ದ್ವೇಷ ಭಾಷಣ ಆರೋಪ- ಸಿ.ಟಿ.ರವಿ ವಿರುದ್ಧ ಎಫ್ ಐಆರ್ ದಾಖಲು
ಬೆಂಗಳೂರು, ಸೆ,11-ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಮದ್ದೂರಿನಲ್ಲಿ ಈಚೆಗೆ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಗಣೇಶ ವಿಸರ್ಜನೆ ಯಲ್ಲಿ ಪಾಲ್ಗೊಂಡು ಭಾಷಣ ಮಾಡಿದ್ದರು. ಈ ವೇಳೆ ಸಿ.ಟಿ.ರವಿ ಭಾಷಣದಲ್ಲಿ’ ತೊಡೆ ತಟ್ಟುವುದು ಗೊತ್ತು,ತಲೆಕಡಿಯುವುದು ಗೊತ್ತು’ ಎಂದಿದ್ದರು.ಸಹಜವಾಗಿಯೇ ಪ್ರಚೋದನಾಕಾರಿ ಭಾಷಣವಾಗಿದ್ದು ಈ ಹಿನ್ನೆಲೆಯಲ್ಲಿ ಅವರ…