ಎನ್ಕ್ರಿಪ್ಟ್ ವ್ಯವಸ್ಥೆಯ ಅಭಿವೃದ್ಧಿಯ ನೋಟದ ಸುತ್ತಾ..?!
ಎನ್ಕ್ರಿಪ್ಟ್ ವ್ಯವಸ್ಥೆಯ ಅಭಿವೃದ್ಧಿಯ ನೋಟದ ಸುತ್ತಾ..?! ಸಣ್ಣದಾಗಿ ನಿದ್ದೆ ಬಂದಂತಾಗಿ ವಾಚು ನೋಡಿಕೊಂಡವನು ಒಂದು ಕ್ಷಣ ಗಾಬರಿಯಾದೆ. ಆದಾಗಲೇ ರಾತ್ರಿ ಒಂದೂವರೆ ಗಂಟೆಯಾಗಿತ್ತು. ತಮ್ಮ ಮುಂದೆ ಇರುವ ಬಿಳಿಬೋರ್ಡ್ ಮೇಲೆ ಇನ್ನೂ ಬರೆಯುತ್ತಲೇ ಸಾಗಿದ AGM ಬಿ. ವಿ. ಆಚಾರ್ಯ (BVA) ಇನ್ನೂ ಒಂದೆರಡು ತಾಸುಗಳ ಮಟ್ಟಿಗೆ ಹೊತ್ತಲ್ಲದ ಹೊತ್ತಿನಲ್ಲಿ ಸಾಗುತ್ತಿದ್ದ ಮೀಟಿಂಗ್ ನಲ್ಲಿ ತಮ್ಮ ಮಾತುಗಳನ್ನು ಮುಗಿಸಿದಂತೆ ತೋರಿ ಬರಲಿಲ್ಲ. ನನ್ನ ಬಲಬದಿಗೆ ಕುಳಿತ ಸಹೋದ್ಯೋಗಿ ನಟರಾಜನ್ ಕಡೆಗೆ ತಿರುಗಿದೆ. BVA ಬರೆಯುತ್ತಿದ್ದ ಸಾಲುಗಳನ್ನು ತದೇಕಚಿತ್ತನಾಗಿ…




















