ಸಾಹಿತ್ಯ
ಗೆಳೆಯ ಬರುವುದು ತಡವಾಯಿತು..!
ಎನ್.ಸಿ. ಶಿವಪ್ರಕಾಶ್ಮಸ್ಕತ್, ಒಮಾನ್ ಗೆಳೆಯ ಬರುವುದು ತಡವಾಯಿತು..! ಎದೆ ಹಗುರಾಗಬಯಸಿದೆ, ನೀನೆಲ್ಲಿರುವೆ ಗೆಳೆಯ? ಮನಬಿಚ್ಚಿ ಹರಟಿ ವರುಷಗಳುರುಳಿವೆ, ತಿಳಿಯದೆ ನಿನ್ನ ನೆಲೆಯ ಸುಡುಬಿಸಿಲಿಗೆ ಮೋಡವಾಗಿ ನೆರಳಬಿಚ್ಚಿದೆ ದುಗುಡದ ಕಣ್ಣೀರನದಿಗೆ ಪಾತ್ರವಾಗಿ ನೀ ಮೆರೆದೆ ಹಸಿದಾಗ ಆಹಾರವಿತ್ತೆ; ಬೇಡದೆ ಆಶ್ರಯವ ಕೊಟ್ಟೆ ನಾ ನಕ್ಕಾಗ ಜೊತೆಗೊಡಲು ಹಲವರಿದ್ದರು; ಕಂಬನಿಗರೆಯಲು ನೀನೊಂದೇ ಹೆಗಲು ಬಾಲ್ಯದಲಿ ನೋಟುಪುಸ್ತಕಗಳ ಹಂಚಿಕೊಂಡೆ; ಯೌವನದಲಿ ನೋಟುಗಳನೇ ಹಂಚಿಕೊಂಡೆ ನನ್ನ ನೋಟಕೆ ನಿನ್ನ ಪ್ರೀತಿಯ ಬಲಿಕೊಟ್ಟೆ ಗೆಳೆಯಾ, ಈ ಬಾರಿ ನಿನ್ನ ಹುಡುಕಿ ಬಂದಿದ್ದೆ ನಿಜತಾವಿನಲಿ ನೀ…