ಗುಹಾಲಯಗಳ ಆಗರ ಚಿತ್ರದುರ್ಗ ಕೋಟೆ ಪರಿಸರ
ಗುಹಾಲಯಗಳ ಆಗರ ಚಿತ್ರದುರ್ಗ ಕೋಟೆ ಪರಿಸರ ಚಿತ್ರದುರ್ಗವು ಪ್ರಸಿದ್ಧಿಯಾಗಿರುವುದು ಅಲ್ಲಿನ ಕೋಟೆಯಿಂದ. “ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ ಎಂಬ ಸಿನಿಮಾ ಹಾಡಿನಿಂದ ಹೆಚ್ಚು ಜನಮನ ಗಳಿಸಿದ ರಕ್ಷಣಾ ವಾಸ್ತುಶಿಲ್ಪವಿದು. ಈ ಕೋಟೆಯನ್ನು ನಿರ್ಮಿಸಿರುವುದು ಚಿನ್ಮೂಲಾದ್ರಿ ಬೆಟ್ಟಶ್ರೇಣಿಯಲ್ಲಿ. ಈ ಶ್ರೇಣಿಗಳೋ ಕಣಶಿಲೆಯ ಬೃಹತ್ ಬಂಡೆಗಲ್ಲುಗಳನ್ನು ಒಳಗೊಂಡ ಶಿಲಾಸ್ತೋಮಗಳೇ ಆಗಿವೆ. ಇಲ್ಲಿನ ಬಂಡೆಗಲ್ಲುಗಳಲ್ಲಿರುವ ಅನೇಕ ಸ್ವಾಭಾವಿಕ ಗುಹೆ-ಗಹ್ವರಗಳು ಪಾಗಿತಿಹಾಸ ಕಾಲದಿಂದಲೂ ಮಾನವನ ವಸತಿ ತಾಣಗಳಾಗಿ ಬಳಕೆಯಾಗಿವೆ. ಇಲ್ಲಿನ ಗುಹೆಗಳು ಹತ್ತಾರು ಜನ ವಾಸಮಾಡಬಹುದಾದಷ್ಟು ವಿಸ್ತಾರವಾದ ಆಶ್ರಯತಾಣಗಳು.…