ವಿರೂಪಾಕ್ಷ ಬೀದಿಯ ಮಂಟಪಗಳಲ್ಲಿ ಕೈಗೊಂಡ ಬಜಾರುಗಳ ಅಧ್ಯಯನ
ವಿರೂಪಾಕ್ಷ ಬೀದಿಯ ಮಂಟಪಗಳಲ್ಲಿ ಕೈಗೊಂಡ ಬಜಾರುಗಳ ಅಧ್ಯಯನ ಮುಂದುವರಿದ ಭಾಗ. . . . . ಅದೇ ತಾನೇ ಕೋಟಿಲಿಂಗವನ್ನು ನೋಡಲು ನದಿಗೆ ಇಳಿಯುವ ದುಸ್ಸಾಹಸಕ್ಕೆ ಕೈಹಾಕಿದ್ದೆವಲ್ಲಾ, ಅದೂ ಈಜುಬಾರದ ಗೆಳೆಯ ರೇಣುಕಾಪ್ರಸಾದ್ ಜೊತೆ. ಅಜ್ಜಿಯ ಮಾತು ಕೇಳದೆ ಕೋಟಿಲಿಂಗ ನೋಡಲು ನದಿಗೆ ಏನಾದರೂ ಇಳಿದಿದ್ದರೆ, ಉಕ್ಕಿ ಹರಿಯುವ ಪ್ರವಾಹದಲ್ಲಿ ಸಿಕ್ಕಿಕೊಂಡಿದ್ದರೆ, ನಮ್ಮಿಬ್ಬರ ಸ್ಥಿತಿ ಏನಾಗುತ್ತಿತ್ತು? ಅದನ್ನು ನೆನೆದು ಭಯಭೀತನಾದೆ. ಅಬ್ಬಾ ನಿಜಕ್ಕೂ ಬದುಕಿದೆವು ಎಂದು ಸಾವರಿಸಿಕೊಂಡೆನು. ಅದೂ ನಮ್ಮನ್ನು ಬದುಕಿಸಿದ್ದು ಬಾಳೆಹಣ್ಣು, ತೆಂಗಿನಕಾಯಿ ಮಾರುವ…