ರಾಜಕೀಯ
೨೬ ಕ್ಕೆ ಬಿಜೆಪಿ ಶಾಸಕಾಂಗ ಸಭೆ-ಬಿಎಸ್‌ವೈ
ಬೆಂಗಳೂರು,ಜು,೧೭: ಇದೇ ೨೬ ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಾಸಕಾಂಗ ಸಭೆ ಕರೆಯುವ ಮೂಲಕ ವಿಶೇಷ ಕುತೂಹಲ ಮೂಡಿಸಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಬಂದ ನಂತರ ಇಂದು ಸಂಚೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ತಮ್ಮ ನೇತೃತ್ವದ ಸರ್ಕಾರಕ್ಕೆ ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ೨೬ ರಂದು ಶಾಸಕಾಂಗ ಸಭೆ ಕರೆಯಲಾಗಿದೆ ಎಂದು ತಿಳಿಸಿದ್ದಾರೆ. ‘ನಾಯಕತ್ವ ಬದಲಾವಣೆ ಅಥವಾ ಪರ್ಯಾಯ ನಾಯಕತ್ವದ ಕುರಿತು ನನ್ನ ಜತೆ ಯಾರೂ ಈವರೆಗೆ ಚರ್ಚಿಸಿಲ್ಲ. ನಾನು ಮುಖ್ಯಮಂತ್ರಿಯಾಗಿ ಜುಲೈ ೨೬ಕ್ಕೆ ಎರಡು ವರ್ಷ…