ಲಸಿಕೆ ನೀಡುವಲ್ಲಿ ವಿಫಲ-ಸರ್ಕಾರದ ವಿರುದ್ಧ ತರಾಟೆಗೆ ತಗೆದುಕೊಂಡ ಕೋರ್ಟ್
ಬೆಂಗಳೂರು, ಮೇ. ೧೩: ರಾಜ್ಯದ ಜನತೆಗೆ ಲಸಿಕೆ ನೀಡುವ ವಿಚಾರದಲ್ಲಿ ಸರ್ಕಾರದ ವಿರುದ್ಧ ಹೈಕೋರ್ಟ್ ತರಾಟೆಗೆ ತಗೆದುಕೊಂಡಿದೆ. ಜನರು ಕೊರೊನಾ ಎರಡನೇ ಅಲೆಗೆ ತತ್ತರಿಸಿದ್ದಾರೆ ಅವರಿಗೆ ವ್ಯಾಕ್ಸಿನ್ ಕೊಡಲು ನಿಮಗೆ ಆಗುತ್ತಿಲ್ಲ ಎಂದರೆ ಹೇಗೆ? ೩೧ ಲಕ್ಷ ಮಂದಿಗೆ ಯಾವಾಗ ಎರಡನೇ ಡೋಸ್ ನೀಡುತ್ತೀರಾ ನಿಮಗೆ ಸಾಧ್ಯವಿಲ್ಲ ಎಂದಾದರೆ ಹಾಗೆಯೇ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹೈಕೊರ್ಟ್ ಚಾಟಿ ಏಟು ಬೀಸಿದೆ. ೫ ವರ್ಷ ಮೇಲ್ಪಟ್ಟವರಿಗೆ ೨ನೇ ಡೋಸ್ ನ ಲಸಿಕೆ ಕೊರತೆಯಾಗಿರುವ…