ಶ್ರೀನಗರದಲ್ಲಿ ಉಗ್ರರ ಅಟ್ಟಹಾಸ,ಹಲವು ಪ್ರವಾಸಿಗರ ಸಾವು
ಶ್ರೀನಗರ ಏ,22: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿಭಯೋತ್ಪಾದಕ ದಾಳಿ ನಡೆದಿದೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ಮಾಡಲಾಗಿದೆ. ಭಯೋತ್ಪಾದಕರ ಈ ಗುಂಡಿನ ದಾಳಿಯಲ್ಲಿ 26ಪ್ರವಾಸಿಗರು ಸಾವನ್ನಪ್ಪಿದ್ದಸರೆ ಇನ್ನು ಎಂದು ವರದಿಯಾಗಿದೆ. ಗಾಯಗೊಂಡ ಪ್ರವಾಸಿಗರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಮೂಲಗಳು ಹೇಳುವಂತೆ ಭಯೋತ್ಪಾದಕರು ಮೊದಲು ಪ್ರವಾಸಿಗರಿಂದ ಹೆಸರುಗಳನ್ನು ಕೇಳಿದರು. ಆಗ ಪ್ರವಾಸಿಗರು ತಮ್ಮ ಹಿಂದೂ ಹೆಸರುಗಳನ್ನು ಹೇಳಿದಾಗ ಪ್ರವಾಸಿಗರ ಮೇಲೆ ಅವರು ಗುಂಡು ಹಾರಿಸಿದ್ದಾರೆ…