Girl in a jacket

Author kendhooli_editor

ಭಾರತೀಯಾ ನೌಕಪಡೆಗೆ ಆರು ಜಲಾಂರ್ಗಾಮಿ ನೌಕೆಗಳ ನಿಮರ್ಮಾಣಕ್ಕೆ ಅನುಮೋದನೆ

ನವದೆಹಲಿ,ಜೂ,04:ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಭಾರತೀಯ ನೌಕಾಪಡೆಗಾಗಿ ಆರು ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ಮೆಗಾ ಯೋಜನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಹೆಚ್ಚುತ್ತಿರುವ ಚೀನಾ ಅತಿಕ್ರಮಣವನ್ನು ನಿರ್ವಹಿಸುವ ನಿಟ್ಟಿನಲ್ಲಿ ಮತ್ತು ನೌಕಾಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಇಲಾಖೆ ಮತ್ತೆ ಆರು ಹೊಸ ಸಬ್ ಮೆರಿನ್ ಗಳ ನಿರ್ಮಾಣಕ್ಕೆ ಅಸ್ತು ಎಂದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆಯಲ್ಲಿ ಈ…

ಬಿಟ್ಕಾಯಿನ್ನ‌ನಂತ ಕಿಪ್ಟೋಕರೆನ್ಸೆಗಳ ಬಗ್ಗೆ ರಿಜರ್ವಬ್ಯಾಂಕ್ ದೃಷ್ಟಿಕೋನಬದಲಾಗಿಲ್ಲ;ಶಕ್ತಿಕಾಂತ್ ದಾಸ್ ಸ್ಪಷ್ಟನೆ

ಮುಂಬೈ,ಜೂ,04: ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳ ಬಗ್ಗೆ ರಿಸರ್ವ್ ಬ್ಯಾಂಕಿನ ದೃಷ್ಟಿಕೋನವು ಬದಲಾಗಿಲ್ಲ ಆ ಬಗ್ಗೆ ಕಳವಳಗಳನ್ನುಹೊಂದಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಆರ್‌ಬಿಐ ನೀತಿ ನಿರೂಪಣೆ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಾವುದೇ ಸಾರ್ವಭೌಮತ್ವವನ್ನು ಹೊಂದಿರದ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿರುವ ಆರ್‌ಬಿಐ ಈ ವಿಷಯದ ಬಗ್ಗೆ 2018 ರಲ್ಲಿ ಮೊದಲ ಬಾರಿಗೆ ಸುತ್ತೋಲೆ ಹೊರಡಿಸಿತ್ತು. ಅಂತಹಾ ಕ್ಷೇತ್ರಗಳಲ್ಲಿ ವ್ಯವಹರಿಸುವ, ನಿಯಂತ್ರಿಸುವ ಘಟಕಗಳನ್ನು ಅದು ನಿರ್ಬಂಧಿಸಿತ್ತು. ಆದಾಗ್ಯೂ, 2020…

ಹಸಿದವರ ನೆರವಿಗೆ ಧಾವಿಸಿ :ಡಾ ಆರೂಢಭಾರತೀ ಸ್ವಾಮೀಜಿ.

ಬೆಂಗಳೂರು,ಜೂ,04:ಕೊರೊನಾ ಮಹಾಮಾರಿ ಇಡೀ ಜನಜೀವನವನ್ನೇ ತಲ್ಲಣಗೊಳಿಸಿದೆ. ಜನತೆ ಸ್ವಾರ್ಥ ತ್ಯಜಿಸಿ ಮಾನವೀಯತೆ ಮೆರೆಯಬೇಕು. ಹಸಿದವರಿಗೆ ಅನ್ನದಾನದಂಥ ನೆರವಿಗೆ ಧಾವಿಸಬೇಕು ” ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು. ಅವರು ಇಂದು ಕೆಂಗೇರಿಯ ಕೋಟೆ ಬೀದಿಯಲ್ಲಿ ದೇಶಭಕ್ತಿ ಫೌಂಡೇಶನ್, ಕಲಾ ಕದಂಬ ಆರ್ಟ್ ಸೆಂಟರ್ ಹಾಗೂ ಒಳಿತಿಗಾಗಿ ಮಿಡಿಯುವ ಮನಸುಗಳ ತಂಡ ಇವುಗಳ ಸಹಯೋಗದಲ್ಲಿ ನಡೆದ ಅನ್ನಗಂಗಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಕೆಂಗೇರಿಯಲ್ಲಿ ಈ ಯೋಜನೆ ಕಳೆದ ಹದಿನೈದು…

ವಕೀಲರಿಗೆ ಫುಡ್ ಕಿಟ್ ವಿತರಣೆ

ಬೆಂಗಳೂರು,ಜೂ,04:ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೆ ಅಹಾರ ಸಾಮಾಗ್ರಿಗಳನ್ನು ರಾಜ್ಯ ಹೈಕೋರ್ಟ್ ಮುಂಭಾಗದಲ್ಲಿ ಹಂಚಲಸಯಿತು. ಹಿರಿಯ ವಕೀಲರೂ ಸಮಾಜ ಸೇವಕರೂ ಆದ ಎಚ್.ಆರ್ .ದುರ್ಗಪ್ರಸಾದ್ ಅವರು 250 ಜನಕ್ಕೂ ಹೆಚ್ಚು ವಕೀಲರಿಗೆ ಪುಡ್ ಕಿಟ್ ವಿತರಿಸಿದರು.ಈ ವೇಳೆ ಹಿರಿಯ ವಕೀಲರಾದ ಭಕ್ತವತ್ಸಲಂ ಮೊದಲಾದವರು ಹಾಜರಿದ್ದರು.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಕರಣ ಇಳಿಮುಖ

ಬೆಂಗಳೂರು,ಜೂ,04: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೊಂಕಿತರ ಪ್ರಕರಣಗಳು ಇಳಿಮುಖವಾಗುತ್ತಿವೆ .ಇಂದು 16,068 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 26,69,514ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 364 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 30,895ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು 3,221 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 11,77,496ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ…

ಗರ್ಭಿಣಿ ಮಹಿಳೆಯರ ಬೇಸಿಗೆ ಮತ್ತು ಮಳೆಗಾಲದ ಸುರಕ್ಷಾ ಸಲಹೆಗಳು

ಲೇಖಕರು – ಡಾ. ವಿಜಯ ಮನೋಹರ್ ಸೀನಿಯರ್ ಕನ್ಸಲ್ಟೆಂಟ್ ಗೈನೆಕಾಲಜಿ ಮತ್ತು ಪ್ರಸೂತಿಗಳು ಅಪೊಲೊ ಕ್ರೆಡಲ್ ಕೋರಮಂಗಲ, ಬೆಂಗಳೂರು. ನಮಗೆ ಬೇಸಿಗೆ ಅಂದರೆ ಪ್ರಖರ ಮಯ ಪ್ರಕಾಶಮಾನವಾದಸೂರ್ಯನ ಬೆಳಕು ಎಂದರ್ಥ. ಹೆಚ್ಚು ಬೆಚ್ಚಗಿನ ದಿನಗಳು ಅಂದರೆ ಮಳೆ ಮತ್ತು ಚಳಿಗಾಲದ ತಿಂಗಳುಗಳು. ಅನೇಕ ಮಹಿಳೆಯರು ತಮ್ಮ ಪ್ರತಿದಿನ ಜೀವನವನ್ನು ಹೇಗೆ ಪರಿಣಾಮ ಬೀರಬಹುದೆಂಬುದರ ಇತರ ಅಂಶಗಳ ಮೇಲೆ ತಾಪಮಾನ ದುಃಖದಿಂದ ದೂರವಿರಲು ಮೊದಲು ಹವಾಮಾನ ಪಟ್ಟಿಗಳನ್ನು ಹಾಕಿಕೊಳ್ಳಬೇಕು. ವರ್ಷದ ಯಾವುದೇ ಸಮಯದಲ್ಲಿ ಗರ್ಭಾವಸ್ಥೆಯು ರೋಮಾಂಚನಗೊಳ್ಳುತ್ತವೆ. ಎನ್ನುವುದನ್ನು ಆನಂದಿಸಬೇಕು!…

ಶಿವಾಜಿ ಗಣೇಶನ್‌ಅಭಿನಯದ ಪಂತುಲು ನಿರ್ಮಾಣದ ಮೊದಲ ಚಿತ್ರಮೊದಲತೇದಿ

ಸ್ಕೂಲ್ ಮಾಸ್ಟರ್, ಶ್ರೀಕೃಷ್ಣದೇವರಾಯ, ಕಿತ್ತೂರುಚೆನ್ನಮ್ಮ ಮೊದಲಾದ ಮಹೋನ್ನತ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ಅಭಿನಯಿಸಿದ ಬಿ.ಆರ್.ಪಂತುಲುತಮ್ಮ‘ಪದ್ಮಿನಿ ಪಿಕ್ಚರ್ಸ್‘ ಲಾಂಛನದಲ್ಲಿತೆರೆಗೆತಂದ ಮೊದಲ ಕನ್ನಡಚಿತ್ರ ‘ಮೊದಲ ತೇದಿ‘.ಮೊದಲ ಬಾರಿಗೆಕನ್ನಡಚಿತ್ರವೊಂದರಲ್ಲಿ ತಮಿಳಿನ ಖ್ಯಾತ ನಟ ಶಿವಾಜಿಗಣೇಶನ್ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸಿದ್ದು ಈ ಚಿತ್ರದ ವಿಶೇಷವಾಗಿತ್ತು.ಚಿ.ಸದಾಶಿವಯ್ಯನವರು ಈ ಚಿತ್ರದ ಮೂಲಕ ಸಾಹಿತಿಯಾಗಿಚಿತ್ರರಂಗ ಪ್ರವೇಶಿಸಿದರು.ಕನ್ನಡಕ್ಕೆ ಮಧುರ ಗೀತೆಗಳನ್ನು ನೀಡಿದ ಟಿ.ಜಿ.ಲಿಂಗಪ್ಪ ಸಂಗೀತ ನೀಡಿದ ಮೊದಲ ಚಿತ್ರವೂ ಹೌದು. ವಿಶೇಷವೆಂದರೆ ಈ ಚಿತ್ರದ ಮೂಲಕ ಚಿ.ಉದಯಶಂಕರ್ ಸಣ್ಣ ಪಾತ್ರವೊಂದನ್ನು ನಿರ್ವಹಿಸಿದ್ದೇ ಅಲ್ಲದೆ, ಸಹಾಯಕ ನಿರ್ದೇಶಕರಾಗುವ ಮೂಲಕ ಕನ್ನಡಚಿತ್ರರಂಗ…

ವಿರೂಪಾಕ್ಷ ಬೀದಿಯ ಮಂಟಪಗಳಲ್ಲಿ ಕೈಗೊಂಡ ಬಜಾರುಗಳ ಅಧ್ಯಯನ

ವಿರೂಪಾಕ್ಷ ಬೀದಿಯ ಮಂಟಪಗಳಲ್ಲಿ ಕೈಗೊಂಡ ಬಜಾರುಗಳ ಅಧ್ಯಯನ ಮುಂದುವರಿದ ಭಾಗ. . . . . ಅದೇ ತಾನೇ ಕೋಟಿಲಿಂಗವನ್ನು ನೋಡಲು ನದಿಗೆ ಇಳಿಯುವ ದುಸ್ಸಾಹಸಕ್ಕೆ ಕೈಹಾಕಿದ್ದೆವಲ್ಲಾ, ಅದೂ ಈಜುಬಾರದ ಗೆಳೆಯ ರೇಣುಕಾಪ್ರಸಾದ್ ಜೊತೆ. ಅಜ್ಜಿಯ ಮಾತು ಕೇಳದೆ ಕೋಟಿಲಿಂಗ ನೋಡಲು ನದಿಗೆ ಏನಾದರೂ ಇಳಿದಿದ್ದರೆ, ಉಕ್ಕಿ ಹರಿಯುವ ಪ್ರವಾಹದಲ್ಲಿ ಸಿಕ್ಕಿಕೊಂಡಿದ್ದರೆ, ನಮ್ಮಿಬ್ಬರ ಸ್ಥಿತಿ ಏನಾಗುತ್ತಿತ್ತು? ಅದನ್ನು ನೆನೆದು ಭಯಭೀತನಾದೆ. ಅಬ್ಬಾ ನಿಜಕ್ಕೂ ಬದುಕಿದೆವು ಎಂದು ಸಾವರಿಸಿಕೊಂಡೆನು. ಅದೂ ನಮ್ಮನ್ನು ಬದುಕಿಸಿದ್ದು ಬಾಳೆಹಣ್ಣು, ತೆಂಗಿನಕಾಯಿ ಮಾರುವ…

ಮೈಸೂರು ಜಿಲ್ಲಾ ಆಡಳಿತದಲ್ಲಿ ಅಯೋಮಯ-ಉಸ್ತುವಾರಿ ಸಚಿವರ ವೈಫಲ್ಯ

ಬೆಂಗಳೂರು,ಜೂ,೦೪: ಮೈಸೂರು ಜಿಲ್ಲಾ ಆಳಿತ ವ್ಯವಸ್ಥೆಯೇ ಹದಗೆಟ್ಟಿದೆ, ಅಸಮರ್ಥ ಉಸ್ತುವಾರಿ ಸಚಿವರಿಂದ ಇಡೀ ವ್ಯವಸ್ಥೆ ಹಾಳುಗೆಟ್ಟಂತಿದೆ. ಮೈಸೂರಿನಲ್ಲಿ ಕಳೆದ ಆರು ತಿಂಗಳಿನಿಂದಲೂ ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಧ್ಯೆ ನಿರಂತರವಾಗಿ ಮಾತಿನ ಸಮರಗಳು. ಏಟಿಗೆ-ಎದುರೇಟು ನಡೆಯುತ್ತಲೇ ಇದೆ ಇದರ ಮುಂದುವರೆದ ಭಾಗವಾಗಿ ಈಗ ಪಾಲಿಕೆ ಆಯುಕ್ತರೇ ರಾಜೀನಾಮೆ ಕೊಟ್ಟಿದ್ದಾರೆ ಎಂದರೆ ಇದರಲ್ಲಿ ಉಸ್ತುವಾರಿ ಸಚಿವ ಸೋಮಶೇಖರ್ ಅವರ ವೈಫಲ್ಯವಂತೂ ಎದ್ದು ಕಾಣುತ್ತದೆ. ಇದು ಕಳೆದ ಎರಡು ತಿಂಗಳಿನಿಂದಲೂ ಇಬ್ಬರಲ್ಲೂ ಆಂತರಿಕ ಕಚ್ಚಾಟ ನಡೆಯುತ್ತಿತ್ತು, ಜೊತೆಗೆ ಜನಪ್ರತಿನಿಧಿಗಳು ರೋಹಿಣಿ ವಿರುದ್ಧ…

ಪತ್ರಕರ್ತರು ದೇಶದ ಕನ್ನಡಿ- ಜಾಧವ್

ಶಿಕಾರಿಪುರ,ಜೂ,೦೪:ಪ್ರಜಾ ಪ್ರಭುತ್ವದ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿರುವ ಹಾಗೂ ಕೂ ರೋ ನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸುದ್ದಿ ಮಾಡಿ ಸಮಾಜದಲ್ಲಿ ಗುರುತಿಸಿ ಕೊಂಡಿರುವ ಪತ್ರಕರ್ತರು ದೇಶವನ್ನು ಪ್ರತಿಬಿಂಬಿಸುವ ಕನ್ನಡಿ. ಎಂದು ಬೀಳಕಿ ಆಯುಷ್‌ಮಾ ಇಲಾಖೆಯ ಆಯುರ್ವೇದ ಆಸ್ಪತ್ರೆ ವೈದ್ಯ ಡಾ.ಖೇಮು ಜಾಧವ್ ಅಭಿಪ್ರಾಯಿಸಿದರು. ಅವರು ಶಿಕಾರಿಪುರದ ಸುದ್ದಿ ಮನೆಯಲ್ಲಿ ಪತ್ರಕರ್ತರಿಗೆ ಆಯುರ್ವೇದದ ಮೆಡಿಕಲ್ ಕಿಟ್ ವಿತರಿಸಿ ಮಾತನಾಡಿದರು.ಆಯುಷ್ಮಾನ್ ಇಲಾಖೆಯ ಎಂಟುನೂರು ನಲವತ್ತು ಸಿಬ್ಬಂದಿಗಳು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುತ್ತಲೇ ಪ್ರತಿಭಟಿತ್ತಿದ್ದಾರೆ ಆದರೆ ಸರ್ಕಾರ…

ಪ್ರೊ.ವಸಂತ ಕುಷ್ಠಗಿ ನಿಧನ

ಬೆಂಗಳೂರು, ಜೂ,04:ಕನ್ನಡದ ಹಿರಿಯ ಬರಹಗಾರ, ಕವಿ,ಪ್ರೊ. ವಸಂತ ಕುಷ್ಟಗಿ ಅವರು ಇಂದು ನಿಧನರಾಗಿದ್ದಾರೆ. ಕನ್ನಡ ಪುಸ್ತಕಲೋಕಕ್ಕೆ ತಮ್ಮ ಅನನ್ಯ ಕಾವ್ಯ ಪ್ರತಿಭೆಯಿಂದ ಮಹತ್ವದ ಕೊಡುಗೆ ಕೊಟ್ಟ ಲೇಖಕರಲ್ಲಿ ಪ್ರೊಫೆಸರ್ ವಸಂತ ಕುಷ್ಟಗಿ ಅವರೂ ಒಬ್ಬರು. ಕಲ್ಬುರ್ಗಿ ಮೂಲದ ವಸಂತ ಕುಷ್ಟಗಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಎಂ. ಎ. ಪದವಿ ಪಡೆದ ನಂತರ ಬೀದರ್ ನ ಭೂಮಿ ರೆಡ್ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಆನಂತರ ವಿವಿಧ ಕಾಲೇಜುಗಳಲ್ಲಿ ಅನೇಕ ಹಂತದ ಹುದ್ದೆಗಳನ್ನು ನಿರ್ವಹಿಸಿ, ಪ್ರಾಂಶುಪಾಲರಾಗಿ ನಿವೃತ್ತರಾದರು. ರಮನಂದ ತೀರ್ಥ ಸಂಶೋಧನಾ…

ರಾಜ್ಯದಲ್ಲೂ ದ್ವತೀಯ ಪಿಯುಸಿ ಪರೀಕ್ಷೆ ರದ್ದು-ಸುರೇಶ್ ಕುಮಾರ್

ಬೆಂಗಳೂರು, ಜೂ,04: ಕೋವಡ್ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪರೀಕ್ಷೆ ರದ್ದು ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಛಿ ನಡೆಸಿ ಮಾತನಾಡಿದ ಅವರು, ರಾಜ್ಯದ ಶಿಕ್ಷಣ ತಜ್ಞರು, ಸಚಿವರು, ಹಿರಿಯ ಪತ್ರಕರ್ತರು, ಪೋಷಕರು ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಕೊರೊನಾವೈರಸ್ ಹಾವಳಿ ನಡುವೆ ಪರೀಕ್ಷೆ ನಡೆಸಬೇಕೋ ಬೇಡವೋ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ. ರಾಜ್ಯದಲ್ಲಿ ಒಂದು ವರ್ಗವು ಪರೀಕ್ಷೆ ಬೇಡ ಎನ್ನುತ್ತಿದ್ದರೆ, ಇನ್ನೊಂದು…

ವೇದ ಸುಳ್ಳಾದರೂ ಗಾದೆ ಸುಳ್ಳಾಗದು

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ‌‌‌‌‌           ಸಿದ್ಧಸೂಕ್ತಿ : ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಹತ್ತಾರು ಸಾವಿರ ವರ್ಷಗಳ ಹಿಂದೆ ತಪೋಮಗ್ನ ಋಷಿಮುಖದಿಂದ ಹೊರಹೊಮ್ಮಿದ ದಿವ್ಯ ವಾಣಿ ವೇದ. ಋಗ್ವೇದ ಯಜುರ್ವೇದ ಸಾಮವೇದ ಮೂರು ಪ್ರಾಚೀನ ವೇದಗಳು. ಧಾರ್ಮಿಕ ಆಧ್ಯಾತ್ಮಿಕ ವಿಷಯ ಇಲ್ಲಿದೆ. ಅಥರ್ವವೇದ ನಾಲ್ಕನೇ, ಅನಂತರದ್ದು. ಆಯುರ್ವೇದದಂಥ ಲೌಕಿಕ ವಿಷಯ ಇಲ್ಲಿದೆ. “ವೇದಗಳು ಚತುರ್ಮುಖ ಬ್ರಹ್ಮನ ಮುಖದಿಂದ ಬಂದವು, ಪುರುಷ ರಚಿತವಲ್ಲ. ಅವು ನಿತ್ಯ. ಒಂದಕ್ಷರ ಕದಲಿಸಲಾಗದು” ಇದು ಸಂಪ್ರದಾಯ ವಾದ.…

ಅಡ್ಡ ಹೆಸರು ಎಂಬ ಸಾಮಾಜಿಕ ಕಥನಗಳು

ಅಡ್ಡ ಹೆಸರು ಎಂಬ ಸಾಮಾಜಿಕ ಕಥನಗಳು ಮಾನವ ಚರಿತ್ರೆಗಳನ್ನ ರಾಜಕೀಯ ನೆಲೆಯಲ್ಲಿ ನೋಡುವಂತೆಯೇ ಸಾಂಸ್ಕೃತಿಕ ನೆಲೆಯಲ್ಲಿಯೂ ನೋಡ ಬಹುದಾಗಿದೆ.ಭಾಷೆಯಲ್ಲಿ  ಅಂಕಿತ ನಾಮಗಳು ವ್ಯಕ್ತಿ ಗುರುತನ್ನ ಹೇಳಿದರೆ ಅನ್ವರ್ಥ ನಾಮಗಳು ಆ ವ್ಯಕ್ತಿಯ ಸಾಂಸ್ಕೃತಿಕ ವಿವರಗಳನ್ನ ಸಾರುವ ಜೀವ ದ್ರವ್ಯಗಳಂತೆ ಕಾಣುತ್ತವೆ.ಅನ್ವರ್ಥ ನಾಮವನ್ನ ಅಡ್ಡ ಹೆಸರೆಂದು ಕರೆವ ಜನರ ಆಸಕ್ತಿಗಳನ್ನ ಸೂಕ್ಷ್ಮವಾಗಿ ಕೆದಕಿದಾಗ ಈ ’ಅಡ’ ಎಂಬ ನೇರವಲ್ಲದ ಹೆಸರಿಗೆ ಗ್ರಾಮ,ಬದುಕು,ವೃತ್ತಿ ಮತ್ತು ಜಾತಿ ಬೇರುಗಳ ಬಿಳಲುಗಳಿರುವುದನ್ನ ಗುರುತಿಸಬಹುದಾಗಿದೆ. ನಗರದಂತೆ ಹಳ್ಳಿಗಲ್ಲಿ ಇಣುಕುವ ಈ ಸಾಂಸ್ಕೃತಿಕ ಸಂಗತಿಗಳ…

ಹಿರಿಯ ನಟಿ ಬಿ ಜಯಾ ಇನ್ನಿಲ್ಲ

ಬೆಂಗಳೂರು,ಜೂ,03: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಕಲಾವಿದೆ, ಪೋಷಕ ನಟಿ ಬಿ.ಜಯಾ ಇಂದು ತಮ್ಮ ಕೊನೆಯುಸಿರೆಳೆದಿದ್ದಾರೆ. ಚಿತ್ರರಂಗದ ಅನೇಕ ಹಿರಿಯ ನಟರೊಂದಿಗೆ ಕಾಣಿಸಿಕೊಂಡಿದ್ದ ಅವರು, ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಸ್ಯ ಕಲಾವಿದೆಯಾಗಿದ್ದ ಅವರು, ಕನ್ನಡ ಚಿತ್ರರಂಗ ಹಿರಿಯ ಪೋಷಕ ನಟಿ ಬಿ.ಜಯಾ ಗುರುವಾರದಂದು ಕೊನೆಯುಸಿರು ಎಳೆದಿದ್ದಾರೆ. ಅನೇಕ ಹಿರಿಯ ನಟರೊಂದಿಗೆ ಕಾಣಿಸಿಕೊಂಡಿದ್ದ ನಟಿಯ ಸಾವಿಗೆ ಚಿತ್ರರಂಗವೇ ಕಣ್ಣೀರು ಸುರಿಸತೊಡಗಿದೆ. ಎತ್ತರದಲ್ಲಿ ಕೊಂಚ ಕುಳ್ಳಗಿದ್ದ ಜಯಾ ಅವರು ಕುಳ್ಳಿ ಜಯಾ ಎಂದೇ ಜನಪ್ರಿಯರಾಗಿದ್ದರು. ಸುಮಾರು 300ಕ್ಕೂ ಅಧಿಕ…

ಜೂ.14 ರವರೆಗೂ ಲಾಕ್ ಡೌನ್ ವಿಸ್ತರಣೆ; 500 ಕೋಟಿ ಪ್ಯಾಕೇಜ್

ಬೆಂಗಳೂರು, ಜೂ, 03; ನಿರೀಕ್ಷೆಯಂತೆ ಕರ್ನಾಟಕದಲ್ಲಿ ಲಾಕ್‌ಡೌನ್ ಒಂದು ವಾರಗಳ ಕಾಲ ವಿಸ್ತರಣೆ ಮಾಡಲಾಗಿದೆ. ಜೂನ್ 14ರ ತನಕ ಲಾಕ್‌ಡೌನ್ ವಿಸ್ತರಣೆ ಮಾಡಿದ್ದು, ಕೆಲವು ವಿನಾಯಿತಿಗಳನ್ನು ಸರ್ಕಾರ ಘೋಷಣೆ ಮಾಡಿದೆ. ಗುರುವಾರ ಸಂಜೆ ವಿಧಾನಸೌಧದಲ್ಲಿ ಸಚಿವರ ಜೊತೆ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, “ಜೂನ್ 14ರ ತನಕ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ” ಎಂದು ಘೋಷಿಸಿದರು. “ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆದರೂ ವೈರಾಣು ಹರಡುವಿಕೆ ತಡೆಯಬೇಕಿದೆ. ಆರೋಗ್ಯ ಪರಿಣಿತರ ಸಲಹೆ ಪಾಲಿಸಬೇಕಿದೆ. ಆದ್ದರಿಂದ ಜೂನ್…

ಗೂಗಲ್ ಸಂಸ್ಥೆ ವಿರುದ್ಧ ಕಾನೂನು ಕ್ರಮ – ಅರವಿಂದ ಲಿಂಬಾವಳಿ

ಬೆಂಗಳೂರು,ಜೂ,03:ಕನ್ನಡವನ್ನು ಕೆಟ್ಟ ಭಾಷೆಯೆಂದು ಬಿಂಬಿಸಿದ ಗೂಗಲ್ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ  ಅರವಿಂದ ಲಿಂಬಾವಳಿ ಹೇಳಿದ್ದಾರೆ. ಭಾರತದ ಕೆಟ್ಟ ಭಾಷೆ ಯಾವುದು ಎಂದು ನೆಟ್ಟಿಗರು ಗೂಗಲ್ ನಲ್ಲಿ ಪ್ರಶ್ನೆ ಮಾಡಿದರೆ ಕನ್ನಡ ಎಂಬ ಉತ್ತರ ಬರುತ್ತಿತ್ತು. ಈ ವಿಚಾರವನ್ನು ಸಚಿವ ಅರವಿಂದ ಲಿಂಬಾವಳಿ ಅವರ ಗಮನಕ್ಕೆ ತಂದಾಗ , ಅವರು ಇದು ಅತ್ಯಂತ ಖಂಡನೀಯ ಸಂಗತಿ. ಗೂಗಲ್ ಆಗಲಿ ,ಬೇರೆ ಯಾರೇ ಆಗಲಿ ಕನ್ನಡ ಭಾಷೆ…

ಲಾಕ್ ಡೌನ್ ವಿಸ್ತರಿಸಿ. 10 ಸಾವಿರ ಪರಿಹಾರ ಕೊಡಿ- ಎಚ್ಡಿಕೆ

ಬೆಂಗಳೂರು,ಜೂ,03:ರಾಜ್ಯದಲ್ಲಿ ಇನ್ನೂ ಒಂದುವಾರ ಕಾಲ ಲಾಕ್ ಡೌನ್ ವಿಸ್ತರಣೆ ಮಾಡುವುದು ಸೂಕ್ತ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಕೊರೋನಾ ಸೋಂಕು, ಬೆಂಗಳೂರಿನಲ್ಲಿ ಸ್ವಲ್ಪ ತಗ್ಗಿದ್ದರೂ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣ ತಗ್ಗಿಲ್ಲ. ಆದ್ದರಿಂದ ಸರ್ಕಾರ, ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಲಾಕ್ ಡೌನ್ ಮುಂದುವರೆಸುವುದು ಸೂಕ್ತ ಎಂದು ಹೆಚ್ ಡಿಕೆ ಹೇಳಿದ್ದಾರೆ. ಕೊರೋನಾ ಸೋಂಕಿನ ಮೊದಲ ಅಲೆಯ ಕಳೆದ ವರ್ಷದ ಏಪ್ರಿಲ್ ಮತ್ತು…

ಮಾಜಿ ಶಾಸಕ ಎನ್.ಎಸ್.ಖೇಡ್ ನಿಧನ

ವಿಜಯಪುರ ,ಜೂ,03:ವಿಜಯಪುರ ಜಿಲ್ಲೆ ಇಂಡಿ ವಿಧಾನಸಭಾ ಕ್ಷೇತ್ರ ಮಾಜಿ ಶಾಸಕ ಎನ್.ಎಸ್.ಖೇಡ್(74) ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗಿನ ಜಾವ ನಿಧನ ಹೊಂದಿದರು. ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ ರೈತ ಕುಟುಂಬದಿಂದ ಬಂದಿದ್ದ ಎನ್.ಎಸ್.ಖೇಡ್ ಅವರು ವಿಜಯಪುರ ಜಿಲ್ಲೆಯ ಮುತ್ಸದ್ದಿ ನಾಯಕ ದಿ.ಬಿ.ಎಂ.ಪಾಟೀಲ್‍ರ ಅನುಯಾಯಿಯಾಗಿ ಯುವ ವಯಸ್ಸಿನಲ್ಲಿಯೇ ರಾಜಕೀಯ ಪವೇಶ ಮಾಡಿದ್ದರು. 1980ರಲ್ಲಿ ಜನತಾ ಪಕ್ಷದಿಂದ ಲೋಕಸಭೆಯಲ್ಲಿ ಸ್ಪರ್ಧಿಸಿ, ಅತ್ಯಂತ ಕಡಿಮೆ ಮತಗಳಿಂದ ಪರಾಭವಗೊಂಡಿದ್ದ ಇವರು ಇಡೀ ರಾಜ್ಯದ ಗಮನ ಸೆಳೆದಿದ್ದರು. ಮಾಜಿ ಪ್ರಧಾನಿಗಳಾದ ಚಂದ್ರಶೇಖರ, ಎಚ್.ಡಿ.ದೇವೆಗೌಡ…

ಮೋದಿ: ಹಸಿವು ಮುಕ್ತ ಭಾರತ ಮಾಡಿ

ಮೋದಿ: ಹಸಿವು ಮುಕ್ತ ಭಾರತ ಮಾಡಿ ಮೂವತ್ತು ವರ್ಷ ಸತತ ಎಂಬಂತೆ ಸಮ್ಮಿಶ್ರ ಕಿರಿಕಿರಿ ಇದ್ದ ಕೇಂದ್ರ ಸರ್ಕಾರಕ್ಕೆ ಗ್ರಹಣ ಮೋಕ್ಷ ದಯಪಾಲಿಸಿದ ಹಿರಿಮೆ ನರೇಂದ್ರ ಮೋದಿಗೆ ಸಲ್ಲಬೇಕು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಹತ್ತಾರು ಹಗರಣಗಳ ಭಾರದಿಂದ ನಲುಗಿ ಹೋಗಿದ್ದ ಜನತೆಗೆ ಒಂದು ಪರ್ಯಾಯವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದುದು ಏಳು ವರ್ಷದ ಹಿಂದೆ. ಮೋದಿ ಮುಖ ನೋಡಿ, ಅವರು ಹೇಳಿದಂತೆ ಮತ ನೀಡಿ ಊಹಾತೀತ ಬಹುಮತ ನೀಡಿದ ನಾಡಿಗೆ, ಜನರಿಟ್ಟ ವಿಶ್ವಾಸಕ್ಕೆ ಸಿಕ್ಕ…

1 109 110 111 112 113 126
Girl in a jacket