ಮಾಜಿ ಸ್ಪೀಕರ್ ಕೃಷ್ಣ ನಿಧನ-ಕಂಬನಿ ಮಿಡಿದ ಗಣ್ಯರು
ಬೆಂಗಳೂರು,ಮೇ,೨೧;ನಾಡಿನ ಹಿರಿಯ ಮುತ್ಸುದ್ದಿ ಮಾಜಿ ವಿಧಾನಸಭಾಧ್ಯಕ್ಷ ಕೃಷ್ಣ ಅವರು ಇಂದು ನಿಧರಾಗಿದ್ದಾರೆ. ಅವರಿಗೆ೮೧ ವರ್ಷ ವಯಸ್ಸಾಗಿತ್ತು. ಲಿವರ್ ಕ್ಯಾನ್ಸ್ರ್ನಿಂದ ಬಳಲುತ್ತಿದ್ದ ಅವರು ಚೈನೈ ಆಪಲೋಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಕಾರಿಯಾಗಿದೆ ಅಸುನೀಗಿದ್ದಾರೆ. ಪತ್ನಿ ಇಂದ್ರಮ್ಮ,ಪುತ್ರಿಮಂಜುಳಾ ಅಳಿಯ ಶ್ರೀಧರ್ ಇಬ್ಬರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಎಸ್.ಆರ್.ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ರೇಷ್ಮೆ ಸಚಿವರಾಗಿದ್ದ ಕೃಷ್ಣ ಮೂರು ಅವಧಿಕೆ ಕೆ.ಆರ್. ಪೇಟೆ ಶಾಸಕರಾಗಿದ್ದರು. ಎಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.…




















