ಬೆಂಗಳೂರು
ಹಸಿದವರ ನೆರವಿಗೆ ಧಾವಿಸಿ :ಡಾ ಆರೂಢಭಾರತೀ ಸ್ವಾಮೀಜಿ.
ಬೆಂಗಳೂರು,ಜೂ,04:ಕೊರೊನಾ ಮಹಾಮಾರಿ ಇಡೀ ಜನಜೀವನವನ್ನೇ ತಲ್ಲಣಗೊಳಿಸಿದೆ. ಜನತೆ ಸ್ವಾರ್ಥ ತ್ಯಜಿಸಿ ಮಾನವೀಯತೆ ಮೆರೆಯಬೇಕು. ಹಸಿದವರಿಗೆ ಅನ್ನದಾನದಂಥ ನೆರವಿಗೆ ಧಾವಿಸಬೇಕು ” ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು. ಅವರು ಇಂದು ಕೆಂಗೇರಿಯ ಕೋಟೆ ಬೀದಿಯಲ್ಲಿ ದೇಶಭಕ್ತಿ ಫೌಂಡೇಶನ್, ಕಲಾ ಕದಂಬ ಆರ್ಟ್ ಸೆಂಟರ್ ಹಾಗೂ ಒಳಿತಿಗಾಗಿ ಮಿಡಿಯುವ ಮನಸುಗಳ ತಂಡ ಇವುಗಳ ಸಹಯೋಗದಲ್ಲಿ ನಡೆದ ಅನ್ನಗಂಗಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಕೆಂಗೇರಿಯಲ್ಲಿ ಈ ಯೋಜನೆ ಕಳೆದ ಹದಿನೈದು…