ರಾಜಕೀಯ
ಅಕ್ರಮ ಗಣಿಗಾರಿಕೆ ವಿರುದ್ಧ ಸಿಬಿಐ ತನಿಖೆಗೆ ಸುಮಲತಾ ಒತ್ತಾಯ
ಮೈಸೂರು,ಜು.14: ಕೆಆರ್ ಎಸ್ ಡ್ಯಾಂ ಸುತ್ತಮುತ್ತ ತಲೆ ಎತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ದ ಸಿಬಿಐ ತನಿಖೆ ನಡೆಸುವಂತೆ ಸಂಸದೆ ಸುಮಲತಾ ಅಂಬರೀಶ್ ಒತ್ತಾಯಿಸಿದ್ದಾರೆ. ಮಾಧ್ಯಮಗಳೊಂದಿಗೆ ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಕೆಆರ್ಎಸ್ ಬಿರುಕು ಬಿಟ್ಟಿದೆ ಅಂತ ಹೇಳಿಲ್ಲ. ಬಿರುಕು ಬಿಟ್ಟಿದೆಯಾ ಅಂತ ಸಭೆಯಲ್ಲಿ ಕೇಳಿದ್ದೇನೆ ಎಂದು ಕೆಆರ್ಎಸ್ ಕಲಹ ವಿಚಾರಕ್ಕೆ ಸುಮಲತಾ ಸ್ಪಷ್ಟನೆ ಕೊಟ್ಟಿದ್ದಾರೆ. ಮುಂದುವರೆದ ಅವರು, ನನಗೆ ಈಗಲೂ ಶೇಕಡ 50ರಷ್ಟು ಆತಂಕ ಇದೆ. ಗಣಿಗಾರಿಕೆಯಿಂದ ಕೆಆರ್ಎಸ್ ಬಿರುಕಾಗುತ್ತೆ ಎಂಬ ಆತಂಕ ಇದೆ. ನಾನು ಇದನ್ನೇ…