Girl in a jacket

Author kendhooli_editor

ಕೇಂದ್ರಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ವಿದ್ಯಾರ್ಥಿ ಸಮೀಹಕ್ಕೆ ಅವಮಸನ; ಡಿಕೆಶಿ ಆಕ್ರೋಶ

ಬೆಂಗಳೂರು,ಮಾ: ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ 90% ವಿದ್ಯಾರ್ಥಿಗಳು ಭಾರತದಲ್ಲಿ ಅರ್ಹತಾ ಪರೀಕ್ಷೆಯಲ್ಲಿ ವಿಫಲರಾದರು ಎಂದು ಹೇಳಿಕೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಈ ಸಂಬಂಧ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಸಂಸದೀಯ ಸಚಿವರು ವಿದ್ಯಾರ್ಥಿಗಳನ್ನ ಅವಹೇಳನ ಮಾಡಿದ್ದಾರೆ. ಕಡಿಮೆ ಮಾರ್ಕ್ಸ್ ಬಂದಿದ್ದಕ್ಕೆ ಅಲ್ಲಿಗೆ ಹೋದ್ರು ಅಂತಾರೆ. ಪ್ರಧಾನಿಗಳು ಅದನ್ನೇ ಸಮರ್ಥಿಸಿಕೊಳ್ತಾರೆ. ಇದು ವಿದ್ಯಾರ್ಥಿ ಸಮೂಹಕ್ಕೆ ಮಾಡಿದ ಅಪಮಾನ. ಕೂಡಲೇ ಸಚಿವರು ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು. ಇಲ್ಲವಾದರೆ…

ಮಾರ್ಚ್ 7ರಿಂದ ಮೂರು ದಿನ `ಬೆಂಗಳೂರು- ಇಂಡಿಯಾ ನ್ಯಾನೋ ಸಮಾವೇಶ

ಬೆಂಗಳೂರು,ಮಾ,02: `ಸುಸ್ಥಿರ ಅಭಿವೃದ್ಧಿಗಾಗಿ ನ್ಯಾನೋ ತಂತ್ರಜ್ಞಾನ’ ಎನ್ನುವ ಧ್ಯೇಯದೊಂದಿಗೆ 12ನೇ ವರ್ಷದ `ಬೆಂಗಳೂರು-ಇಂಡಿಯಾ ನ್ಯಾನೋ’ ಸಮಾವೇಶವು ಪ್ರಥಮ ಬಾರಿಗೆ ವರ್ಚುಯಲ್ ಮಾದರಿಯಲ್ಲಿ ಮಾರ್ಚ್ 7ರಿಂದ 9ರವರೆಗೆ ನಡೆಯಲಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಬುಧವಾರ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. 12ನೇ ವರ್ಷದ `ಬೆಂಗಳೂರು-ಇಂಡಿಯಾ ನ್ಯಾನೋ ಸಮಾವೇಶ’ಕ್ಕೆ…

ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ತರಗತಿಯಿಂದ ಶೇ.67ರಷ್ಟು ಬಾಲಕಿಯರು ವಂಚಿತರಾಗಿದ್ದಾರೆ: ಸೇವ್ ದಿ ಚಿಲ್ಡ್ರನ್ ಸಂಸ್ಥೆ ವರದಿ

ಬೆಂಗಳೂರು,ಮಾ,02: ಕೋವಿಡ್ ಸಂದರ್ಭದಲ್ಲಿ ಕೊಳಗೇರಿ ಪ್ರದೇಶದ ಹೆಣ್ಣು ಮಕ್ಕಳ ಕುರಿತು ಸೇವ್ ದಿ ಚಿಲ್ಡ್ರನ್ ಅಧ್ಯಯನ ನಡೆಸಿದ್ದು, ಆತಂಕಕಾರಿ ವಿಷಯಗಳನ್ನು ವರದಿಯಲ್ಲಿ ಬಹಿರಂಗ ಪಡಿಸಿದೆ. ಹೌದು, ಬುಧವಾರ ವರ್ಚುವಲ್ ಮೂಲಕ “ ದಿ ವರ್ಲ್ಡ್ ಆಫ್ ಇಂಡಿಯನ್ ಗರ್ಲ್ಸ್-ವಿಂಗ್ಸ್ 2022” ಶೀರ್ಷಿಕೆಯಲ್ಲಿ ಸೇವ್ ದಿ ಚಿಲ್ಡ್ರನ್ ಸಂಸ್ಥೆಯು ವರದಿ ಬಿಡುಗಡೆ ಮಾಡಿದೆ. ಕೋವಿಡ್ ಸಾಂಕ್ರಮಿಕದ ಕಾರಣ ಬಾಲಕರಿಗಿಂತ ಬಾಲಕರಿಯರೇ ಹೆಚ್ಚಾಗಿ ಶಾಲೆ ತೊರೆದಿದ್ದಾರೆ. ಕೊಳಚೆ ಪ್ರದೇಶ ಹಾಗೂ ಗ್ರಾಮೀಣ ಭಾಗದಲ್ಲಿ ಶೇ.67ರಷ್ಟು ಬಾಲಕಿಯರು ಆನ್‌ಲೈನ್ ತರಗತಿಯನ್ನು…

ನೀಟ್‌ʼನಿಂದ ಬಡ, ಗ್ರಾಮೀಣ ವಿದ್ಯಾರ್ಥಿಗಳ ವೈದ್ಯಶಿಕ್ಷಣ ಕನಸು ನುಚ್ಚುನೂರು- ಪ್ರಹ್ಲಾದ ಜೋಶಿ ಹೇಳಿಕೆಗೆ ಎಚ್ ಡಿ ಕೆ ಅತೃಪ್ತಿ

ನೀಟ್‌ʼನಿಂದ ಬಡ, ಗ್ರಾಮೀಣ ವಿದ್ಯಾರ್ಥಿಗಳ ವೈದ್ಯಶಿಕ್ಷಣ ಕನಸು ನುಚ್ಚುನೂರು- ಪ್ರಹ್ಲಾದ ಜೋಶಿ ಹೇಳಿಕೆಗೆ ಅತೃಪ್ತಿ* *ಹೆಚ್‌ಡಿಕೆ ಹೇಳಿರುವುದೇನು? ಬೆಂಗಳೂರು,ಮಾ,02: ನೀಟ್‌ ವ್ಯವಸ್ಥೆಯಿಂದ ಬಡ ಮತ್ತು ಮಧ್ಯಮ ವರ್ಗದ, ಗ್ರಾಮೀಣ ವಿದ್ಯಾರ್ಥಿಗಳ ವೈದ್ಯಶಿಕ್ಷಣದ ಕನಸು ನುಚ್ಚುನೂರು ಆಗುತ್ತಿದೆ ಎಂದು ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ವೈದ್ಯಶಿಕ್ಷಣ ವೆಚ್ಚದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನೀಡಿರುವ ಹೇಳಿಕೆ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ನೀಟ್‌ ಬಂದ ಮೇಲೆ ಟ್ಯೂಷನ್‌ ದಂಧೆ ಮೇರೆ ಮೀರಿದ್ದು, ಅದಕ್ಕೆ ಕೇಂದ್ರ…

ಮಹಿಳಾ ದಿನಾಚರಣೆ ಪ್ರಯುಕ್ತ ಮಾ.8ರಂದು ವಂಡರ್‌ಲಾದಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶ

ಬೆಂಗಳೂರು, ಮಾ,02:ಅಂತರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಂಡರ್‌ಲಾದಲ್ಲಿ ಮಾರ್ಚ್‌ 8 ರಂದು ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶವಿದ್ದು, ಒಂದು ಟಿಕೆಟ್ ಖರೀದಿಸಿದರೆ ಮತ್ತೊಬ್ಬರಿಗೆ ಉಚಿತ ಪ್ರವೇಶ ಘೋಷಿಸಿದೆ. ಅಂತರಾಷ್ಟ್ರೀಯ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ವಂಡರ್‌ಲಾ ಆ ದಿನದಂದು ಕೇವಲ ಮಹಿಳೆಯರು ಹಾಗೂ ಯುವತಿಯರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. 10 ವರ್ಷ ಒಳಗಿನ ಗಂಡು ಮಕ್ಕಳಿಗೆ ಪ್ರವೇಶವಿದ್ದು, ಉಳಿದಂತೆ ಯಾವ ಪುರುಷರಿಗೂ ಆ ದಿನ ಪ್ರವೇಶವಿರುವುದಿಲ್ಲ. ಇದಷ್ಟೆ ಅಲ್ಲದೆ, ವಂಡರ್‌ಲಾ ರೆಸಾರ್ಟ್‌HBನಲ್ಲಿಯೂ ಸಹ ಮಹಿಳೆಯರಿಗೆ…

ದೇಶದಲ್ಲೇ ವಿನೂತನ ಪು ನೀತ್ಉಪಗ್ರಹ ಅಭಿವೃದ್ಧಿ ಯೋಜನೆಗೆ ಚಾಲನೆ

ಬೆಂಗಳೂರು,ಫೆ,28: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರಕಾರಿ ಶಾಲೆಗಳ ಮಕ್ಕಳೇ ಉಪಗ್ರಹ ಅಭಿವೃದ್ಧಿ ಮಾಡಲಿದ್ದು, ಇದಕ್ಕೆ ದಿವಂಗತ ನಟ ಪುನೀತ್ ರಾಜಕುಮಾರ್ ಗೌರವಾರ್ಥವಾಗಿ ಅವರ ಹೆಸರನ್ನೇ ಇಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. `ರಾಷ್ಟ್ರೀಯ ವಿಜ್ಞಾನ ದಿನ’ದ ಅಂಗವಾಗಿ ಮಲ್ಲೇಶ್ವರಂನ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ಮತ್ತು ಭಾರತೀಯ ತಂತ್ರಜ್ಞಾನ…

ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಯೋಜನೆ: ಮುಖ್ಯಮಂತ್ರಿ ಬೊಮ್ಮಾಯಿ

ಬೆಳಗಾವಿ, ಫೆ.28: ಕಿತ್ತೂರಿನಿಂದ ಬೆಳಗಾವಿ ಮೂಲಕ ಮಹಾರಾಷ್ಟ್ರ ಗಡಿಯವರೆಗಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ‌ಸಂಪೂರ್ಣವಾಗಿ ಜಲಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಬೆಳಗಾವಿ ಜಿಲ್ಲೆಯಿಂದ ಆರಂಭಿಸಲಾಗುವ ಈ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಅನುಷ್ಢಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಒಟ್ಟು 3972 ಕೋಟಿ ರೂಪಾಯಿ ವೆಚ್ಚದ 238 ಕಿ.ಮೀ. ಉದ್ದದ…

ಮಲ್ಲಣ್ಣನ ಏಕಾಂಗಿ ಹೋರಾಟದ ಸಾಧನೆಯ ಹಾದಿ..

ಮಲ್ಲಣ್ಣ ನ ಏಕಾಂಗಿ ಹೋರಾಟದ ಸಾಧನೆಯ ಹಾದಿ… ಅಂದು ಸೆಪ್ಟೆಂಬರ್ ತಿಂಗಳ ಒಂದು ಶನಿವಾರ, ಮುಂಜಾನೆಯ ಒಪ್ಪತ್ತಿನ ಶಾಲೆಗೆ ಆತುರಾತುರದಲ್ಲಿ ತಯಾರಾಗಿ ಮನೆ ಬಿಟ್ಟವನು, ಊರಿನ ಮುಖ್ಯರಸ್ತೆಯ ಚಂದ್ರಮೌಳೇಶ್ವರ ದೇವಸ್ಥಾನದ ಮುಂದಿನಿಂದ ಸಾಗಿ, ಪೊಲೀಸ್ ಸ್ಟೇಷನ್ ಬಲಕ್ಕೆ ತಿರುಗಿ, ಊರ ಮುಖ್ಯರಸ್ತೆಯನ್ನು ಕುರುಬರ ಕೇರಿಗೆ ಜೋಡಿಸುತ್ತಿದ್ದ ವಿಶಾಲವಾದ ರಸ್ತೆಯಲ್ಲಿ ಮುನ್ನಡೆಯುತ್ತಾ, ರಸ್ತೆಯ ಬಲಬದಿಗೆ ಬರುತ್ತಿದ್ದ ಭದ್ರಪ್ಪಶೆಟ್ಟಿಯವರ ಅಂಗಡಿಯನ್ನು ದಾಟಿ, ಪಕ್ಕದಲ್ಲಿಯೇ ಇದ್ದ ಕುಂಬಾರ ಏಕಾಂತಮ್ಮನ ಹೋಟೆಲ್ ಸಮೀಪಿಸಲು, ಹೆಗಲಿಗೆ ನೇತು ಹಾಕಿದ ಸ್ಕೂಲ್ ಬ್ಯಾಗ್…

ವಿ.ವಿ.ಗಳಲ್ಲಿ ಇ-ಆಫೀಸ್ ಕಡ್ಡಾಯ: ಮಾರ್ಚ್ 1ರ ಗಡುವು ವಿಧಿಸಿದ ಸಚಿವ ಅಶ್ವತ್ಥನಾರಾಯಣ

ಬೆಂಗಳೂರು,ಫೆ,25: ರಾಜ್ಯದ ಎಲ್ಲ ಸರಕಾರಿ ವಿಶ್ವವಿದ್ಯಾಲಯಗಳು ಮಾರ್ಚ್ 1ರಿಂದ ತನ್ನ ಎಲ್ಲ ಕಡತಗಳನ್ನು ಇ- ಕಚೇರಿ ಮೂಲಕವೇ ಅನ್ ಲೈನ್ ನಲ್ಲಿ ಕಳುಹಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಗಡುವಿನ ನಂತರ ಭೌತಿಕವಾಗಿ ಬರುವ ಎಲ್ಲ ಕಡತಗಳನ್ನು ವಾಪಸ್ ಕಳುಹಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಬಗ್ಗೆ ತಮ್ಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, `ಇ-ಆಫೀಸ್’ ತಂತ್ರಾಂಶದ ಮೂಲಕವೇ ಕಡತಗಳನ್ನು ಕಳುಹಿಸಲು ವಿ.ವಿ.ಗಳಿಗೆ ಈ ಹಿಂದೆಯೇ…

ಉಗ್ರಗಾಮಿಗಳ ಅಭಿಪ್ರಾಯ ಬಹುಸಂಖ್ಯಾತರ ಅಭಿಪ್ರಾಯವಾಗಲು ಹೇಗೆ ಸಾಧ್ಯ?

ಉಗ್ರಗಾಮಿಗಳ ಅಭಿಪ್ರಾಯ ಬಹುಸಂಖ್ಯಾತರ ಅಭಿಪ್ರಾಯವಾಗಲು ಹೇಗೆ ಸಾಧ್ಯ? Writing;ಮಾನಸ,ಬೆಂಗಳೂರು ನರಶಿಂಗನಾಡ್ ಸರಸ್ವತಿ, ಮಹಾಮಂಡಲೇಶ್ವರ, ಧರ್ಮಸಭೆ, ಹರಿದ್ವಾರದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ನೀಡಿದ ನರಮೇಧದ ಕರೆ, ಗುರುಗ್ರಾಮದಲ್ಲಿ ಹಿಂದುತ್ವವಾದಿ ಗುಂಪುಗಳು ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಮುಸ್ಲಿಮರಿಗೆ ಅಡ್ಡಿ ಮತ್ತು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಹಿಂದೂ ಯುವ ವಾಹಿನಿಯ ಮುಸ್ಲಿಂ ವಿರೋಧಿ ನಿದರ್ಶನವನ್ನು ಅನೇಕರು ಬಳಸಿದ್ದಾರೆ ಹಾಗೂ ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಸಿದ್ಧಾಂತವನ್ನು ಮುಸ್ಲಿಮರು ಮುಂದಿಡುತ್ತಾರೆ. ಯಾವುದೇ ಸಾಮಾನ್ಯ ಮುಸ್ಲಿಮರ ದೈನಂದಿನ ಜೀವನವು ಅವರು ಈ ಹಠಾತ್ ಉಗ್ರಗಾಮಿ ಸ್ಫೋಟಗಳಿಂದ…

ಮತ್ರ್ಯದಾ ಸೋಜಿಗವ ನೋಡೊ ಬಸವಣ್ಣ!

ಮತ್ರ್ಯದಾ ಸೋಜಿಗವ ನೋಡೊ ಬಸವಣ್ಣ! ಹಾಡುವ ಪರಂಪರೆಯ ಮೂಲಕ ಆಧುನಿಕ ಕಾವ್ಯಕ್ಕೆ ಮತ್ತೊಂದು ಬಗೆಯ ಪ್ರೇರಣೆ ಕೊಟ್ಟವರು ತತ್ವಪದಕಾರರು. ಹಾಗೆ ನೋಡಿದರೆ ಶರೀಫರ ರಿವಾಯತ್ ಪದಗಳು ಲಾವಣಿ ಸಂಪ್ರದಾಯಕ್ಕೇ ಸೇರಿದವು.ಆಧುನಿಕ ಕಾವ್ಯಕ್ಕೇ ಭಾಷೆಯ ಬಳಕೆ ಕುರಿತು ಸೂಚನೆ ನೀಡಬಲ್ಲ ತತ್ವಪದಕಾರರು, ಪ್ರಾದೇಶಿಕ ವೈವಿಧ್ಯತೆಯನ್ನು ತಂದವರು. “ಬಯಲು ಆಲವಿಗೆ ನವಿಲು ಕುಣಿದು ನಿಂತು ತೈಲವಿಲ್ಲದ ಜ್ಯೋತಿ ಬೆಳಕು ಮದೀನದಿ” ಎನ್ನುವಾಗ ಇಲ್ಲಿ ಕುಣಿಯುವ ನವಿಲು ಹೊಸ ರೀತಿಯದು ಹೀಗೆ ಹೇಳುವ ಭಾಷೆಯೂ ಕೂಡ ಹೊಸ ಬಗೆಯದು. ಹೊಸ…

ಕೆಟ್ಟ ರಾಜಕಾರಣಕ್ಕೆ ಇನ್ನೆಷ್ಟು ಮುಗ್ದರ ಬಲಿ ಬೇಕು?

ಕೆಟ್ಟ ರಾಜಕಾರಣಕ್ಕೆ ಇನ್ನೆಷ್ಟು ಮುಗ್ದರ ಬಲಿ ಬೇಕು? Writing-ಪರಶಿವ  ಈಗ ಸದ್ಯಕ್ಕೆ ಭಾರತದಲ್ಲಿ ಯಾವ ಧರ್ಮಗಳೂ ಅಪಾಯದಲ್ಲಿ ಇಲ್ಲ! ಮನುಷ್ಯತ್ವ ಅಪಾಯದಲ್ಲಿದೆ! ಮನುಷ್ಯರು ಕೊಲೆಯಾಗುತ್ತಿದ್ದಾರೆ! ಧರ್ಮದ ಅಫೀಮು ಕುಡಿದವರ ಕೈಯಲ್ಲಿ ನಡುಬೀದಿಯಲ್ಲಿ ಮನುಷ್ಯತ್ವ ಕೊಲೆಯಾಗುತ್ತಿದೆ! ಅಮಾಯಕರ ಸಮಾದಿಗಳ ಮೇಲೆ ಸರ್ಕಾರ ರೂಪಿಸುವ ಸಂಚು ನಡೆಸುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳು, ಮುಗ್ಧ ಜನರ ಸಾವಿನಲ್ಲಿ ಲಾಭ ಪಡೆಯಲು ಶವಯಾತ್ರೆಯ ಮೆರವಣಿಗೆಗಳಲ್ಲಿ, ಹಿಂದೂ-ಮುಸ್ಲಿಂ ಹೆಸರಿನಲ್ಲಿ ಧರ್ಮರಾಜಕಾರಣ ಮಾಡುತ್ತಿದ್ದಾರೆ. ಭ್ರಷ್ಟ ರಾಜಕೀಯ ಪಕ್ಷಗಳ ಪುಡಾರಿಗಳ, ನಕಲಿ ದೇಶಪ್ರೇಮಿ ಸಂಘಟನೆಗಳ ಮುಖಂಡರ ಮಾತು…

ಸಾಮಾಜಿಕ ನ್ಯಾಯ ಪರಿಕಲ್ಪನೆ ಆರಂಭವಾಗಿದ್ದು ಬಸವಣ್ಣನ ಕಾಲದಿಂದ; ರಘುಮೂರ್ತಿ

ಚಳ್ಳಕೆರೆ, ಫೆ,24:ಸಾಮಾಜಿಕ ನ್ಯಾಯದ ಪರಿಕಲ್ಪನೆ 12ನೇ ಶತಮಾನದ ಬಸವಣ್ಣನವರಿಂದ ಲು ಪ್ರಾರಂಭವಾಗಿದೆ ಎಂದು ತಹಶಿಲ್ದಾರ ರಘುಮೂರ್ತಿ ಹೇಳಿದರು. ಚಳ್ಳಕೆರೆ ತಾಲೂಕಿನ ಹಳ್ಳಿ ಗ್ರಾಮದಲ್ಲಿ ಸಾಮಾಜಿಕ ಪರಿಕಲ್ಪನೆಯ ದಿನಾಚರಣೆಯ ಪ್ರಾಸ್ತಾವಿಕವಾಗಿ ಮಾತನಾಡಿ ಬಸವಣ್ಣನವರಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ ವರೆಗೂ ಸಮಾಜದಲ್ಲಿ ಇವತ್ತು ಸಮಾನತೆಯ ಬಗ್ಗೆ ಜಾಗೃತಿ ಉಂಟು ಮಾಡಿದರು ಸಮಾಜದಲ್ಲಿ ಶೇಕಡ ನೂರರಷ್ಟು ಪರಿವರ್ತನೆ ಕಾಣದಿರುವುದು ತುಂಬಾ ವಿಷಾದದ ಸಂಗತಿ ಎಂದರು. ಕಾರ್ಲ್ ಮಾರ್ಕ್ಸ್ ಮಾರ್ಟಿನ್ ಲೂಥರ್ ಕಿಂಗ್ ದಯಾನಂದ ಸರಸ್ವತಿ ಸ್ವಾಮಿ ವಿವೇಕಾನಂದ ಜ್ಯೋತಿ…

ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ರಷ್ಯಾ

ಮಾಸ್ಕೋ, ಫೆ, 24: ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಿಸಿದ್ದಾರೆ. ಉಕ್ರೇನ್‌ನಲ್ಲಿ ಐದು ಬಾರಿ ಸ್ಫೋಟಕ ಶಬ್ದ ಕೇಳಿಬಂದಿದೆ. ರಷ್ಯಾ ಜೊತೆಗಿನ ಬಿಕ್ಕಟ್ಟು ಹಿನ್ನೆಲೆಯಲ್ಲಿ ಉಕ್ರೇನ್ ಸರ್ಕಾರ ಪೂರ್ವ ಉಕ್ರೇನ್ ನಲ್ಲಿ ವಿಮಾನ ನಿಲ್ದಾಣಗಳನ್ನು ಮಧ್ಯರಾತ್ರಿಯಿಂದ ಮುಚ್ಚಿದೆ. ರಷ್ಯಾದ ವಾಯುಯಾನ ಅಧಿಕಾರಿಗಳು ವಾಯುಪ್ರದೇಶದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾರಣ ಉಕ್ರೇನಿಯನ್ ವಾಯುಯಾನ ಅಧಿಕಾರಿಗಳು ಪೂರ್ವ ಭಾಗದಲ್ಲಿ ಕೆಲವು ವಾಯುಪ್ರದೇಶಗಳನ್ನು “ಅಪಾಯಕಾರಿ ಪ್ರದೇಶಗಳು” ಎಂದು ಘೋಷಿಸಿದ್ದಾರೆ. ಪುಟಿನ್ ಭೇಟಿಯಾದ ಖಾನ್: ಪಾಕಿಸ್ತಾನಕ್ಕೆ ಅಮೆರಿಕಾ ಎಚ್ಚರಿಕೆ…

ನಿರ್ದೇಶನ, ಸಾಹಿತ್ಯರಚನೆ, ಅಭಿನಯ ಕ್ಷೇತ್ರಗಳ ಸಾಧಕಜಿ.ವಿ.ಅಯ್ಯರ್

ನಿರ್ದೇಶನ, ಸಾಹಿತ್ಯರಚನೆ, ಅಭಿನಯ ಕ್ಷೇತ್ರಗಳ ಸಾಧಕಜಿ.ವಿ.ಅಯ್ಯರ್ ವಿಶ್ವದ ಪ್ರಥಮ ಸಂಸ್ಕೃತಚಿತ್ರ ರೂಪಿಸಿದ ಗಣಪತಿಅಯ್ಯರ್ ವೆಂಕರಮಣಅಯ್ಯರ್ ೧೯೧೭ರ ಸೆಪ್ಟೆಂಬರ್ ೩ರಂದು ಜನಿಸಿದರು.ಓದಿಗೆ ವಿರಾಮ ಹಾಕಿ ಹತ್ತನೆ ವಯಸ್ಸಿನಲ್ಲಿ ಮನೆ ಬಿಟ್ಟುಗುಬ್ಬಿ ಕಂಪನಿಗೆ ಬಂದರೆಅಲ್ಲಿದೊರೆತದ್ದು ಪರಿಚಾರಕನ ಕೆಲಸ.ಮೂರು ವರ್ಷ ಈ ಕಾಯಕ.ಬಿಡುವಿನ ವೇಳೆಯಲ್ಲಿ ಪರದೆ ಬರೆಯುವಕಲಾವಿದನ ಬಳಿ ನಿಂತು ಕುಳಿತು ನೋಡಿಕುಂಚಕಲೆಯನ್ನುಕರಗತ ಮಾಡಿಕೊಂಡರು.ಪೋಸ್ಟರ್ ಬರೆಯುವ ಉಪ ವೃತ್ತಿ ಕೊಂಚ ದಿವಸ. ಚಲನಚಿತ್ರದಲ್ಲಿ ಅವಕಾಶ ಅರಸಿ ಪುಣೆಗೆ ಬಂದರೆಅಲ್ಲಿದೊರೆತದ್ದು ಹೋಟೆಲ್ ಮಾಣಿ ಕೆಲಸ. ೧೯೩೨ರಲ್ಲಿ ನಂಜನಗೂಡಿಗೆ ಹಿಂದಿರುಗಿದರು. ಯಂತ್ರಕಟ್ಟುವತಂತ್ರ ವಿದ್ಯೆ, ಬಡಗಿ…

ಕುತೂಹಲದ ಕದನ ಕಾರಣ

ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತಿದೆ ರಾಜ್ಯದ ಮುಂದಿನ ಸಿಎಂ ಯಾರೆಂಬ ಚರ್ಚೆಯ ನಿರೀಕ್ಷಿತ ಫಲಿತ. ಡಿಕೆ ಶಿವಕುಮಾರ್ ಶತಾಯಗತಾಯ ಸಿಎಂ ಆಗುವ ಓಟ ಶುರುಮಾಡಿದ್ದಾರೆ. ಅವರನ್ನು ತಡೆದು ತಾವು ಮತ್ತೆ ಪೀಠಾಧಿಕಾರಿಯಾಗುವ ಛಲದಲ್ಲಿ ಸಿದ್ದರಾಮಯ್ಯ ತಂತ್ರ ಹೆಣೆಯುತ್ತಿದ್ದಾರೆ. ಇದೀಗ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿರುವ ಬಿಕೆ ಹರಿಪ್ರಸಾದ್ ಹೆಸರೂ ಓಡುತ್ತಿದೆ. ದಿಲ್ಲಿ ಹೈಕಮಾಂಡ್‌ನ ಮನವೊಲಿಕೆ ಎಂಬ ಚಾಲಾಕಿ ರಾಜಕೀಯದಲ್ಲಿ ಹರಿಪ್ರಸಾದ್ ಈ ಇಬ್ಬರಿಗಿಂತ ಮುಂದಿರುವುದು ಭವಿಷ್ಯದ ರಾಜಕೀಯವನ್ನು ಉಲ್ಟಾಪಲ್ಟಾ ಮಾಡಬಹುದೇ…? ಕುತೂಹಲದ ಕದನ ಕಾರಣ…

ಹಂಪೆಯ ವಿಠ್ಠಲ ದೇವಾಲಯ, ಕಲ್ಲಿನ ರಥ ಮತ್ತು ಸಂಗೀತ ಕಂಬಗಳೂ…

ಹಂಪೆಯ ವಿಠ್ಠಲ ದೇವಾಲಯ, ಕಲ್ಲಿನ ರಥ ಮತ್ತು ಸಂಗೀತ ಕಂಬಗಳೂ… ಹಂಪೆಯ ಅತ್ಯಂತ ಕಲಾತ್ಮಕ ಮತ್ತು ವೈಭವಯುತ ದೇಗುಲವೆಂದರೆ ಅದು ವಿಠಲ ದೇವಾಲಯವೇ ಆಗಿದೆ. ವಿಜಯನಗರ ಕಾಲದ ಕಲೆ, ವಾಸ್ತುಶಿಲ್ಪ, ಮೂರ್ತಿಶಿಲ್ಪವಲ್ಲದೆ ಸಂಗೀತ, ನೃತ್ಯಗಳಿಗೆ ಕೈಗನ್ನಡಿಯಾಗಿ ನಿಂತಿರುವ ದೇವಾಲಯವಿದು. ಹಂಪೆ ಎಂದಾಕ್ಷಣ ನೋಡಲೇ ಬೇಕಾದದ್ದು ಕಲ್ಲಿನ ರಥ. ಜಗತ್ತಿನ ಗಮನ ಸೆಳೆದು ವಿಶ್ವಪ್ರಸಿದ್ಧಿ ಪಡೆದ ವಾಸ್ತುವಿದು. ಇದು ವಿಜಯನಗರ ಅಥವಾ ಹಂಪೆಯ ಐಕಾನ್ ಎನ್ನುವಂತೆ ಚಿರಪರಿಚಿತವಾಗಿರುವುದು ಗಮನಾರ್ಹ. ಹಾಗೆಯೇ ಹಂಪೆಯ ಇತರ ದೇವಾಲಯಗಳಿಗಿಂತ ಅತ್ಯಂತ ಸುಂದರವಾಗಿ ಮತ್ತು…

ಮೈಲಾರವೂ, ಪರಂಪರೆ ಮತ್ತು ಅಲ್ಲಿನ ಕಾರ್ಣೀಕವೂ

ಮೈಲಾರವೂ, ಪರಂಪರೆ ಮತ್ತು ಅಲ್ಲಿನ ಕಾರ್ಣೀಕವೂ ಕರ್ನಾಟಕದ ಪ್ರಸಿದ್ಧ ಜನಪದ ದೈವವಿರುವ ನೆಲೆಗಳಲ್ಲಿ ಮೈಲಾರ ಪ್ರಮುಖವಾದದ್ದು. ಇದು ಮೈಲಾರ ದೇವರು ಆದಿಮ ದೈವವೂ ಅಗಿದೆ. ಪಶುಪಾಲಕರ ಅದಿದೈವವಾದ ಇದು ವಿಜಯನಗರ ಜಿಲ್ಲೆಯಲ್ಲಿ ತುಂಗಭದ್ರಾ ನದಿಯ ಬಲದಂಡೆಯ ಮೇಲಿರುವ ಮೈಲಾರದಲ್ಲಿದೆ. ಇದನ್ನು ಹಿರೇಮೈಲಾರವೆಂತಲೂ ಕರೆಯುತ್ತಿದ್ದು, ಇದೇ ಮೈಲಾರದೇವರ ಮೂಲನೆಲೆಯೆಂದೂ ಹೇಳುತ್ತಾರೆ. ಮೈಲಾರವೆಂಬುದು ಮೈಲಾರಿ, ಮೈಲಾಳಿ ಮಲ್ಲಯ್ಯ, ಮಲ್ಲೇಶ್ವರ, ಮಲುದೇವ, ಮಲ್ಲಾರ, ಮಲ್ಲಾರಿ, ಮಲ್ಲಿಕಾರ್ಜುನ ಮೊದಲಾದ ಹೆಸರುಗಳಿಂದ ನಾಡಿನಾದ್ಯಂತ ಆರಾಧನೆಗೊಳ್ಳುತ್ತದೆ. ಇದು ಕರ್ನಾಟಕದಲ್ಲಿ ಮೈಲಾರವೆಂಬ ಹೆಸರಿನ ಅನೇಕ ಕ್ಷೇತ್ರಗಳನ್ನು…

ನಿರ್ಮಾಪಕ, ನಿರ್ದೇಶಕ, ನಟ ವಾದಿರಾಜ್

ನಿರ್ಮಾಪಕ, ನಿರ್ದೇಶಕ, ನಟ ವಾದಿರಾಜ್ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ನಟ ವಾದಿರಾಜ್ ಉಡುಪಿಯ ಬಳಿ ಫಣಿಯಾಡು ಎಂಬಲ್ಲಿ ೧೯೨೭ರ ಜನವರಿ ೩ರಂದು ಜನಿಸಿದರು. ತಂದೆ ಶ್ರೀನಿವಾಸ ಫಣಿಯಾಡಿ, ತಾಯಿ ಭಾರತಿ, ತಂದೆ ಸ್ವಾತಂತ್ರ ಹೋರಾಟಗಾರರು ಹಾಗೂ ನಾಟಕ ರಚನೆಕಾರರು. ಬಾಲ್ಯವನ್ನು ತಮ್ಮ ಊರಿನಲ್ಲಿಯೇ ಕಳೆದ ವಾದಿರಾಜ್ ಮದರಾಸಿಗೆ ತೆರಳಿದರು. ಅಲ್ಲಿ ಕೊಂಚ ಕಾಲ ಇದ್ದು ಪುನಃ ತನ್ನೂರಿಗ ಬಂದು ತಮ್ಮ ತಂದೆ ರಚಿಸಿದ್ದ ಕೆಲವು ನಾಟಕಗಳಲ್ಲಿ ಅಭಿನಯಿಸುವ (ಮೂಲಕ ಕಲಾರಂಗಕ್ಕೆ ಕಾಲಿರಿಸಿದರು.೧೯೫೬ರಲ್ಲಿ ತೆರೆಗೆ ಬಂದ ’ಕೋಕಿಲವಾಣಿ’ ಚಿತ್ರದ…

1 25 26 27 28 29 99
Girl in a jacket