ರಾಜ್ಯ
ಶರಣ ಜೀವನ ಮೌಲ್ಯ ಅಳವಡಿಸಿಕೊಳ್ಳಲು ಕರೆ
ಶರಣ ಜೀವನ ಮೌಲ್ಯ ಅಳವಡಿಸಿಕೊಳ್ಳಲು ಕರೆ ವರದಿ- ರುದ್ರಮೂರ್ತಿ ಎಂ.ಜೆ. ಚಿತ್ರದುರ್ಗ,ಜ,೧೯- ಯಾವುದು ಚಲಿಸದೆ ನಿಶ್ಚಲವಾಗಿರುತ್ತದೆಯೋ ಅದು ಕೊಳೆಯುತ್ತದೆ. ಆದರೆ ಬದುಕು ಚಲನಶೀಲವಾಗಿರಬೇಕು ಎಂದರೆ ಅದಕ್ಕೆ ವಚನಕಾರರು ಹಾಕಿಕೊಟ್ಟ ನೈತಿಕ ಮೌಲ್ಯಗಳಳೇ ಸಾಕ್ಷಿಯಾಗಿವೆ ಎಂದು ಸಾಹಿತಿ ಶ್ರೀಮತಿ ತಾರಿಣಿ ಶುಭಾದಾಯಿನಿ ಅಭಿಪ್ರಾಯ ಪಟ್ಟರು. ೧೩ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಶರಣ ಸಾಹಿತ್ಯದತ್ತ ಯುವಜನತೆ ವಿಚಾರ ಕುರಿತು ಚಿಂತನ ಗೋಷ್ಠಿಯ ಆಶಯ ನುಡಿಗಳನ್ನಾಡಿದ ಅವರು ಬದುಕಿನ ಬಗೆಗಿನ ವಿನಯ ಜೀವನದ ಮೌಲ್ಯಗಳ ಬಗೆಗಿನ ವಿನಯತೆಯನ್ನು ವಚನ…


















