂದು ಬೆಂಗಳೂರಿನಲ್ಲಿ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಆರೋಪ ಹೊತ್ತಿರುವ ಮಾಜಿ ಸಚಿವ ಮಣಿಕಂದನ್ ತಲೆಮರೆಸಿಕೊಂಡಿದ್ದರು ಎನ್ನಲಾಗಿದ್ದು ತಮಿಳುನಾಡು ಪೊಲಿಸರು ಅವರ ಬಂಧನಕ್ಕೆ ಬಲೆ ಬೀಸಿದ್ದರು ಇಂದು ಬೆಂಗಳೂರಿನಲ್ಲಿ ಇರುವುದು ಖಾತ್ರಿಯಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿದ್ದಾರೆ ಆರೋಪಿ ಮಣಿಕಂದನ್ ಮಲೇಷ್ಯಾ ಮೂಲದ ನಟಿ ಮೇಲೆ ಅತ್ಯಾಚಾರ ಎಸಗಿದ್ದರು ಎಂಬ ಆರೋಪ ಕೇಳಿ ಬಂದಿದೆ. ೨೦೧೭ರಲ್ಲಿ ಮಣಿಕಂದನ್ ಐಟಿ ಸಚಿವರಾಗಿದ್ದಾಗ ನಟಿಯ ಪರಿಚಯವಾಗಿತ್ತು. ಮಲೇಷಿಯಾದಲ್ಲಿ…

೭ನೇ ಅಂತರಾಷ್ಟ್ರೀಯ ಯೋಗದಿನ ನಾಳೆ-ಮೋದಿ ಭಾಷಣ

ನವದೆಹಲಿ,ಜೂ,೨೦: ಅಂತರಾಷ್ಟ್ರೀಯ ಯೋಗ ದಿನದ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಳಿಗ್ಗೆ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಏಳನೇ ಅಂತರಾಷ್ಟ್ರೀಯ ಯೋಗದಿನವಾಗಿದ್ದು ಕೋವಿಡ್-೧೯ ಹಿನ್ನೆಯಲ್ಲಿಯಲ್ಲಿ ಯೋಗದಿನದ ಪ್ರಧಾನ ಸಮಾರಂಭ ಬೆಳಿಗ್ಗೆ ೬.೧೫ಕ್ಕೆ ಆರಂಭವಾಗಲಿದ್ದು ಈ ಸಮಾರಂಭದಲ್ಲಿ ಮೋದಿ ಭಾಷಣ ಮಾಡಲಿದ್ದು ಇದರ ನೇರಪ್ರಸಾರವನ್ನು ದೂರದರ್ಶನ ತನ್ನ ಎಲ್ಲಾ ವಾಹಿನಿಗಳಲ್ಲಿ ಪ್ರಸಾರ ಮಾಡಲಿದೆ ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಸಹ ಭಾಷಣ ಮಾಡಲಿದ್ದಾರೆ. ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯಲ್ಲಿ ನಡೆಯಲಿರುವ…

ಶೀಘ್ರ ಕೇಂದ್ರ ಸಚಿವ ಸಂಪುಟ ವಿಸ್ತರಣೆ?

ನವದೆಹಲಿ,ಜೂ,೧೫: ಕೇಂದ್ರ ಸಚಿವ ಸಂಪುಟ ಸದ್ಯದಲ್ಲೇ ವಿಸ್ತರಣೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ .ಹೀಗಾಗಿಯೇ ಮೋದಿ ನಿರಂತರ ಸಭೆಗಳನ್ನು ಮಾಡುತ್ತಿದ್ದಾರೆ ಇದೇ ವೇಳೆ ರಾಜ್ಯ ಬಿಜೆಪಿ ಸಂಸದರು ಕೂಡ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಲಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿ ಖಾಲಿ ಇರುವ ಮತ್ತು ಕೆಲವರ ಖಾತೆಗಳನ್ನು ಬದಲಾವನೆ ಮಾಡಲಾಗುತ್ತಿದೆ ಹೀಗಾಗಿ ಯಾರಿಗೆ ಯಾವ ಖಾತೆ ದೊರೆಯುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಕೇಂದ್ರದ ಕೆಲವು ಸಚಿವರು ರಾಜೀನಾಮೆ, ನಿಧನದಿಂದ ಕೇಂದ್ರದ ಸಚಿವ ಸ್ಥಾನಗಳು ತೆರವಾಗಿವೆ. ರಾಮ್ ವಿಲಾಸ್ ಪಾಸ್ವಾನ್,…

ಕಾಂಗ್ರೆಸ್ ಪಕ್ಷದಲ್ಲಿ ವ್ಯಾಪಕ ಸುಧಾರಣೆ ಅಗತ್ಯ-ಕಪಿಲ್ ಸಿಬಲ್

ನವದೆಹಲಿ,ಜೂ,೧೩:ಕಾಂಗ್ರೆಸ್ ಪಕ್ಷ ಜಡತ್ವವನ್ನು ಬಿಟ್ಟು ಸಕ್ರಿಯ ರಾಜಕಾರಣದತ್ತ ಮುಖಮಾಡಬೇಕು ಮತ್ತು ಸಂಘಟನಾ ವಲಯದಲ್ಲಿ ವ್ಯಾಪಕ ಸುಧಾರಣೆಗಳ ಅಗತ್ಯವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ. ಭಾರತಕ್ಕೆ ಪುನಃ ಚೇತರಿಸಿಕೊಂಡ ಕಾಂಗ್ರೆಸ್ ಪಕ್ಷದ ಅಗತ್ಯವಿದೆ. ಅದಕ್ಕಾಗಿ ಜಡತ್ವವನ್ನು ಬಿಟ್ಟು ಸಕ್ರಿಯವಾಗಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುವ ಮನಸ್ಥಿತಿ ಇದೆ ಎಂದು ಇದು ಸಂಭವಿಸಬೇಕಾದರೆ ಕೇಂದ್ರ ಹಾಗೂ ರಾಜ್ಯ ಸಂಘಟನಾ ವಲಯದಲ್ಲಿ ವ್ಯಾಪಕ ಸುಧಾರಣೆಗಳನ್ನು ಮಾಡಬೇಕಿದೆ. ಈ ಮೂಲಕ ಪಕ್ಷವು ಸಂಘಟನಾ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಸಾಬೀತು ಮಾಡಬೇಕು ಎಂದಿದ್ದಾರೆ…

ಜಿ೭ ಶೃಂಗಸಭೆಯಲ್ಲಿ ಮೋದಿ ಪ್ರಸ್ತಾವನೆಗೆ ಒಪ್ಪಿಗೆ

ನವದೆಹಲಿ, ಜೂ,೧೩: ಜಿ-೭ ಶೃಂಗ ಸಭೆಯಲ್ಲಿ ಪಾಲೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಲ್ಲಿಸಿರುವ ಪ್ರಸ್ತಾವನೆಗೆ ಹಲವಾರು ಮುಖಂಡರು ಒಪ್ಪಿಕೊಂಡಿದ್ದು,ಇದಕ್ಕೆ ದಕ್ಷಿಣ ಆಫ್ರಿಕ ಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಜೂನ್ ೧೨ ಮತ್ತು ೧೩ ರಂದು ವರ್ಚುವಲ್ ಮಾದರಿಯಲ್ಲಿ ನಡೆಯಲಿರುವ ಜಿ.೭ ಶೃಂಗದ ಬಾಹ್ಯ ಅಧಿವೇಶನ ಹೈಬ್ರೀಡ್ ಮಾದರಿಯಲ್ಲಿ ಆಯೋಜನೆಗೊಂಡಿದೆ. ವಿಶ್ವ ನಾಯಕರು ಕೋವಿಡ್ ೧೯ ವಿರುದ್ಧ ಹೋರಾಡುತ್ತಿರುವ ರಾಷ್ಟ್ರಗಳಿಗೆ ಲಸಿಕೆಯ ೧೦೦ ಕೋಟಿ ಡೋಸ್‌ಗಳನ್ನು ಒದಗಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಯುಕೆ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್…

ಮೋದಿಗೆ ಭಾರತೀಯರಿಗಿಂತ ರಾಜಕಾರಣವೇ ಮುಖ್ಯ;ಪ್ರಿಯಾಂಕ ಗಾಂಧಿ

ನವದೆಹಲಿ,ಜೂ,12: ಪ್ರಧಾನಿ ಮೋದಿ ಅವರಿಗೆ ಭಾರತೀಯರಿಗಿಂತ ಅವರಿಗೆ ರಸಜಕಾತಣವೇ ಮುಖ್ಯ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ. ‘ಕೊರೊನಾ ಸಂದರ್ಭದಲ್ಲಿ ಹಿಂದೆ ಸರಿದು ಕೆಟ್ಟದ್ದು ಹಾದುಹೋಗಲು ಕಾಯುತ್ತಿದ್ದರು. ಭಾರತದ ಪ್ರಧಾನಿ ಹೇಡಿಯಂತೆ ವರ್ತಿಸಿದ್ದಾರೆ. ಅವರು ನಮ್ಮ ದೇಶವನ್ನು ನಿರಾಸೆಗೊಳಿಸಿದ್ದಾರೆ ’ ಎಂದು ಪ್ರಿಯಾಂಕಾ ಗಾಂಧಿ ತಮ್ಮ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘ಭಾರತೀಯರು ಅವರಿಗೆ ಮುಖ್ಯವಲ್ಲ. ರಾಜಕೀಯ ಮುಖ್ಯ. ಸತ್ಯದ ಬಗ್ಗೆ ಅವರಿಗೆ ಕಾಳಜಿ ಇಲ್ಲ, ಅಪಪ್ರಚಾರ ಮಾಡುತ್ತಾರೆ, ’ಜನರು…

ಶಶಿಕಲಾಗೆ ಜೈಲಿನಲ್ಲಿ ವಿಶೇಷ ಅತಿಥ್ಯ: ೨ತಿಂಗಳಲ್ಲಿ ವರದಿ ಸಲ್ಲಿಸಲು ಹೈ ಗಡವು

ಬೆಂಗಳೂರು,ಜೂ,೧೧: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತ ಆಪ್ತೆ ಶಶಿಕಲಾಗೆ ಜೈಲಲ್ಲಿ ನೀಡಲಾಗುತ್ತಿದ್ದ ವಿಶೇಷ ಆತಿಥ್ಯ ವಿಚಾರಕ್ಕೆ ಸಂಬಂಧಿಸಿದಂತೆ ಎಸಿಬಿ ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಇನ್ನೂ ಎರಡು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ವಿಕೆ ಶಶಿಕಲಾಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿತ್ತು. ಜೈಲು ವರಿಷ್ಠಾಧಿಕಾರಿಗಳು ಲಂಚ ಪಡೆದು ಜೈಲಿನಲ್ಲಿ ಆಕೆಗೆ ವಿಶೇಷ ಸೌಲಭ್ಯಗಳನ್ನು ಒದಗಿಸಿದ್ದರು ಎಂಬ ಗಂಭೀರ ಆರೋಪ ವ್ಯಾಪಕ ಸದ್ದು ಮಾಡಿತ್ತು.…

ಎರಡು ವರ್ಷ ಸಾಧನೆ;ಸಚಿವರ ಜೊತೆ ಮೋದಿ ವೈಯಕ್ತಿಕ ಸಭೆ?

ನವದೆಹಲಿ,ಜೂ,೧೧:ಕೇಂದ್ರ ಸರ್ಕಾರದ ಎರಡು ವರ್ಷದಲ್ಲಿ ಆಗಿರುವ ಕೆಲಸ ಕುರಿತಂತೆ ಪ್ರಗತಿ ಪರಿಶೀಲನೆ ಮಾಡುತ್ತಿರುವ ಪ್ರಧಾನಿ ಮೋದಿ ಅವರು ಕೇಂದ್ರ ಸಚಿವರ ಜೊತೆ ವೈಯಕ್ತಿಕವಾಗಿ ಸಭೆ ನಡೆಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ ಈ ವೇಳೆ ತಮ್ಮ ವೈಯಕ್ತಿಕ ವರ್ಚಸ್ಸು ಮತ್ತು ಮುಂದಿನ ದಿನಗಳ ಸರ್ಕಾರದ ಯೋಜನೆಗಳ ಕುರಿತಂತೆಯೂ ಈ ಸಭೆಯಲ್ಲಿ ಚರ್ಚಿಸಲಾಗುತ್ತಿದೆ ಎನ್ನಲಾಗಿದೆ. ದೆಹಲಿಯ ೭ ಲೋಕ ಕಲ್ಯಾಣ ಮಾರ್ಗ್‌ನಲ್ಲಿರುವ ಪ್ರಧಾನಮಂತ್ರಿಗಳ ಅಧಿಕೃತ ನಿವಾಸದಲ್ಲಿ ಈ ಸಭೆ ನಡೆಯುತ್ತಿದ್ದು, ಈಗಾಗಲೇ ಇಂತಹ ಅಂತಹ ಮೂರು…

ಪೆಟ್ರೋಲ್ ಬೆಲೆಯಲ್ಲಿ ಮತ್ತೇ ಏರಿಕೆ

ನವದೆಹಲಿ,ಜೂ,೧೧: ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಈ ಸಂದರ್ಭದಲ್ಲೂ ಮತ್ತೇ ಇಮದು ತೈಲ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ದರ ೨೯ ಪೈಸೆ ಮತ್ತು ಡೀಸೆಲ್ ದರ ೨೯ ಪೈಸೆ ಏರಿಕೆ ಮಾಡಿವೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು (ಒಎಂಸಿ) ಶುಕ್ರವಾರ ದೇಶಾದ್ಯಂತ ಇಂಧನ ದರವನ್ನು ಮತ್ತೊಮ್ಮೆ ಹೆಚ್ಚಿಸಿದ್ದು, ಈ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮೂಲಗಳ ಪ್ರಕಾರ ಪ್ರತೀ…

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಇಳಿಕೆ

ನವದೆಹಲಿ, ಜೂ, ೧೧: ಕೊರೊನಾ ವೈರಸ್ ಭಾರತದಲ್ಲಿ ದಿನೇ ದಿನೇ ಕಡಿಮೆಗೊಳ್ಳುತ್ತಿದೆ ಕಳೆದ ೨೪ ಗಂಟೆಯಲ್ಲಿ ಅದರ ಸಂಖ್ಯೆ ಮತ್ತಷ್ಟು ಇಳಿಮುಖವಾಗಿದ್ದು ಸದ್ಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ೨೪ ಗಂಟೆಯಲ್ಲಿ ೬,೧೦೦ಕ್ಕೂ ಹೆಚ್ಚಾಗಿದ್ದ ಸಾವಿನ ಸಂಖ್ಯೆ ೩,೪೦೩ಕ್ಕೆ ತಗ್ಗಿದೆ. ಒಂದೇ ದಿನ ೯೧,೭೦೨ ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ ೧,೩೪,೫೮೦ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಭಾರತದಲ್ಲಿ ಒಟ್ಟು ೨,೯೨,೭೪,೮೨೩ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ…

ಕೋವಿಡ್ ಮೂರನೆ ಅಲೆ; ಮಾರ್ಗಸೂಚಿ ಬಿಡುಗಡೆ

ನವದೆಹಲಿ,ಜೂ,10:ದೇಶದಲ್ಲಿ ‌ನಿಧಾನಗತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ.ಈಗ ಮೂರನೇ ಅಲೆಯ ಕುರಿತು ಸರ್ಕಾರ ಪೂರ್ವ ಸಿದ್ದತೆಗಳ ಬಗ್ಗೆ ತಯಾರಿ ನಡೆಸುತ್ತಿದೆ. ಮೂರನೇ ಅಲೆಯಲ್ಲಿ ವೈರಸ್ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಕೆಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. “ಮಕ್ಕಳಲ್ಲಿ ಸೋಂಕು ಗಂಭೀರ ಸ್ವರೂಪ ಪಡೆಯುವುದಿಲ್ಲ. ಇದಕ್ಕೆ ಯಾವುದೇ ಪುರಾವೆ ಸದ್ಯಕ್ಕೆ ದೊರೆತಿಲ್ಲ” ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಈಗಾಗಲೇ ಹೇಳಿದ್ದಾರೆ. ಆದರೂ ಮುಂಜಾಗ್ರತಾ ಕ್ರಮವಾಗಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕೊರೊನಾ ಬಂದರೆ ಏನು…

ಕಟ್ಟಡ ಕುಸಿದು ಮುಂಬೈನಲ್ಲಿ ೧೧ ಸಾವು

ಮುಂಬೈ, ಜೂ, ೧೦; ನಾಲ್ಕು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ೧೧ ಜನ ಮೃತಪಟ್ಟ ಘಟನೆ ಮುಂಬೈ ನಗರದ ಪಶ್ಚಿಮ ಭಾಗದ ಮಲಾಡ್ ಪ್ರದೇಶದಲ್ಲಿ ಸಂಭಿವಿಸಿದೆ ನಾಲ್ಕು ಅಂತಸ್ತಿನ ಕಟ್ಟಡ ಬುಧವಾರ ತಡರಾತ್ರಿ ಕುಸಿದು ಮತ್ತೊಂದು ಕಟ್ಟಡದ ಮೇಲೆ ಬಿದ್ದಿದೆ. ಇದುವರೆಗೂ ೧೮ ಜನರನ್ನು ರಕ್ಷಣೆ ಮಾಡಲಾಗಿದ್ದು, ೬ ಮಕ್ಕಳು ಸೇರಿದಂತೆ ೧೧ ಜನರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಅವಶೇಗಳಡಿ ಸಿಲುಕಿದ ಜನರಿಗಾಗಿ ಹುಡುಕಾಟವನ್ನು ನಡೆಸಲಾಗುತ್ತಿದೆ. ಘಟನೆಯಲ್ಲಿ ೬ ಜನರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲು…

ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಮತ್ತಷ್ಟು ಇಳಿಕೆ

ನವದೆಹಲಿ, ಜೂ 08:ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಪ್ರಕರಣಗಳು ಇಳಿಕೆಯಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 86,498 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,89,96,473ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 2123 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 1,82,282 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ದೇಶದಲ್ಲಿ ಈವರೆಗೆ 23,61,98,726 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.

ಲಸಿಕೆ ವಿಳಂಬ ನೀತಿಯಿಂದ ಹಲವರ ಸಾವಿಗೆ ಕಾರಣರಾದ ಮೋದಿ-ಮಮತಾ ಟೀಕೆ

ಕೋಲ್ಕತ್ತ,ಜೂ,೦೭: ಮೋದಿಯವರು ಈಗ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತದೆಎಂಬ ನಿರ್ಧಾರವನ್ನು ಈ ಹಿಮದೆಯೇ ತಗೆದುಕೊಂಡಿದದರೆ ಜಿವ ಉಳಿಯುತ್ತಿತ್ತು ಇದರಿಂದ ಅನೇಕರ ಸಾವಿಗೆ ಕಾರನವಾಗಿದೆ ಎಂದು ಮೋದಿ ಹೇಳಿಕೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದರೆ. ಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ನಮ್ಮ ದೀರ್ಘಕಾಲದ ಬೇಡಿಕೆ ಬಗ್ಗೆ ಫೆಬ್ರುವರಿ ೨೧ರಂದು ಮತ್ತು ಹಲವು ಬಾರಿ ಪ್ರಧಾನಿಗೆ ಪತ್ರ ಬರೆದಿದ್ದೆ. ಇದನ್ನು ಕೇಳಲು ಅವರಿಗೆ ನಾಲ್ಕು ತಿಂಗಳು ಬೇಕಾಯಿತು. ಅಂತಿಮವಾಗಿ, ಬಹಳ ಒತ್ತಡದ ಬಂದ ಮೇಲೆ ಅವರು…

1 4 5 6 7 8 9
error: Content is protected !!