ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ.
ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ. ಅಕ್ಷಿ=ಕಣ್ಣು. ಸಾಕ್ಷಿ=ಪ್ರತ್ಯಕ್ಷದರ್ಶಿ. ಘಟನೆಯಲ್ಲಿ ಭಾಗಿಯಾಗದ ಪ್ರತ್ಯಕ್ಷದರ್ಶಿ, ರಾಗ ದ್ವೇಷ ಪಕ್ಷಪಾತರಹಿತ, ಯಥಾವತ್ತಾಗಿ ನುಡಿಯುವಾತ ನಿಜ ಸಾಕ್ಷಿ. ಸತ್ಯ ಸುಳ್ಳೆಂಬ ವ್ಯಾಜ್ಯ ತೀರ್ಪಿಗೆ ಬೇಕು ಬಲಸಾಕ್ಷಿ! ಸಾಕ್ಷಿ ಹೆದರಿ, ಕೈಯೊಡ್ಡಿ ಶಾಮೀಲಾಗಿ ತಿರುಗಿಬಿದ್ದರೆ ನ್ಯಾಯ ಸತ್ತಿತು! ಅಷ್ಟು ಕೊಟ್ಟರೆ ಅವರಂತೆ, ಇಷ್ಟು ಕೊಟ್ಟರೆ ಇವರಂತೆ ಹೇಳುವ ಹಿರಿಯರು ಸಾಕ್ಷಿಗಳು ಜಗದಗಲ! ಕಳ್ಳನ ಬಿಡಿಸಲು,…