ಜಿಲ್ಲೆ
ಉಳ್ಳವರು ಸಂತ್ರಸ್ತರಿಗೆ ನೆರವಾಗಿ: ಆರೂಢಭಾರತೀ ಸ್ವಾಮೀಜಿ
ಬೆಂಗಳೂರು,ಜೂ,08:ಯಾವುದೂ ಯಾರಿಗೂ ಶಾಶ್ವತವಲ್ಲ. ನಿನ್ನೆ ಇನ್ನಾರದ್ದೋ ಆಗಿದ್ದು ಇಂದು ನಮ್ಮದಾಗಿದೆ. ನಾಳೆ ಯಾರ ಪಾಲೆಂಬುದು ತಿಳಿದಿಲ್ಲ. ನಮ್ಮ ಲೆಕ್ಕಾಚಾರಗಳು ಯಥಾವತ್ತಾಗಿ ನಡೆಯುವುದಿಲ್ಲ ಎಂಬುದಕ್ಕೆ ಕೊರೊನಾ ದುಷ್ಕಾಲವೇ ಸಾಕ್ಷಿ. ಇಂದು ನಾವು ಚೆನ್ನಾಗಿರಬಹುದು. ನಾಳೆ ಏನಿದೆಯೋ? ಚೆನ್ನಾಗಿರುವಾಗಲೇ ನಮ್ಮಲ್ಲಿರುವುದನ್ನು ಇಲ್ಲದವರಿಗೆ ನೀಡೋಣ. ಇಂದು ಕೈ ಒಡ್ಡಿ ಪಡೆಯುವವನು ನಾಳೆ ನಮಗೇ ಕೈ ಎತ್ತಿ ಕೊಡುವವನಾದಾನು! ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು. ಅವರು ಇಂದು ಸಿದ್ಧಾರೂಢ ಮಿಷನ್, ಸಹಬಾಳ್ವೆ…