ಅಕ್ಕಿಯೊಳಗನ್ನವನು ಮೊದಲಾರು ಕಂಡವನು?
ಸಿದ್ಧಸೂಕ್ತಿ : ಅಕ್ಕಿಯೊಳಗನ್ನವನು ಮೊದಲಾರು ಕಂಡವನು? “ಇದು ನನ್ನ ಸಾಧನೆ, ಜನ ನೆನಪಿಟ್ಟುಕೊಳ್ಳಬೇಕು, ಹೊಗಳಬೇಕು, ಪತ್ರಿಕೆಯಲ್ಲಿ-ಕಲ್ಲಿನಲ್ಲಿ, ಅಲ್ಲಿಲ್ಲಿ ನನ್ನ ಹೆಸರಿರಬೇಕು” ಇದು ಬಹುತೇಕರ ಬಯಕೆ. ಇದಕ್ಕಾಗಿ ಏನೇನೋ ಕಸರತ್ತು! ಹೆಸರಿಲ್ಲದ್ದಕ್ಕಾಗಿ, ತನ್ನ ಸಂಪರ್ಕಿಸದಿದ್ದಕ್ಕಾಗಿ, ರಸ್ತೆ ಸೇತುವೆ ಕಟ್ಟಡ ಉದ್ಯಾನಾದಿಗಳ ನಿರ್ಮಾಣ, ಫಲಕ ಅಳವಡಿಕೆ, ಉದ್ಘಾಟನೆಗಳ ರದ್ದು! ಆದರೆ ನೆನಪಿರಲಿ :ಇದಾವುದೂ ಫಲಿಸದು. ವಿಶಾಲ ಜಗತ್ತಿನಲ್ಲಿ ನಾವು ಅದಾವ ಲೆಕ್ಕ? ಸಮುದ್ರದಲ್ಲಿ ಹನಿ ನೀರು ನಾನೆಂದರಾದೀತೇ? ಅಕ್ಕಿಯಲ್ಲಿ ಅನ್ನವನ್ನು ಮೊದಲು ಕಂಡವನ, ಪ್ರಪ್ರಥಮ ಅಕ್ಷರ ಲಿಪಿ ಕಂಡು ಹಿಡಿದವನ…