ಬೆಂಗಳೂರು, ಜು,02-ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಆರ್ಥಿಕ ಅಶಿಸ್ತು ಹಾಗೂ ಲೆಕ್ಕ ಪತ್ರ ಲೋಪ ಆಡಿಟ್ ಆಕ್ಷೇಪಣೆ ವಿಚಸರಗಳ ಬಗ್ಗೆ ತನಿಖೆ ನಡೆಸುವಂತೆ ಸಾಹಿತಿಗಳ ನಿಯೋಗಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಮನವಿ ಸಲ್ಲಿಸಿದರು.
ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ
ಸಾಹಿತಿಗಳ ನಿಯೋಗ ಸಚಿವ ಜಮೀರ್ ಅಹಮದ್ ಖಾನ್ ಅವರ ನಿವಾಸಕ್ಕೆ ಭೇಟಿ ಮಾಡಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ದ ಆರ್ಥಿಕ ಅಶಿಸ್ತು ಹಾಗೂ ಲೆಕ್ಕ ಪತ್ರ ಲೋಪ, ಅಡಿಟ್ ಆಕ್ಷೇಪಣೆ ವಿಚಾರಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಅಗ್ರಹಿಸಿ ಮನವಿ ಸಲ್ಲಿಸಿತು.
ಪರಿಷತ್ ಮಾಜಿ ಸದಸ್ಯ ಶ್ರೀಕಂಟೇಗೌಡ
ಪ್ರೊ. ಎಸ್. ಜಿ. ಸಿದ್ದರಾಮಯ್ಯ,ಜಾಣಗೆರೆ ವೆಂಕರಾಮಯ್ಯ, ಬಂಜಗೆರೆ ಜಯಪ್ರಕಾಶ್, ಜಯ ಪ್ರಕಾಶ್ ಗೌಡ, ವಸುಂಧರಾ ಭೂಪತಿ, ಸುನಂದಾ ಜಯರಾಮ್, ಆರ್. ಜಿ. ಹಳ್ಳಿ ನಾಗರಾಜ್, ಡಿಪಿ ಸ್ವಾಮಿ, ಮೀರಾ ಶಿವಲಿಂಗಯ್ಯ ಸಿಕೆ ರಾಮೇಗೌಡ, ಪ್ರಕಾಶಮೂರ್ತಿ ಉಪಸ್ಥಿತರಿದ್ದರು.