ಬಟುಮಿ(ಜಾರ್ಜಿಯಾ), ಜು. ೨೭-ಬಹು ನಿರೀಕ್ಷಿತ ಫಿಡೆ ಮಹಿಳೆಯರ ಚೆನ್ ವಿಶ್ವಕಪ್ ಫೈನಲ್ನ ೨ನೇ ಗೇಮ್ ಕೂಡ ಡ್ರಾನಲ್ಲಿ ಕೊನೆಗೊಂಡಿದೆ.ಇಬ್ಬರು ಸ್ಟಾರ್ಗಳಾದ ಕೊನೆರು ಹಂಪಿ ಹಾಗೂ ದಿವ್ಯಾ ದೇಶಮುಖ್ ಅವರ ಆಟ ಈಗ ಎಲ್ಲರ ಗಮನಸೆಳೆದಿದ್ದಿ ಪೈನಲ್ ಟ್ರೈಬ್ರೇಕರ್ ಪಂದ್ಯವು ಇಂದು ನಡೆಯಲಿದೆ.
ಈ ಟೈ ಬ್ರೇಕರ್ ಪಂದ್ಯವು ಸೋಮವಾರ ನಡೆಯಲಿದೆ. ಮೊದಲ ರ್ಯಾಪಿಡ್ ಪಂದ್ಯದಲ್ಲಿ ಹಂಪಿ ಅವರು ಕಪ್ಪು ಕಾಯಿಯೊಂದಿಗೆ ಆಡಲಿದ್ದಾರೆ.ರವಿವಾರದ ಪಂದ್ಯದಲ್ಲಿ ೩೮ರ ವಯಸ್ಸಿನ ಕೊನೆರು ಹಂಪಿ ಅವರು ೧೯ರ ವಯಸ್ಸಿ ದಿವ್ಯಾ ವಿರುದ್ಧ ಬಿಳಿ ಕಾಯಿಯೊಂದಿಗೆ ಆಡಿದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಹಂಪಿ ಸಮಯದ ವಿಚಾರದಲ್ಲಿ ಒತ್ತಡಕ್ಕೆ ಸಿಲುಕಿದರೆ, ದಿವ್ಯಾ ಅವರು ಸಮಯದ ವಿಚಾರದಲ್ಲಿ ಮಹತ್ವದ ಮೇಲುಗೈ ಪಡೆದರು.
ವಿಶ್ವದ ನಂ.೬ನೇ ಆಟಗಾರ್ತಿ ಹಂಪಿ ಹಾಗೂ ವಿಶ್ವದ ನಂ.೧೮ನೇ ಆಟಗಾರ್ತಿ ದಿವ್ಯಾ ನಡುವೆ ಶನಿವಾರ ನಡೆದಿದ್ದ ಮೊದಲ ಗೇಮ್ ಕೂಡ ಡ್ರಾನಲ್ಲಿ ಕೊನೆಗೊಂಡಿತ್ತು. ಹೀಗಾಗಿ ಹಂಪಿ ಹಾಗೂ ದಿವ್ಯಾ ನಡುವಿನ ಕ್ಲಾಸಿಕಲ್ ಪಂದ್ಯವು ೧-೧ರಿಂದ ಸಮಬಲಗೊಂಡಿದೆ. ಇಂತಹ ಸಂದರ್ಭದಲ್ಲಿ ವಿಜೇತರನ್ನು ಟೈ-ಬ್ರೇಕರ್ ಮೂಲಕ ನಿರ್ಧರಿಸಲಾಗುತ್ತದೆ.