ಲೋಕದತ್ತ ಮಿತಿಗಳನ್ನೂ ದಾಟಿ ಮುನ್ನಡೆದು ನಿತ್ಯಬೆರಗನ್ನು ಹುಟ್ಟಿಹಾಕಿದ ಪರಿ..
ಲೋಕದತ್ತ ಮಿತಿಗಳನ್ನೂ ದಾಟಿ ಮುನ್ನಡೆದು ನಿತ್ಯಬೆರಗನ್ನು ಹುಟ್ಟಿಹಾಕಿದ ಪರಿ.. ಅದೊಂದು ಭಾನುವಾರದ ದಿನ. ಭದ್ರಪ್ಪಶೆಟ್ಟಿ ಅಂಗಡಿಯಿಂದ ಖರೀದಿಸಿದ ಹತ್ತು ಸೇರುಗಳ ಮಂಡಕ್ಕಿ ಮೂಟೆಯನ್ನು ಹೆಗಲ ಮೇಲೆ ಹೇರಿಕೊಂಡು ಮನೆಯತ್ತ ಓಟಕಿತ್ತವನಿಗೆ ಒಂದು ಆತಂಕ ಬೆನ್ನುಬಿಡದೆ ಕಾಡುತ್ತಿತ್ತು. ಶೆಟ್ಟಿಯ ಅಂಗಡಿಯ ಗೋಡೆಯ ಮೇಲೆ ನೇತುಹಾಕಿದ್ದ ಗಡಿಯಾರ ಬೆಳಿಗ್ಗೆಯ ಒಂಬತ್ತನ್ನು ಮೀರಿದ ಸಮಯವನ್ನು ತೋರಿಸಿದ್ದು ನನ್ನ ಎದೆಬಡಿತವನ್ನು ಮತ್ತಷ್ಟು ಹೆಚ್ಚುಮಾಡಿತ್ತು. ಅವ್ವ ಮಾಡಲಿರುವ ಒಗ್ಗರಣೆಗೆ ಬೇಕಾದ ಮಂಡಕ್ಕಿ ತರಲು ಸುಮಾರು ಎಂಟೂವರೆಯ ವೇಳೆಗೇ ಆತುರಾತುರವಾಗಿ ಮನೆಯನ್ನು ತೊರೆದು ಮಂದಿನ…