Browsing: ರಾಜಕೀಯ

ರಾಜಕೀಯ

ನಾಳೆ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ: ವಿಜಯೇಂದ್ರ

ನಾಳೆ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ: ವಿಜಯೇಂದ್ರ By ಕೆಂಧೂಳಿ ಬೆಂಗಳೂರು,ಜ,20-ನಾಳೆ (ಜ.21) ಸಂಜೆ 7 ಗಂಟೆಗೆ ಬಿಜೆಪಿ ರಾಜ್ಯದ ಕೋರ್ ಕಮಿಟಿ ಸಭೆ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಉಸ್ತುವಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರವಾಲ್, ತಮಿಳುನಾಡಿನಿಂದ ಪೊನ್ನು ರಾಧಾಕೃಷ್ಣನ್, ರಾಜ್ಯದ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಅವರು ನಾಳೆ ಬೆಂಗಳೂರಿಗೆ ಬರಲಿದ್ದಾರೆ.…

ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ, ಪಕ್ಷಕ್ಕಾಗಿ ತ್ಯಾಗ ಮಾಡಿಕೊಂಡೇ ಬಂದಿದ್ದೇನೆ- ಡಿಕೆಶಿ

ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ, ಪಕ್ಷಕ್ಕಾಗಿ ತ್ಯಾಗ ಮಾಡಿಕೊಂಡೇ ಬಂದಿದ್ದೇನೆ- ಡಿಕೆಶಿ ಬೆಳಗಾವಿ, ಜ.20-“ಪಕ್ಷವನ್ನು ಉಳಿಸುವುದು, ಸರ್ಕಾರವನ್ನು ಭದ್ರವಾಗಿಡುವುದೇ ನನ್ನ ಕರ್ತವ್ಯ. ಇದರ ಹೊರತಾಗಿ ನನಗೆ ಬೇರೆ ಯಾವುದೇ ಕರ್ತವ್ಯಗಳಿಲ್ಲ. ಬೇರೆ ಯಾವುದಕ್ಕೂ ನನ್ನ ಹೆಸರನ್ನು ಉಪಯೋಗಿಸಿಕೊಳ್ಳಬೇಡಿ. ನನಗೆ ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು. “ಕಾರ್ಯಕರ್ತರ ರಕ್ಷಣೆ ಮಾಡುವುದು ನನ್ನ ಮೊದಲ ಕರ್ತವ್ಯ. ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ.…

ಮುಡಾ ಕುರಿತು ಇಡಿಯವರ ಪತ್ರಿಕಾ ಪ್ರಕಟಣೆ ರಾಜಕೀಯ ಪ್ರೇರಿತ-ಸಿಎಂ

ಮುಡಾ ಕುರಿತು ಇಡಿಯವರ ಪತ್ರಿಕಾ ಪ್ರಕಟಣೆ ರಾಜಕೀಯ ಪ್ರೇರಿತ-ಸಿಎಂ ಬೆಂಗಳೂರು, ಜ,20 -ಮುಡಾ ಕುರಿತು ಇಡಿಯವರ ಪತ್ರಿಕಾ ಪ್ರಕಟಣೆ ರಾಜಕೀಯ ಪ್ರೇರಿತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಮುಡಾ ಹಗರಣದ ಬಗ್ಗೆ ಇಡಿಯವರು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ, ಇಡಿಯವರ ಪತ್ರಿಕಾ ಪ್ರಕಟಣೆಗೂ ನನಗೂ ಸಂಬಂಧವಿಲ್ಲ. ಬಿಜೆಪಿಯವರು ಈ ಪತ್ರಿಕಾ ಪ್ರಕಟಣೆಯನ್ನು ಅನಗತ್ಯವಾಗಿ ಇಡಿಯವರ ಮೂಲಕ ಬಿಡುಗಡೆ ಮಾಡಿಸಿದ್ದಾರೆ ಎಂದರು. ಹಣ ದುರುಪಯೋಗದ ಪ್ರಶ್ನೆ ಇಲ್ಲ ಮುಡಾ…

ಸಚಿವರುಗಳು ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ: ಡಿಸಿಎಂ

ಸಚಿವರುಗಳು ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ: ಡಿಸಿಎಂ ಬೆಳಗಾವಿ, ಜ.19-“ಗಾಂಧಿ ಭಾರತದ ಅಂಗವಾಗಿ ಜ.21ರಂದು ನಡೆಯಲಿರುವ ಗಾಂಧಿ ಪ್ರತಿಮೆ ಅನಾವರಣ ಹಾಗೂ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ತಯಾರಿ ನಡೆಯುತ್ತಿದ್ದು, ಸಚಿವರುಗಳು ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಬೆಳಗಾವಿಯ ಸರ್ಕಿಟ್ ಹೌಸ್, ಕಪಿಲೇಶ್ವರ ದೇವಾಲಯ ಹಾಗೂ ಫಿರೋಜ್ ಸೇಠ್ ಅವರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು. “ಜ.21ರ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು…

ಸಿಎಂ, ಕೆಪಿಸಿಸಿ ಅಧ್ಯಕ್ಷ ಎರಡೂ ಕುರ್ಚಿ ಖಾಲಿಯಿಲ್ಲ – ಜಮೀರ್ 

ಸಿಎಂ, ಕೆಪಿಸಿಸಿ ಅಧ್ಯಕ್ಷ ಎರಡೂ ಕುರ್ಚಿ ಖಾಲಿಯಿಲ್ಲ – ಜಮೀರ್  ಹುಬ್ಬಳ್ಳಿ ,ಜ,19- ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಯೂ ಖಾಲಿ ಇಲ್ಲ, ಕೆಪಿಸಿಸಿ ಅಧ್ಯಕ್ಷ ಕುರ್ಚಿಯೂ ಖಾಲಿ ಇಲ್ಲ ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಹುಬ್ಬಳ್ಳಿ ಯಲ್ಲಿ ಸುದ್ಧಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನ ದಲ್ಲಿ ಸಿದ್ದರಾಮಯ್ಯ ಅವರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಡಿಕೆ ಶಿವಕುಮಾರ್ ಕುಳಿತಿದ್ದಾರೆ. ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹಾಕಿದ ಗೆರೆ ನಾವು ದಾಟುವುದಿಲ್ಲ.…

ಟರ್ಫ್‌ಕ್ಲಬ್ ನಾಮನಿರ್ದೇಶನಕ್ಕೆ ಕಿಕ್‌ಬ್ಯಾಕ್ ಆರೋಪ-ಸಿಎಂಗೆ ಕ್ಲೀನ್‌ಚಿಟ್ ನೀಡಿದ ಲೋಕಾಯುಕ್ತ

ಟರ್ಫ್‌ಕ್ಲಬ್ ನಾಮನಿರ್ದೇಶನಕ್ಕೆ ಕಿಕ್‌ಬ್ಯಾಕ್ ಆರೋಪ-ಸಿಎಂಗೆ ಕ್ಲೀನ್‌ಚಿಟ್ ನೀಡಿದ ಲೋಕಾಯುಕ್ತ ಬೆಂಗಳೂರು,ಜ,೧೯- ಟರ್ಫ್‌ಕ್ಲಬ್ ವ್ಯವಸ್ಥಾಪಕ ಸಮಿತಿಯ ಸ್ಪೀವರ್ಡ್ ಹುದ್ದೆಗೆ ತಮ್ಮ ಆಪ್ತರನ್ನು ನೇಮಕ ಮಾಡಲಾಗಿದೆ ಇದಕ್ಕಾಗಿ ೧.೩೦ ಕೋಟಿ ಕಿಕ್‌ಬ್ಯಾಕ್ ಪಡೆದಿದ್ದಾರೆ ಎನ್ನುವ ಆರೋಪದ ಪ್ರಕರಣ ಕುರಿತು ಲೋಕಾಯುಕ್ತ ಪೊಲೀಸರು ನಡೆಸಿದ ತನಿಖೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣದ ತನಿಖೆ ಪೂರ್ಣಗೊಳಿಸಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ’ಬಿ’ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯ ಅಂಗೀಕರಿಸಿದೆ. ’ಸಿಎಂ ಸಿದ್ದರಾಮಯ್ಯ ಅವರು ೧.೩೦ ಕೋಟಿ…

ಸುವರ್ಣಸೌಧ ಗಾಂಧಿ ಪ್ರತಿಮೆ ಅನಾವರಣ: ಹೋರಾಟಗಾರರಿಗೂ ಆಹ್ವಾನ: ಡಿಸಿಎಂ 

ಸುವರ್ಣಸೌಧ ಗಾಂಧಿ ಪ್ರತಿಮೆ ಅನಾವರಣ: ಹೋರಾಟಗಾರರಿಗೂ ಆಹ್ವಾನ: ಡಿಸಿಎಂ  ಬೆಳಗಾವಿ, ಜ.18-“ಸುವರ್ಣಸೌಧ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಎಲ್ಲಾ ಪಕ್ಷದ ಶಾಸಕರ ಜತೆಗೆ ಸ್ವಾತಂತ್ರ್ಯ ಹೋರಾಟಗಾರರಿಗೂ ಆಹ್ವಾನ ನೀಡಲಾಗುವುದು. ಇದರ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಬೆಳಗಾವಿಯ ಸುವರ್ಣಸೌಧ ಗಾಂಧಿ ಪ್ರತಿಮೆ ಬಳಿ ಕಾರ್ಯಕ್ರಮ ನಡೆಯುವ ಸ್ಥಳ ಪರಿಶೀಲನೆ ನಡೆಸಿದ ಶಿವಕುಮಾರ್ ಅವರು ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. “ಇದು ಸರ್ಕಾರಿ ಕಾರ್ಯಕ್ರಮವಾಗಿದ್ದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಲೋಕಸಭಾ ವಿರೋಧ ಪಕ್ಷದ…

ಮುಡಾ ಹಗರಣ- ಸಿದ್ದು ರಾಜೀನಾಮೆಗೆ ಹೆಚ್ಚಿದ ಒತ್ತಡ

ಮುಡಾ ಹಗರಣ- ಸಿದ್ದು ರಾಜೀನಾಮೆಗೆ ಹೆಚ್ಚಿದ ಒತ್ತಡ ಬೆಂಗಳೂರು, ಜ,18-ಮುಡಾ ಪ್ರಕರಣ ಕುರಿತ ಜಾರಿ ಮತ್ತು ನಿರ್ದೇಶನಾಲಯ ( ಇಡಿ) ಹಗರಣ ನಡೆದಿರುವುದು ನಿಜ ಎಂದು ಪ್ರಕಟಣೆಯಲ್ಲಿ ತಿಳಿಸಿರುವ ಬೆನ್ನಲ್ಲೇ ಪ್ರತಿಪಕ್ಷದವನಾಯಕರು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆವೊತ್ತಾಯಿಸಿದ್ದಾರೆ. ಮುಡಾ ಹಗರಣದಲ್ಲಿ ತಮ್ಮ ಪಾತ್ರ ಇಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯ ಇಡಿ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು ಬಹುಶಃ ಇದು ಸಿದ್ದರಾಮಯ್ಯ ಅವರಿಗೆ ಹುರುಳಾಗುವ ಸಾಧ್ಯತೆಗಳಿವೆ. ಇಡಿ ಈ ಹಗರಣ ನಿಜ ಎನ್ನುವ ಒ್ರಕಟಣೆ ಹೊರಡಿಸಿದ ಬೆನ್ನಲ್ಲೇ ಪ್ರತಿ ಪಕ್ಷದ…

ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಂತೆ ನಡೆಯುತ್ತೇವೆ:  ಡಿ. ಕೆ. ಶಿವಕುಮಾರ್

ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಂತೆ ನಡೆಯುತ್ತೇವೆ:  ಡಿ. ಕೆ. ಶಿವಕುಮಾರ್ *ಬೆಳಗಾವಿ,18- “ನನ್ನನ್ನೂ ಸೇರಿದಂತೆ ಎಲ್ಲರೂ ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದು, ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು. ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾವಣೆ ಬಗ್ಗೆ ಕೇಳಿದಾಗ, “ಮಲ್ಲಿಕಾರ್ಜುನ ಖರ್ಗೆ…

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ವಿರುದ್ಧ ಯತ್ನಾಳ ಸ್ಪರ್ಧೆ?

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ವಿರುದ್ಧ ಯತ್ನಾಳ ಸ್ಪರ್ಧೆ? ಬೆಂಗಳೂರು,ಜ,೧೮- ಬಿಜೆಪಿಯಲ್ಲಿ ರಾಜ್ಯಾದ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದು ಖಚಿತವಾಗಿದೆ. ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಸ್ಪರ್ಧಿಸಿ ಜಯಗಳಿಸುವ ಮೂಲಕ ರೆಬಲ್‌ನಾಯಕರ ಬಾಯಿಮುಚ್ಚಿಸಲು ತಗೆದುಕೊಂಡಿರುವ ಈ ನಿರ್ಧಾರಕ್ಕೆ ಈಗ ಮತ್ತೊಂದು ಟ್ವಿಸ್ಟ್ ದೊರೆತಿದೆ. ಒಂದು ಮೂಲದ ಪ್ರಕಾರ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಇವರ ವಿರುದ್ಧ ರೆಬಲ್ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ನಿಲ್ಲಿಸಲು ರೆಬಲ್ ನಾಯಕರು ನಿರ್ಧರಿಸಿದ್ದಾರೆ .ಈ ಕುರಿತಂತೆ ಯತ್ನಾಳ್ ಮತ್ತು ಇತರರು…

ಜಾರಕಿಹೊಳಿ ಸಹೋದರರಿಗೆ ಧನಬಲದ ದುರಹಂಕಾರದ ಆಟ..!

ಜಾರಕಿಹೊಳಿ ಸಹೋದರರಿಗೆ ಧನಬಲದ ದುರಹಂಕಾರದ ಆಟ..! ಟಿ.ಕೆ.ತ್ಯಾಗರಾಜ್,ಹಿರಿಯ ಪತ್ರಕರ್ತರು ಬೆಂಗಳೂರು, ಜ,16-ಇದು ಧನಬಲದ ದುರಹಂಕಾರವಲ್ಲದೇ ಬೇರೇನಲ್ಲ.ನಾಲ್ವರು ಜಾರಕೀಹೊಳಿ ಸಹೋದರರು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿದ್ದುಕೊಂಡು ತಮಗೆ ಬೇಕಾದಂತೆ ಆಟವಾಡುತ್ತಿದ್ದಾರೆ. ಹಿರಿಯ ಸಹೋದರ ರಮೇಶ್ ಜಾರಕೀಹೊಳಿ ಬಿಜೆಪಿ ರಾಜ್ಯಾಧ್ಯಕ್ಣ ಬಿ.ವೈ.ವಿಜಯೇಂದ್ರ ಬದಲಾವಣೆಗೆ ಆಗ್ರಹಿಸಿ ಸರ್ವಪ್ರಯತ್ನ ನಡೆಸುತ್ತಿದ್ದರೆ, ನಂತರದ ಸಹೋದರ ಸತೀಶ್ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದುಕೊಂಡೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬದಲಾವಣೆಗೆ ಆಗಿಂದಾಗ್ಗೆ ದನಿ ಎತ್ತುತ್ತಿದ್ದಾರೆ. ಓಟು ತರುವವರನ್ನು ಅಧ್ಯಕ್ಷ ಸ್ಥಾನಕ್ಕೆ ತರಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ತರುತ್ತಿದ್ದಾರೆ. ಸತೀಶ್…

ಪ್ರೀತಂ ಗೌಡ ಕಾಂಗ್ರೆಸ್ ಸೇರಲಿದ್ದಾರೆಯೇ?

ಪ್ರೀತಂ ಗೌಡ ಕಾಂಗ್ರೆಸ್ ಸೇರಲಿದ್ದಾರೆಯೇ? Publish by desk team ಬೆಂಗಳೂರು, ಜ,16- ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಾಗಿನಿಂದಲೂ ಅಸಮಾಧಾನಗೊಂಡಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಾಸನದಲ್ಲಿ ಗೌಡರ ಕುಟುಂಬದ ವಿರುದ್ಧ ರಾಜಕಾರಣ ಮಾಡುತ್ತಿದ್ದ ಅವರಿಗೆ ಈ ಮೈತ್ರಿಯಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದರು,ಸದ್ಯ ಮೈತ್ರಿಯಿಂದ ಬಿಜೆಪಿ ಹೊರಬರುವ ಸಾಧ್ಯತೆಗಳು ಕಡಿಮೆ ಎನ್ನುವ ದೃಷ್ಟಿಯಿಂದ ಅವರು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹಾಸನದ ಮಾಜಿ ಶಾಸಕ ಪ್ರೀತಂ ಗೌಡ…

ಜಾತಿಗಣತಿ ಮಂಡನೆಯನ್ನು ಸಿಎಂ ರಾಜಕೀಯ ದಾಳವಾಗಿಸಿಕೊಂಡಿದ್ದಾರೆ – ಅಶೋಕ್ ಕಿಡಿ

ಜಾತಿಗಣತಿ ಮಂಡನೆಯನ್ನು ಸಿಎಂ ರಾಜಕೀಯ ದಾಳವಾಗಿಸಿಕೊಂಡಿದ್ದಾರೆ – ಅಶೋಕ್ ಕಿಡಿ publish by desk team ಬೆಂಗಳೂರು,ಜ,೧೫-ಜಾತಿಗಣತಿ ವರದಿ ಮಂಡನೆಯನ್ನು ಸಿಎಂ ರಾಜಕೀಯ ದಾಳವಾಗಿ ಜಾತಿ ಜನಗಣತಿ ವರದಿ ಮಂಡನೆ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರು ’ಸಂಕಟ ಬಂದಾಗ ವೆಂಕಟರಮಣ’ ಎಂಬಂತೆ ತಮ್ಮ ಕುರ್ಚಿಗೆ ಕಂಟಕ ಬಂದಾಗ , ಜಾತಿ ಜನಗಣತಿ ನೆನಪಾಗುತ್ತದೆ. ವರದಿ ಅನುಷ್ಠಾನಕ್ಕೆ ಬಿಜೆಪಿ ಪಕ್ಷ…

ಸಿದ್ದು ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ವರದಿಯಿಂದ ಹಿಂದೆ ಸರಿದರೇ?

ಸಿದ್ದು ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ವರದಿಯಿಂದ ಹಿಂದೆ ಸರಿದರೇ? ತುರುವನೂರು ಮಂಜುನಾಥ ಬೆಂಗಳೂರು,ಜ,೧೫- ಜಾತಿಗಣತಿ ಬಗ್ಗೆ ಬಹುನಿರೀಕ್ಷೆ ಇಟ್ಟುಕೊಂಡವರಿಗೆ ಸಿದ್ದರಾಮಯ್ಯ ಮತ್ತೊಮ್ಮೆ ನಿರಾಸೆ ಮಾಡಿದಂತೆ ಕಾಣುತ್ತಿದೆ.ಗುರುವಾರ ನಡೆಯಲಿರುವ ಸಚಿವ ಸಂಪುಟದಲ್ಲಿ ಈ ಕುರಿತು ಸದ್ಯಕ್ಕೆ ಚರ್ಚೆ ಇಲ್ಲ ಎಂದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ರಾಜಕೀಯವಲದದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿಯೇ ಸಿದ್ದರಾಮಯ್ಯ ಈ ಸ್ಪಷ್ಟನೆ ಯಾವಕಾರಣಕ್ಕೆ ರಾಜಕಾರಣದ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿಯೇ ಎನ್ನುವ ಪ್ರಶ್ನೆಗೆಳುದಿಡೀರ್ ಮುನ್ನಲೆಗೆ ಬಂದಿವೆ,ಅಲ್ಲದೆ ಅಧಿಕಾರ ಹಂಚಿಕೆ ವಿಷಯದಲ್ಲಿಯೂ ಈ ತಂತ್ರ…

150 ಸ್ಥಾನಕ್ಕೆ ಕಾರ್ಯತಂತ್ರ ರೂಪಿಸಲಾಗಿದೆ: ಕಟೀಲ್

ಬೆಂಗಳೂರು, ಏ, 23: ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿ 150  ಸ್ಥಾನ ಪಡೆಯಲು ಕಾರ್ಯತಂತ್ರ ರೂಪಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸದ ವೇಳೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರಕಾರಗಳ ಸಾಧನೆಯ ಕುರಿತು ಜನರಿಗೆ ತಲುಪಿಸುವ ದೃಷ್ಟಿಯಿಂದ ರಾಜ್ಯದಿಂದ ಬೂತ್ ವರೆಗೆ ಸಭೆಗಳನ್ನು ನಡೆಸಲಾಗಿದೆ. ನಮ್ಮ ಸಂಘಟನೆಯನ್ನು ಸರ್ವಸ್ಪರ್ಶಿ- ಸರ್ವವ್ಯಾಪಿ ಮಾಡಲು ಶ್ರಮಿಸುತ್ತಿದ್ದೇವೆ. ಬೂತ್ ಕಮಿಟಿ,…

ಖರ್ಗೆಬಿಡುಗಡೆ ಆಡಿಯೋ ನೋಡಿಲ್ಲ ಆ ಬಗ್ಗೆಯೂ ತನಿಖೆ;ಬೊಮ್ಮಾಯಿ

ಬೆಂಗಳೂರು,ಏ,23:ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆದಿದ್ದು, ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರು ಬಿಡುಗಡೆ ಮಾಡಿರುವ ಆಡಿಯೋವನ್ನು ನಾನು ನೋಡಿಲ್ಲ. ಈ ಬಗ್ಗೆಯೂ ತನಿಖೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋದಲ್ಲಿರುವ ಸಂಭಾಷಣೆಯನ್ನು ನಾನು ಕೇಳಿಲ್ಲ. ಆಡಿಯೋ ಇಬ್ಬರ ಮಧ್ಯೆ ನಡೆದಿದ್ದರೆ ಅವರ ಅರ್ಹತೆ, ವಿಶ್ವಾಸಾರ್ಹತೆಯನ್ನೂ ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಲಾಗುವುದು ಎಂದರು.ಆಡಿಯೋ ಕೂಡ ತನಿಖೆಗೆ ಒಳಪಡುತ್ತದೆ. ಯಾರೇ ತಪ್ಪಿತಸ್ಥರಿದ್ದರೂ ಕ್ರಮಕೈಗೊಳ್ಳುತ್ತೇವೆ…

ಪಿಎಸ್ ಐ ನೇಮಕಾತಿಯಲ್ಲಿ ದೊಡ್ಡಮಟ್ಟದ ಅಕ್ರಮ,ಅಡಿಯೋ ರಿಲೀಜ್ ಮಾಡಿದ ಪ್ರಯಾಂಕ ಖರ್ಗೆ

ಕಲಬುರಗಿ,ಏ.23-:ರಾಜ್ಯದಲ್ಲಿ ಪಿಎಸ್‍ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಕೈವಾಡವಿದ್ದು, ಭ್ರಷ್ಟಾಚಾರ ತಳಮಟ್ಟದಿಂದ ಮೇಲ್ಮಟ್ಟದವರೆಗೂ ಹಬ್ಬಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಕ್ರಮಕ್ಕೆ ಸಂಬಂಧಿಸಿದ ಆಡಿಯೋ ರಿಲೀಸ್ ಮಾಡಿ ಮಾತನಾಡಿದರು. ಈ ಭ್ರಷ್ಟಾಚಾರ ಸಂಬಂಧ ಈವರೆಗೂ ಸಣ್ಣಪುಟ್ಟ ಮೀನುಗಳು ಮಾತ್ರ ಸಿಕ್ಕಿಬಿದ್ದಿವೆ. ಆದರೆ ಇದರಲ್ಲಿರುವ ದೊಡ್ಡ ದೊಡ್ಡ ತಿಮಿಂಗಲಗಳು ಸಿಕ್ಕಿಬಿದ್ದಿಲ್ಲ. ಪರೀಕ್ಷಾ ಮೇಲ್ವಿಚಾರಣೆ ನಡೆಸುತ್ತಿದ್ದ ನಾಲ್ವರು, ಮೂವರು ಮಧ್ಯವರ್ತಿಗಳು ಸೇರಿದಂತೆ ಕೆಲವೇ ಕೆಲವು ಮಂದಿಯನ್ನು ಬಂಧಿಸಲಾಗಿದೆ. ಆದರೆ…

ಪಿ.ಎಸ್.ಐ.ನೇಮಕಾತಿ ಅಕ್ರಮ ;ಆಡಿಯೋ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ-ಸಿಎಂ

ಬೆಂಗಳೂರು, ಎ,23:ಪಿಎಸ್ ಐ ನೇಮಕಾತಿಯ ಯಾವುದೇ ಬ್ಯಾಚ್ ನಲ್ಲಿ ಅಕ್ರಮವಾಗಿದ್ದರೂ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.ಶಾಸಕ ಪ್ರಿಯಾಂಕ ಖರ್ಗೆ ಬಿಡುಗಡೆ ಮಾಡಿರುವ ಆಡಿಯೋ ನಾನು ಕೇಳಿಲ್ಲ.ಯಾವ ಮೆಟೀರಿಯಲ್ ಇದ್ದರೂ ತನಿಖೆಯಾಗುತ್ತದೆ. ಇಬ್ಬರ ನಡುವೆ ಮಾತುಕತೆಯಾಗಿದೆ. ಅವರಿಬ್ಬರು ಯಾರು, ಅವರ ಅರ್ಹತೆ ಏನು ಎನ್ನುವುದು ತನಿಖೆಯಲ್ಲಿ ತಿಳಿಯುತ್ತದೆ. ಆಡಿಯೋವನ್ನು ಸಹ ತನಿಖೆಗೆ ಒಳಪಡಿಸಿ ಯಾರೇ ತಪ್ಪಿತಸ್ಥರಿದ್ದರೂ, ಯಾವುದೇ ಬ್ಯಾಚ್…

21ರಂದು ಬೃಹತ್ ರೈತಸಮಾವೇಶಕ್ಕೆ ಕೇಜ್ರಿವಾಲ್

ಬೆಂಗಳೂರು, ಏ18:ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ರವರು ಏಪ್ರಿಲ್‌ 21ರಂದು ಬೆಂಗಳೂರಿಗೆ ಆಗಮಿಸಲಿದ್ದು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ನಡೆಯಲಿರುವ ಬೃಹತ್‌ ರೈತ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಸಮಾವೇಶ ಆರಂಭವಾಗಲಿದೆ. ದೆಹಲಿ ಮಾದರಿಯಿಂದ ಪ್ರೇರಣೆ ಹೊಂದಿರುವ ರಾಜ್ಯ ರೈತ ಸಂಘವು ಸಿಎಂ ಕೇಜ್ರಿವಾಲ್‌ರವರಿಗೆ ವಿಶೇಷ ಆಹ್ವಾನ ನೀಡಿದ್ದು, ಅವರು ಆಗಮಿಸಿ ರೈತರನ್ನು…

ದೆಹಲಿ ಸಭೆನಂತರ ಸಚಿವ ಸಂಪುಟ ವಿಸ್ತರಣೆ ನಿರ್ಧಾರ; ಸಿಎಂ ಬೊಮ್ಮಾಯಿ

ಬೆಂಗಳೂರು, ಏ, 18: ಸಂಪುಟ ವಿಸ್ತರಣೆ ಬಗ್ಗೆ ಭಾ.ಜ.ಪ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನವದೆಹಲಿಯಲ್ಲಿ ಕರ್ನಾಟಕದ ಬಗ್ಗೆ ವಿಶೇಷ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಸಭೆಯ ನಂತರ ದೆಹಲಿಗೆ ಬರುವಂತೆ ನಡ್ಡಾ ಅವರು ತಮಗೆ ತಿಳಿಸಿದ್ದಾರೆ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಬಗ್ಗೆ ಅಲ್ಲಿಯೇ ತೀರ್ಮಾನವಾಗಲಿದೆ ಎಂದು ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ತಿಳಿಸಿದರು. ಕರ್ನಾಟಕದ ಬಗ್ಗೆ ದೆಹಲಿಯಲ್ಲಿ ಸಭೆ‌ ನಡೆಸುತ್ತೇವೆ. ಸಭೆಯ ನಂತರ ಮಾಹಿತಿ ನೀಡುತ್ತೇನೆ. ಆ ನಂತರ ದೆಹಲಿಗೆ ಬರುವಂತೆ ನಡ್ಡಾ ಅವರು ತಮಗೆ ಹೇಳಿದ್ದಾಗಿ…

1 5 6 7 8 9 17
error: Content is protected !!