ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ
ಸಿದ್ಧಸೂಕ್ತಿ : ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ. ಬಂಧ ಸಂಬಂಧ. ಬಂಧ ಉಳ್ಳವನು/ಳು ಬಂಧು. ತಾಯಿಯಂಥ ಸಂಬಂಧಿ ಯಾರೂ ಇಲ್ಲ. ಅವಳು ಉಪ್ಪಿನಂತೆ. ಉಪ್ಪು ಎಲ್ಲಕ್ಕೂ ಸೈ. ಸೌತೆ, ಕಲ್ಲಂಗಡಿ ಉಪ್ಪು ಬೆರೆಸಿ ತಿಂದು ನೋಡಿ. ಸಿಹಿ ಅಡಿಗೆಗೂ ಒಂದಿಷ್ಟು ಉಪ್ಪು ಬೇಕು! ಉಪ್ಪಿಲ್ಲದ ಅಡಿಗೆ ಉಂಡು ನೋಡಿ! ತಿಳಿಯುವುದು ಉಪ್ಪಿನ ಮಹಿಮೆ! ಸಿಹಿ ಕಹಿ ಖಾರ ಹುಳಿ ವಗರು ರುಚಿಗಿಂತ ಉಪ್ಪೇ ಹಿರಿ ರುಚಿ! ಅಣ್ಣ ಅತ್ತಿಗೆ ಅಳಿಯ ಅತ್ತೆ ಮಾವಾದಿಗರು ಇರಬಹುದು ನೂರಾರು…



















