Girl in a jacket

Author kendhooli_editor

ಸಭಾಪತಿ ಆದೇಶ ಉಲ್ಲಂಘನೆ;೧೪ ಮಂದಿ ಕಾಂಗ್ರಸ್ ಸದಸ್ಯರ ಅಮಾನತು

ಬೆಳಗಾವಿ,ಡಿ,14: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸಭಾಪತಿ ಅದೇಶ ಉಲ್ಲಂಘನೆ ಆರೋಪದಡಿಯಲ್ಲಿ ವಿಧಾನ ಪರಿಷತ್ತಿನ 14 ಮಂದಿ ಸದಸ್ಯರನ್ನು ಅಮಾನತು ಮಾಡಲಾಗಿದೆ. ಸದನದ ಬಾವಿಗಿಳಿದು ಧರಣಿ ಮಾಡಿದ್ದ ಸದಸ್ಯರನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ಒಂದು ದಿನದ ಮಟ್ಟಿಗೆ ಅಮಾನತು ಮಾಡಿದ್ದಾರೆ. ಸಿಎಂ ಇಬ್ರಾಹಿಂ, ಪಿಆರ್ ರಮೇಶ್, ಪ್ರತಾಪ್ ಚಂದ್ರ ಶೆಟ್ಟಿ, ಎಸ್ ಆರ್ ಪಾಟೀಲ್, ಪಿಆರ್ ರಮೇಶ್, ನಾರಾಯಣ ಸ್ವಾಮಿ, ಬಿಕೆ ಹರಿಪ್ರಸಾದ್, ಯಬಿ ವೆಂಕಟೇಶ್, ವೀಣಾ ಅಚ್ಚಯ್ಯ ಸೇರಿ 14 ಮಂದಿಯನ್ನು ಅಮಾನತು…

ಮತಾಂತರ ನಿಷೇಧ ಕಾಯ್ದೆ ವಿರೋಧಿಸಲು ತೀರ್ಮಾನ

ಬೆಳಗಾವಿ, ಡಿ.15: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನಕ್ಕೂ ಪೂರ್ವಭಾವಿಯಾಗಿ ಬುಧವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿತು. ಈ ಸಂದರ್ಭದಲ್ಲಿ ವಿಧಾನ ಪರಷತ್ತಿಗೆ ಹೊಸದಾಗಿ ಆಯ್ಕೆಯಾದ ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸಲಾಯಿತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಿಎಲ್‌ಪಿ ಸಭೆಯಲ್ಲಿ, ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಕಾಯಿದೆಯನ್ನು ತೀವ್ರವಾಗಿ ವಿರೋಧಿಸುವ ತೀರ್ಮಾ ಕೈಗೊಳ್ಳಲಾಯಿತು. ಸಭೆಯ ಆರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ‘ಮತಾಂತರ ಕಾಯ್ದೆ ಭಾವನಾತ್ಮಕ ವಿಷಯ.…

ಅತಿಥಿ ಉಪನ್ಯಾಸಕರ ಸಮಸ್ಯೆ: ತಿಂಗಳಲ್ಲಿ ಸಮಿತಿ ವರದಿ, ಬಳಿಕ ಪರಿಹಾರ

ಬೆಳಗಾವಿ,ಡಿ,14: ಸೇವಾಭದ್ರತೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ರಾಜ್ಯದ 14 ಸಾವಿರ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ ಕಲ್ಪಿಸುವ ಸಂಬಂಧ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸಭೆ ನಡೆಯಿತು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸೇರಿದಂತೆ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರು ಕೂಡ ಭಾಗವಹಿಸಿದ್ದ ಈ ಸಭೆಯು, ಈ ಸಂಬಂಧ ರಚಿಸಲಾಗಿರುವ ಉನ್ನತ ಮಟ್ಟದ…

ಕಮಲ ಕೈಗೆ ಸಮಬಲ-ಜೆಡಿಎಸ್‌ಗೆ ಮುಖಭಂಗ

ಬೆಂಗಳೂರು,ಡಿ.೧೪- ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಧಿಕಾರರೂಢ ಬಿಜೆಪಿ ಪ್ರಮುಖ ಪ್ರತಿ ಪಕ್ಷವಾದ ಕಾಂಗ್ರೆಸ್ ಸಮಬಲ ಸಾಧಿಸಿದ್ದು, ಜೆಡಿಎಸ್ ತೀವ್ರ ಮುಖಭಂಗ ಅನುಭವಿಸಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ೨೫ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ೧೨ ಸ್ಥಾನಗಳಲ್ಲಿ ಜಯಗಳಿಸಿದ್ದು, ಕಾಂಗ್ರೆಸ್ ೧೧, ಜೆಡಿಎಸ್ ೧ ಮತ್ತು ಪಕ್ಷೇತರರು ೧ ಸ್ಥಾನದಲ್ಲಿ ಜಯಗಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ೬ ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದ್ದ ಬಿಜೆಪಿ, ಈ ಚುನಾವಣೆಯಲ್ಲಿ ತನ್ನ ಬಲ ಹೆಚ್ಚಿಸಿಕೊಂಡಿದ್ದು, ಕಳೆದ…

ಪೂರ್ಣಚಂದ್ರ ತೇಜಸ್ವಿ ಪತ್ನಿ ರಾಜೇಶ್ವರಿ ನಿಧನ

ಚಿಕ್ಕಮಗಳೂರು,ಡಿ,14: ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಕವಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ (84 ವ) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ತೇಜಸ್ವಿ ಅವರು ಕಳೆದ ಮೂರ್ನಾಲ್ಕು ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಪತಿ, ಕವಿ ಪೂರ್ಣಚಂದ್ರ ತೇಜಸ್ವಿ ನಿಧನ ಬಳಿಕ ಚಿಕ್ಕಮಗಳೂರು ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ನ ತೋಟದ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಅವರ ನೆಚ್ಚಿನ ಹವ್ಯಾಸಗಳ ಜೊತೆ ಕಾಫಿ ತೋಟವನ್ನು ಸಹ ನೋಡಿಕೊಂಡು ಹೋಗುತ್ತಿದ್ದರು. ಆದರೆ ಕಳೆದ…

ಅತಿಥಿ ಉಪನ್ಯಾಸಕರ ಬೇಡಿಕೆಗಳ ಅಧ್ಯಯನಕ್ಕೆ ಸಮಿತಿ ರಚನೆ

ಬೆಂಗಳೂರು,ಡಿ,13: ರಾಜ್ಯದಲ್ಲಿರುವ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ನಾನಾ ಬೇಡಿಕೆಗಳನ್ನು ಕುರಿತು ಅಧ್ಯಯನ ನಡೆಸಿ, ವಿಸ್ತೃತ ವರದಿ ಸಲ್ಲಿಸಲು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಬಗ್ಗೆ ಸರಕಾರ ಸೋಮವಾರ ಆದೇಶ ಹೊರಡಿಸಿದ್ದು, ಇದರಲ್ಲಿ ಆರ್ಥಿಕ ಮತ್ತು ಕಾನೂನು ಇಲಾಖೆಯ ಕಾರ್ಯದರ್ಶಿಗಳು ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಕೂಡ ಇರಲಿದ್ದಾರೆ. ಸಮಿತಿಯು ನಿಗದಿತ ಕಾಲಮಿತಿಯೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ. ಜೊತೆಗೆ, ವಿಧಾನ ಪರಿಷತ್ ಸಭಾಪತಿ…

ಡಿಸೆಂಬರ್ 18 ರಂದು ಗಂಡುಲಿ ಚಿತ್ರದ ಟ್ರೈಲರ್ ಬಿಡುಗಡೆ

‌‌‌‌‌ ವಿನಯ್ ರತ್ನಸಿದ್ದಿ ಅವರ ನಿರ್ದೇಶನವಿರುವ ಗಂಡುಲಿ ಚಿತ್ರವೀಗ ಬಿಡುಗಡೆಯ ಹಂತ ತಲುಪಿದ್ದು ಚಿತ್ರದ ಟ್ರೈಲರ್‌ ಇದೆ ಶನಿವಾರ ಬಿಡುಗಡೆಯಾಗಲಿದೆ. ಗಂಡುಲಿ ಚಲನಚಿತ್ರವು ಕುಟುಂಬ ಸಮೇತ ಕೂತು ನೋಡುವಂತ ಚಲನಚಿತ್ರವಾಗಿದ್ದು, ಇದು ಆಕ್ಶನ್, ಸಸ್ಪೆನ್ಸ್, ಕಾಮಿಡಿ ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಇಂದ ಕೂಡಿದೆ. ಇದರಲ್ಲಿ 5 ಆಕ್ಶನ್ಗಳಿದ್ದು, 3 ಹಾಡುಗಳಿದ್ದು. ನಾಯಕನ ಪಾತ್ರವನ್ನೂ ಕೂಡ ನಿರ್ದೇಶಕ ವಿನಯ್ ಅವರೇ ನಿರ್ವಹಿಸಿದ್ದಾರೆ. ಟೈಟಲ್ ಸಾಂಗ್ ಅನ್ನು “ಅನಿರುದ್ ಶಾಸ್ತ್ರಿ” ರವರು ಹಾಡಿದ್ದು, ಡುಯೆಟ್ ಸಾಂಗ್ ಅನ್ನು “ವಿಜಯ್ ಪ್ರಕಾಶ್”…

ನಟ ಪುನೀತ್ ರಾಜ್‌ಕುಮಾರ್‌ಗೆ ಶೀಘ್ರದಲ್ಲೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು : ಸಿಎಂ

ಬೆಳಗಾವಿ,ಡಿ,೧೩: ಅಗಲಿದ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದ್ದೇವೆ. ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದ ದಿನಾಂಕ ಶೀಘ್ರ ಪ್ರಕಟ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ತಿಳಿಸಿದರು. ಸಂತಾಪ ಸೂಚಕದ ನಿರ್ಣಯದ ಮೇಲೆ ಮಾತನಾಡಿದ ಸಿಎಂ, ಅದೇ ರೀತಿ ಶೀಘ್ರದಲ್ಲೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡುತ್ತೇವೆ. ವಿಪಕ್ಷದ ನಾಯಕರು ಸಹ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡುವಂತೆ ಪತ್ರ ಬರೆದಿದ್ದರು ಎಂದು ಹೇಳಿದರು. ಪ್ರತಿಭೆ ಮತ್ತು ಸಾಧಕರು ಅಲ್ಪಾಯುಷಿಗಳು…

ವಿರೋಧಪಕ್ಷದವರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಸಿದ್ದ;ಸಿಎಂ

ಬೆಳಗಾವಿ, ಡಿ, 13 :ವಿರೋಧಪಕ್ಷದವರು ಪ್ರಸ್ತಾಪ ಮಾಡುವ ವಿಷಯಗಳಿಗೆ ಸಮರ್ಪಕ ಉತ್ತರ ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ವಿಮಾನ ನಿಲ್ದಾಣ ಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಹಲವಾರು ಕಾನೂನುಗಳನ್ನು ತರುವುದು , ಜನಪರವಾದ ಅಭಿವೃದ್ಧಿಯ ಕುರಿತು ಚರ್ಚೆ ಮಾಡಿ ಅದಕ್ಕೆ ಪರಿಹಾರ ದೊರಕಿಸುವುದು ಸರ್ಕಾರದ ಆದ್ಯತೆ. ಸಮಗ್ರ ಕರ್ನಾಟಕದ ಜೊತೆಗೆ ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಯ ವಿಚಾರ ಹಾಗೂ ಯೋಜನೆಗಳ ಬಗ್ಗೆ ಚರ್ಚೆ…

ವಿನಾಶಕಾಲೇ ವಿಪರೀತ ಸುಳ್ಳು; ಸಿದ್ಧು ವಿರುದ್ದ ಎಚ್ ಡಿಕೆ ಟೀಕಾಪ್ರಹಾರ

ಬೆಂಗಳೂರು,ಡಿ,13: ಮೈತ್ರಿ ಸರಕಾರ ರಚನೆ ಮಾಡಲು ಜೆಡಿಎಸ್‌ʼನವರ ಮನೆ ಬಾಗಿಲಿಗೆ ಹೋಗಿಲ್ಲ. ವರಿಷ್ಠರ ಜತೆ ಮಾತುಕತೆ ಆಗಿದ್ದು ನಿಜ. ನಾನಂತೂ ಅವರ ಮನೆಗೆ ಹೋಗಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ನೀಡಿದ ಹೇಳಿಕೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇಂದು ಬೆಳಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು; “ಜೆಡಿಎಸ್‌ ನಾಯಕರು ಮತ್ತು ಪಕ್ಷದ ಬಗ್ಗೆ ಸರಣಿ ಸುಳ್ಳುಗಳನ್ನು ಹೇಳುತ್ತಿರುವ ಅವರು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ” ಎಂದು ಹೇಳಿದ್ದಾರೆ. ಕಟ್ಟುವುದು ಮನುಷ್ಯತ್ವ,…

ಹಿರಿಯೂರು ಬಳಿ ಅಫಘಾತ; ನಾಲ್ವರು ಸಾವು

ಚಿತ್ರದುರ್ಗ ; ಎಚ್ ಲಕ್ಷ್ಮಣ್ ಚಿತ್ರದುರ್ಗ, ಡಿ, 13: ಜಿಲ್ಲೆಯ ಹಿರಿಯೂರು ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ (ತೊರೆ ಸೇತುವೆ ಬಳಿ) ಬಳಿ ಸರಣಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಕಾರು ಹಾಗೂ ಲಾರಿಗಳ ಮಧ್ಯೆ ಭೀಕರ ಸರಣಿ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಅಸುನೀಗಿದ್ದು, ಹತ್ತಕ್ಕೂ ಹೆಚ್ಚು ಜನ ಗಾಯಗೊಂಡರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಕಾಫಿ ಹೌಸ್‌ನ ಆಲೂರು…

ಇಂದಿನಿಂದ ಬೆಳಗಾವಿಯಲ್ಲಿ ಅಧಿವೇಶನ-ಆಡಳಿತ;ಪ್ರಕತಿಪಕ್ಷಗಳ ನಡುವೆ ವಾಕ್ಸಮರ

ಬೆಳಗಾವಿ,ಡಿ. ೧೩ : ಇಂದಿನಿಂದ ಆರಂಭವಾಗಲಿರುವ ವಿಧಾನಮಂಡಲ ಉಭಯ ಸನದಗಳ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷ ಹಾಗೂ ಆಡಳಿತರೂಢ ಪಕ್ಷನ ನಡುವೆ ತೀವ್ರ ವಾಕ್ಸಮರ ಆರಂಭವಾಗುವ ಸಾಧ್ಯತೆಗಳಿವೆ ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗಲಿರುವ ಈ ಅಧಿವೇಶನದಲ್ಲ ಪ್ರಮುಖವಾಗಿ ಬಿಟ್ ಕಾಯಿನ್, ೪೦ ಪರ್ಸೆಂಟ್ ಕಮಿಷನ್, ಅಗತ್ಯ ವಸ್ತುಗಳ ಬೆಲೆ ಏರಿಕೆ, ಮಳೆಹಾನಿ ಪರಿಹಾರ ಕಲ್ಪಿಸುವಲ್ಲಿನ ವೈಫಲ್ಯದಂತಹ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿದ್ದರೆ ಇದಕ್ಕೆ ಪ್ರತ್ಯುತ್ತರ ನೀಡಲು ಎಂಬಂತೆ ಆಡಳಿತಾರೂಢ ಬಿಜೆಪಿಯು ಮತಾಂತರ ನಿಷೇಧ…

ರಾಜ್‌ಕುಮಾರ್ ಅತ್ಯುದ್ಬುತ ಅಭಿನಯದ ಭಕ್ತಕನಕದಾಸ

ರಾಜ್‌ಕುಮಾರ್ ಅತ್ಯುದ್ಬುತ ಅಭಿನಯದ ಭಕ್ತಕನಕದಾಸ ಶ್ಯಾಮಪ್ರಸಾದ್ ಮೂವೀಸ್ ಲಾಂಛನದಲ್ಲಿ ೧೯೬೦ರಲ್ಲಿ ತೆರೆ ಕಂಡ ಕಪ್ಪು-ಬಿಳುಪು ಭಕ್ತಿಪ್ರಧಾನ ಚಿತ್ರ ಭಕ್ತ ಕನಕದಾಸ ವೈ.ಆರ್.ಸ್ವಾಮಿ ನಿರ್ದೇಶಿಸಿದರು. ಬೆಂಗಳೂರಿನ ಅಬಕಾರಿ ಕಂಟ್ರಾಕ್ಟರ್ ಡಿ.ಆರ್.ನಾಯ್ಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ರಾಜಕುಮಾರ್ ಅತ್ಯುತ್ತಮ ಅಭಿನಯದ ಉತ್ಕೃಷ್ಟ ಚಿತ್ರವಾದ ಭಕ್ತ ಕನಕದಾಸ ಚಿತ್ರ ಕೇಂದ್ರ ಸರ್ಕಾರದ ಅರ್ಹತಾ ಪ್ರಶಸ್ತಿ ಪಡೆಯಿತು. ರಾಜಕುಮಾರ್ ಅವರೊಂದಿಗೆ ಉದಯಕುಮಾರ್, ಕೃಷ್ಣಕುಮಾರಿ, ಕೆ.ಎಸ್.ಅಶ್ವತ್ಥ್, ಹೆಚ್.ರಾಮಚಂದ್ರಶಾಸ್ತ್ರಿ, ಜಯಾ, ಸೋರಟ್ ಅಶ್ವತ್ಥ್, ಸಿ.ವಿ.ಶಿವಶಂಕರ್, ರತ್ನಾಕರ್, ವಾಸುದೇವ ಗಿರಿಮಾಜಿ, ಎಂ.ಎಸ್.ಸುಬ್ಬಣ್ಣ, ಜಯಶ್ರೀ, ಲಕ್ಷ್ಮೀದೇವಿ ಅಭಿನಯಿಸಿದರು.…

ವರ್ಷದಲ್ಲಿ ಗಂಗೂಬಾಯಿ ಸಂಗೀತ ವಿವಿ ಪುನಶ್ಚೇತನ: ಅಶ್ವತ್ಥನಾರಾಯಣ

ಬೆಂಗಳೂರು,ಡಿ,12: ಮೈಸೂರಿನಲ್ಲಿರುವ ಗಂಗೂಬಾಯಿ ಸಂಗೀತ ವಿಶ್ವವಿದ್ಯಾಲಯವನ್ನು ಮುಂದಿನ ಒಂದು ವರ್ಷದಲ್ಲಿ ಜಾಗತಿಕ ಗುಣಮಟ್ಟದೊಂದಿಗೆ ಪುನಶ್ಚೇತನಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ನಗರದ ಗಾಯನ ಸಮಾಜದಲ್ಲಿ ನಡೆಯುತ್ತಿದ್ದ 51ನೇ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ವ್ಯಕ್ತಿಗಳು ನೆಮ್ಮದಿಯಿಂದ ಬದುಕಬೇಕಾದರೆ ಸಂಸ್ಕೃತಿ ಮತ್ತು ಸಂಸ್ಕಾರಗಳು ಬಹಳ ಮುಖ್ಯ ಎಂದರು. ಶಿಕ್ಷಣದಲ್ಲಿ ಭಾರತೀಯತೆ ಮತ್ತು ಸಂಸ್ಕೃತಿಯ ಇತರ ಅಂಶಗಳೆಲ್ಲವೂ ಇರಬೇಕೆನ್ನುವುದು ಸದಾಶಯವಾಗಿದೆ. ಏಕೆಂದರೆ, ಕೇವಲ ಶಾಲಾಕಾಲೇಜುಗಳ ಓದಷ್ಟೇ ಮುಖ್ಯವಲ್ಲ. ಇದನ್ನು ಮನಗಂಡೇ ಪ್ರಧಾನಿ…

ಬೆಳಗಾವಿ ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆಯ ನಿರೀಕ್ಷೆ;ಸಿ.ಎಂ

ಹುಬ್ಬಳ್ಳಿ, ಡಿ 12: ಬೆಳಗಾವಿ ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆಯನ್ನು ನಿರೀಕ್ಷಿಸುತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಇಂದು ಹುಬ್ಭಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಬೆಳಗಾವಿಯಲ್ಲಿ 2 ವರ್ಷಗಳ ನಂತರ ಅಧಿವೇಶನ ನಡೆಯಲಿದ್ದು, ಇದಕ್ಕಾಗಿ ಸರ್ಕಾರ ಸಂಪೂರ್ಣ ಸಿದ್ಧತೆಗಳನ್ನು ಕೈಗೊಂಡಿದೆ. ಅಧಿವೇಶನದಲ್ಲಿ ಅಭಿವೃದ್ಧಿಯ ಪರವಾದ ಹಾಗೂ ಜನರಿಗೆ ಉಪಯುಕ್ತವಾಗುವ ಚರ್ಚೆಯಾಗಬೇಕೆಂದು ಬಯಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಮಹತ್ವದ ಹಾಗೂ ಅರ್ಥಪೂರ್ಣ ಚರ್ಚೆಗಳಾಗಬೇಕೆನ್ನುವುದು ಉತ್ತರ ಕರ್ನಾಟಕ ಭಾಗದ ಜನರ ಅಪೇಕ್ಷೆಯೂ ಹೌದು. ಸರ್ಕಾರವು ಸಮಗ್ರ ಕರ್ನಾಟಕ ಅದರಲ್ಲಿಯೂ ವಿಶೇಷವಾಗಿ ಉತ್ತರ…

ಮಗಳ ಬದುಕಿಗೆ ಮಾರಕವಾದ ಕುಂಡಲಿ

ಮಗಳ ಬದುಕಿಗೆ ಮಾರಕವಾದ ಕುಂಡಲಿ “ಗಂಗಾ, ನಾನು ಹೊರಡುವುದಕ್ಕೆ ತಡವಾಗುತ್ತಿದೆ, ಬೇಗ ನನ್ನ ಬುತ್ತಿಯನ್ನು ಕೊಡು” ಎಂದು ಐಯ್ನೋರ ತಿಪ್ಪಯ್ಯ ಮೇಷ್ಟ್ರು ಅಡುಗೆಮನೆಯಲ್ಲಿದ್ದ ತಮ್ಮ ಧರ್ಮಪತ್ನಿ ಗಂಗಮ್ಮನನ್ನು ಕೂಗಿದ ಸದ್ದು ಮುಂಬಾಗಿಲನ್ನು ಸೀಳಿ ಹೊರಬಂದು ಮೇಷ್ಟ್ರ ಮನೆಯ ಎದುರಿನ ರಸ್ತೆಯಲ್ಲಿ ನಡೆಯತ್ತಾ ಸಾಗಿದ್ದ ನನ್ನ ಕಿವಿಗಳನ್ನು ಅಪ್ಪಳಿಸಿತು. ಅನಿತ ದೂರದಲ್ಲಿಯೇ ಇದ್ದ ಅನಂತಶೆಟ್ಟಿ ಅಂಗಡಿಗೆ ಹೋಗಿ ತಾತನ ಶನಿವಾರದ ತಿರುಪತಿ ತಿಮ್ಮಪ್ಪನ ಪೂಜೆಗೆಂದು ತೆಂಗಿನಕಾಯಿ ತರಬೇಕಾಗಿದ್ದ ಆತುರದಲ್ಲಿದ್ದ ನಾನು ಈ ಮಾತುಗಳನ್ನು ಕೇಳಿಸಿಕೊಂಡು ಒಂದು ಕ್ಷಣ ರಸ್ತೆಯ…

ಶಿಕ್ಷಣ ರಾಷ್ಟ್ರೀಯ ಹಿತಿದೃಷ್ಟಿಯಲ್ಲಿರಬೇಕು

ಚಿದಂಬರ ಜೋಶಿ,ಚಿಕಾಗೂ. ಚಿದಂಬರ ಜೋಶಿ ಅವರು ಮೂಲತಃ ರಾಯಚೂರು ಜಿಲ್ಲೆಯ, ಗಂಗಾವತಿಯವರು. ಪ್ರಸ್ತುತ ಅನಿವಾಸಿ ಭಾರತೀಯ. ಕಳೆದ ೩ ದಶಕಗಳಿಂದ ಉತ್ತರ ಅಮೆರಿಕಾದ ಚಿಕಾಗೊದಲ್ಲಿ ನೆಲಿಸಿದ್ದಾರೆ. ಅವರ ಕನ್ನಡ ಪ್ರೇಮ ಇವತ್ತಿಗೂ ಮಾಸಿಲ್ಲ. ಅವರ ವಿಶಿಷ್ಟ ಚಿಂತನೆ ಹಾಗೂ ಬರವಣಿಗೆಯ ಶೈಲಿ, ಓದುಗರ, ಕೇಳುಗರ ವಿಚಾರಶಕ್ತಿಯನ್ನು ಪ್ರಚೋದಿಸುತ್ತವೆ, ಸವಾಲು ಒಡ್ಡುತ್ತವೆ.  ಅವರು ಶಿಕ್ಷಣ ಮತ್ತು ಅದರ ವ್ಯವಸ್ಥೆ ಕುರಿತು ಬರೆದಿದ್ದಾರೆ ಶಿಕ್ಷಣ ರಾಷ್ಟ್ರೀಯ ಹಿತದೃಷ್ಟಿಯಲ್ಲಿರಬೇಕು ಪ್ರಿಯ ಓದುಗರೇ, ಇದು ಪ್ರಶ್ನೋತ್ತರ ಲೇಖನ. ಇದುವರೆಗೂ ನಾನು ಬರೆದ ೫…

ಬಿಡಿಎ ಸೇವೆಗಳೂ ಶೀಘ್ರವೇ `ಜನಸೇವಕ’ ವ್ಯಾಪ್ತಿಗೆ: ಡಾ.ಅಶ್ವತ್ಥನಾರಾಯಣ

ಬೆಂಗಳೂರು,ಡಿ,11: ಆಧಾರ್ ಕಾರ್ಡಿನಿಂದ ಹಿಡಿದು ಭೂ ಹಿಡುವಳಿ ಪ್ರಮಾಣ ಪತ್ರದವರೆಗೆ 79 ಅಗತ್ಯ ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸುವ `ಜನಸೇವಕ’ ಯೋಜನೆ ವ್ಯಾಪ್ತಿಗೆ ಸದ್ಯದಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸೇವೆಗಳನ್ನೂ ಸೇರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ತಾವು ಪ್ರತಿನಿಧಿಸುತ್ತಿರುವ ಮಲ್ಲೇಶ್ವರಂ ಕ್ಷೇತ್ರದಲ್ಲಿ ಇತ್ತೀಚೆಗೆ ಚಾಲನೆ ಕಂಡಿದ್ದ `ಜನಸೇವಕ’ ಕಾರ್ಯಕ್ರಮ ಕುರಿತಾದ ವಾರ್ಡ್ ವಾರು ಪ್ರತ್ಯೇಕ ಕಿರುಹೊತ್ತಿಗೆ ಬಿಡುಗಡೆ ಹಾಗೂ ಜನರಿಗೆ ಸಾಂಕೇತಿಕವಾಗಿ ಸೇವೆಗಳನ್ನು ಒದಗಿಸುವ ಕಾರ್ಯಕ್ರಮದ ನಂತರ ಅವರು ಮಾತನಾಡಿದರು.…

ಕಂಪನಿಗಳಿಗೆ ಸಾಮಾಜಿಕ ಒಳಗೊಳ್ಳುವಿಕೆ ದೃಷ್ಟಿಕೋನ ಮುಖ್ಯ: ಅಶ್ವತ್ಥನಾರಾಯಣ

ಬೆಂಗಳೂರು,ಡಿ,10:  ಕೇವಲ ವಾಣಿಜ್ಯ ಲಾಭದ ದೃಷ್ಟಿಯಿಂದ ಕಂಪನಿಗಳನ್ನು ನಡೆಸುವುದರ ಬದಲು ಸಮಾಜದ ಪ್ರತಿಯೊಬ್ಬರನ್ನೂ ಒಳಗೊಳ್ಳುವಂತಹ ದೃಷ್ಟಿಕೋನವು ಉದ್ಯಮಗಳಲ್ಲಿ ಬೇರೂರಬೇಕಾಗಿದೆ. ಇದರಿಂದ ಮಾತ್ರ ಸಮಾಜವು ಪ್ರಗತಿ ಸಾಧಿಸಬಲ್ಲದು ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರತಿಪಾದಿಸಿದ್ದಾರೆ. ನಗರದ ಖಾಸಗಿ ಹೋಟೆಲಿನಲ್ಲಿ ಶುಕ್ರವಾರ ನಡೆದ 12ನೇ ಸಿಎಸ್ಆರ್ ನಾಯಕತ್ವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿರುವ ಯೂನಿಕಾರ್ನ್ ಕಂಪನಿಗಳಲ್ಲಿ ಶೇ.60ರಷ್ಟು ರಾಜ್ಯದಲ್ಲೇ ಇದ್ದು, ಇವು ಈಗ ಸಾಮಾಜಿಕ ವಲಯಗಳತ್ತಲೂ ಗಮನ ಹರಿಸುತ್ತಿರುವುದು ಸ್ವಾಗತಾರ್ಹ…

ಯುವ ಸಬಲೀಕರಣ, ಮಹಿಳಾ ಉದ್ಯಮಶೀಲತೆ ಗುರಿ: `ಕೋಡ್ ಉನ್ನತಿ’ ಉಪಕ್ರಮಕ್ಕೆ ಚಾಲನೆ

ಬೆಂಗಳೂರು,ಡಿ,10: ರಾಜ್ಯದಲ್ಲಿ ಯುವಜನ ಸಬಲೀಕರಣ ಮತ್ತು ಮಹಿಳಾ ಉದ್ಯಮಶೀಲತೆಯನ್ನು ಸಾಧಿಸುವ ಮಹತ್ವಾಕಾಂಕ್ಷೆಯುಳ್ಳ `ಕೋಡ್ ಉನ್ನತಿ’ ಉಪಕ್ರಮಕ್ಕೆ ಐಟಿ, ಬಿಟಿ ಮತ್ತು ಕೌಶಲ್ಯ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶುಕ್ರವಾರ ಇಲ್ಲಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ, ಯೋಜನೆಯ ಅಂಗವಾಗಿ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯುಎನ್ ಡಿಪಿ), ಎಸ್ ಎ ಪಿ ಲ್ಯಾಬ್, ಕೌಶಲ್ಯಾಭಿವೃದ್ಧಿ ಮತ್ತು ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು ಒಡಂಬಡಿಕೆಗೆ ಸಹಿ ಹಾಕಿದವು. ಇದರ ಅಂಗವಾಗಿ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು,…

1 36 37 38 39 40 101
Girl in a jacket