ಅಂಕಣ
ಹಾಡೆಂಬ ಕಲಾರಾಧನೆಯ ಬೆಂಬತ್ತಿ…
ಹಾಡೆಂಬ ಕಲಾರಾಧನೆಯ ಬೆಂಬತ್ತಿ… ಆಗಿನ್ನೂ ಮನೆ ಮನೆ ಅಂಗಳಗಳಲ್ಲೇ ಜರುಗುತಿದ್ದ ಮದುವೆಗಳು.ಹಂದರದ ಕಂಬ ನೆಡುವ,ತೆಂಗಿನಗರಿಗಳನ್ನ ಹುಡುಕಿ ತರುವ,ಎಲ್ಲರೂ ಸೇರಿ ಮಾವಿನ ತೋರಣ ಕಟ್ಟುವ, ದೊಡ್ಡ ದೊಡ್ಡ ಹಂಡೆಗಳು,ಡ್ರಮ್ಮಗಳಿಗೆ ಊರಾಚೆಯ ಎರಡು ಮೂರು ಕಿಲೋಮೀಟರ್ ಗಳಿಂದ ಸರತಿ ಪ್ರಕಾರವಾಗಿ ಓಣಿಯ ಹರೆಯದವರೆಲ್ಲಾ ಸೇರಿ ನೀರು ಹೊತ್ತು ತರುವ,ಹೆಣ್ಣು ಮಕ್ಕಳು ಕೋಣೆ ತುಂಬಾ ಮನೆಗೊಂದು ಆಳಿನಂತೆ ಬಂದು ಕಲ ಕಲ ಮಾಡುತ್ತಾ ಅಡುಗೆಗೆ ತಯಾರಿ ನಡೆಸುತ್ತಿರುವಾಗಲೇ ಬಣಗಾರ ಕೆಂಚಪ್ಪನೋ,ಸಂಗದ ಮನೆ ಹೇಮಣ್ಣನೋ ಬಂದು ” ನಗು ನಗುತಾ ನಲೀ ನಲೀ…