ಐಕಾನ್ ಗಳ ಭೇಟೆ
ರಾಜಕಾರಣಿಗಳು ಮತ್ತು ಸಾಂಸ್ಕೃತಿಕ ವಲಯದ ನಂಟು ಹಾಗೂ ಅವರ ನಡುವಳಿಕೆಗಳು ಹೇಗಿರುತ್ತವೆ ಎನ್ನುವ ಕುರಿತು ತಮ್ಮ ವೃತ್ತಿ ಅನುಭವದಲ್ಲಿ ಆದ ಕೆಲ ಘಟನೆಗಳನ್ನು ಹಿರಿಯ ಪತ್ರಕರ್ತ ಸಿ.ರುದ್ರಪ್ಪ ಅವರು ಅತ್ಯಂತ ಮನೋಜ್ಞವಾಗಿ ಇಲ್ಲಿ ಬಿಡಿಸಿಟ್ಟಿದ್ದಾರೆ. ಸಿ.ರುದ್ರಪ್ಪ,ಹಿರಿಯ ಪತ್ರಕರ್ತರು ಐಕಾನ್ ಗಳ ಭೇಟೆ ಬಿಜೆಪಿಯ ಸಜ್ಜನ ರಾಜಕಾರಣಿಯೊಬ್ಬರ ಬಗ್ಗೆ ಇತ್ತೀಚೆಗೆ ಒಂದೆರಡು ಒಳ್ಳೆಯ ಮಾತುಗಳನ್ನು ಬರೆದಿದ್ದೆ.”ನಿಮಗೆ ಅವರ ಇನ್ನೊಂದು ಮುಖ ಗೊತ್ತಿಲ್ಲವೇ”ಎಂದು ಕೆಲವರು ನನ್ನನ್ನು ಕೇಳಿದರು.”ಇಲ್ಲ..ಅದನ್ನು ತಿಳಿದುಕೊಳ್ಳುವ ಅಗತ್ಯವೂ ಇಲ್ಲ.ನನ್ನ ದೃಷ್ಟಿಯಲ್ಲಿ ಅವರು ಸಜ್ಜನರಾಗಿಯೇ ಇರಲಿ”ಎಂದು ಸ್ಪಷ್ಟಪಡಿಸಿದೆ.…












