ಆಪರೇಶನ್ ಸಿಂಧೂರ; ಭಾರತದ ರಕ್ಷಣಾ ಶಕ್ತಿ ಏನೆಂದು ಜಗತ್ತಿಗೆ ಗೊತ್ತಾಗಿದೆ- ಎಚ್.ಡಿ.ಕೆ
ಬೆಂಗಳೂರು,ಜೂ,28-: ದೇಶೀಯ ವಿಜ್ಞಾನಿಗಳು, ತಂತ್ರಜ್ಞರ ಸಾಧನೆ, ಹೆಗ್ಗಳಿಕೆ ಏನು ಎಂಬುದು ಆಪರೇಶನ್ ಸಿಂಧೂರದ ಮೂಲಕ ಜಗತ್ತಿಗೆ ಗೊತ್ತಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು. ಬೆಂಗಳೂರಿನ ತುಮಕೂರು ರಸ್ತೆಯಲ್ಲಿ ಕೇಂದ್ರೀಯ ಉತ್ಪಾದನಾ ತಂತ್ರಜ್ಞಾನ ಸಂಸ್ಥೆಯ 64ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ಅನೇಕ ವಿಷಯಗಳಲ್ಲಿ ನಾವು ವಿದೇಶಗಳನ್ನು ಅವಲಂಬಿಸಬೇಕಾಗಿತ್ತು. ಆ ನಂತರ ಅಂತಹ ಪರಿಸ್ಥಿತಿ…