ರಾಜ್ಯ
ನಿಡಗುಂದಿ: ಪೊಲೀಸರು ಜನಸ್ನೇಹಿಯಾಗಿ ಕೆಲಸ ನಿರ್ವಹಿಸಲು ಸಲಹೆ
ನಿಡಗುಂದಿ,ಜು,೩೧:ಜನಸಾಮಾನ್ಯರ ಕಷ್ಟ ಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಮತ್ತದು ನನ್ನ ಪ್ರಥಮ ಆದ್ಯತೆಯೂ ಹೌದು, ಆ ದಿಸೆಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸರಿಗೂ ನಿರ್ದೇಶನ ನೀಡಿದ್ದೇನೆ ಎಂದು ವಿಜಯಪುರ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ ಎಚ್.ಡಿ. ಹೇಳಿದರು. ಕೊಲ್ಹಾರ, ನಿಡಗುಂದಿ, ಆಲಮಟ್ಟಿ, ಕೂಡಗಿ, ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿ ಒಳಗೊಂಡ ನಿಡಗುಂದಿ ಆರಕ್ಷಕ ವೃತ್ತ ನಿರೀಕ್ಷಕರ (ಸಿಪಿಐ) ಕಚೇರಿ ಉದ್ಘಾಟಿಸಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಾಮಾನ್ಯ ಜನರು ನೆಮ್ಮದಿಯ ಜೀವನ ನಡೆಸುವುದಕ್ಕೆ…