Girl in a jacket

Daily Archives: July 6, 2025

ವೈಚಾರಿಕತೆ ಮತ್ತು ವೈಜ್ಞಾನಿಕತೆ ಬೆಳೆಸಿಕೊಂಡು ಸ್ವಾಭಿಮಾನಿಗಳಾಗಿ ಬದುಕಿ-ಜನರಿಗೆ ಸಿಎಂ ಕರೆ

ಬೆಂಗಳೂರು, ಜು 6- ಶಿಕ್ಷಣದಿಂದ ವಂಚಿತರಾಗದೇ, ವೈಚಾರಿಕತೆ ಮತ್ತು ವೈಜ್ಞಾನಿಕತೆ ಬೆಳೆಸಿಕೊಂಡು ಸ್ವಾಭಿಮಾನಿಗಳಾಗಿ ಬದುಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಸಮಾಜದ ಬಂಧುಗಳಿಗೆ ಕರೆ ನೀಡಿದರು. ಅವರು ಇಂದು ತಾವರೆಕೆರೆ ಬಳಿಯ ಕೆತೋಹಳ್ಳಿ ಯಲ್ಲಿರುವ ಬ್ರಹ್ಮಲೀನ ಜಗದ್ಗುರು ಶ್ರೀ ಬಿರೇಂದ್ರ ಕೇಶದ ತಾರಕಾನಂದಪುರಿ ಮಹಾಸ್ವಾಮಿಗಳ 19ನೇ ವರ್ಷದ ಪುಣ್ಯರಾಧನೆಯ ಸ್ಮರಣಾರ್ಥವಾಗಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಹಾಗೂ ಶಾಖಾಮಠ ಮತ್ತು ಬೆಂಗಳೂರು ಭಕ್ತರ ಭಂಡಾರದ ಕುಟೀರವನ್ನು ಲೋಕಾರ್ಪಣೆ ಮಾಡಿದ ನಂತರ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು ಕಾಗಿನೆಲೆ…

ಶಿವಕುಮಾರ್ ಅವರಿಗೆ ಉನ್ನತ ಸ್ಥಾನ ಸಿಗಲಿ: ರಂಭಾಪುರಿ ಶ್ರೀಗಳು

ಕನಕಪುರ, ಜು.06-“ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ಅವರು ಹೆಚ್ಚಿನ ಶಕ್ತಿ ತುಂಬಿದ್ದು, ಚುನಾವಣೆ ನಂತರ ಅವರಿಗೆ ಉನ್ನತ ಸ್ಥಾನ ಸಿಗಬೇಕಾಗಿತ್ತು. ಮುಂದಿನ ದಿನಗಳಲ್ಲಿ ಆ ಸ್ಥಾನ ಸಿಗಲಿ” ಎಂದು ಬಾಳೆಹೊನ್ನೂರು ಶ್ರೀಮದ್‌ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ತಿಳಿಸಿದರು. ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಸಿದ್ದೇಶ್ವರಸ್ವಾಮಿ ಬೆಟ್ಟದಲ್ಲಿ ಮೆಟ್ಟಿಲುಗಳ ಉದ್ಘಾಟನೆ ಹಾಗೂ ಧರ್ಮಜಾಗೃತಿ ಸಮಾರಂಭದಲ್ಲಿ ಶ್ರೀಮದ್ ರಂಬಾಪುರಿ ಶ್ರೀಗಳು ಮಾತನಾಡಿದರು. “ಕರ್ನಾಟಕದಲ್ಲಿ ಕಾಂಗ್ರೆಸ್ ‌ಪ್ರಚಂಡ ಬಹುಮತ…

ತುಮಕೂರಿನಲ್ಲಿ ದಾವಣಗೆರೆ ಪಿಎಸ್‌ಐ ಆತ್ಮಹತ್ಯೆ

ತುಮಕೂರು,ಜು,೦೬-ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಬಿ ಆರ್.ನಾಗರಾಜಪ್ಪ(೫೮) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಖಾಸಗಿ ಹೊಟೇಲ್‌ನಲ್ಲ ಜರುಗಿದೆ, ಜುಲೈ ೧ರಂದು ಹೋಟೆಲ್‌ನಲ್ಲಿ ಕೊಠಡಿ ಪಡೆದಿದ್ದರು. ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹೋಟೆಲ್ ಕೋಣೆಯಿಂದ ವಾಸನೆ ಹೆಚ್ಚಿದ್ದು, ಸಿಬ್ಬಂದಿ ಹೋಗಿ ನೋಡಿದಾಗ ಆತ್ಮಹತ್ಯೆ ವಿಚಾರ ಗೊತ್ತಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಠಡಿಯಲ್ಲಿ ಡೆತ್‌ನೋಟ್ ಸಿಕ್ಕಿದ್ದು, ‘ನನ್ನ ಸಾವಿಗೆ ನಾನೇ ಕಾರಣ’ ಎಂದು…

ವೃತ್ತಿ ಧರ್ಮ ನೆಲಕಚ್ಚಿದರೆ ರಾಜ ಧರ್ಮವನ್ನು ಟೀಕಿಸುವ ಅರ್ಹತೆ ಉಳಿಯುವುದಿಲ್ಲ: ಕೆ.ವಿ.ಪ್ರಭಾಕರ್

ತುಮಕೂರು ಜು 6-ಮಾಧ್ಯಮ ಕ್ಷೇತ್ರ ವೃತ್ತಿ ಧರ್ಮ ಪಾಲಿಸದಿದ್ದರೆ, ರಾಜ ಧರ್ಮ ಪಾಲಿಸಿ ಎಂದು ಅಧಿಕಾರಸ್ಥರಿಗೆ ಹೇಳುವ ನೈತಿಕ ಸ್ಥೈರ್ಯವನ್ನು ಕಳೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಆತಂಕ ವ್ಯಕ್ತಪಡಿಸಿದರು. ರಾಜ್ಯ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ವಾರ್ಷಿಕ ದತ್ತಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಿ ಮಾತನಾಡಿದರು. ನಾವು ಇಂದು ಪತ್ರಿಕಾ ದಿನಾಚರಣೆ ಆಚರಿಸುತ್ತಿರುವ ಸಂದರ್ಭದಲ್ಲಿ ಸಂಭ್ರಮದ ಬದಲಿಗೆ ಒಂದು ರೀತಿಯ ಅಳುಕು ಕಾಡುತ್ತಿದೆ. “ವೃತ್ತಿ ಧರ್ಮ” ಎನ್ನುವುದು…

ವಿಜೇತ ನೀರಜ್ ಚೋಪ್ರಾಗೆ ಸಿಎಂ ಸಿದ್ದರಾಮಯ್ಯರಿಂದ ಪದಕ ಪ್ರದಾನ

ಬೆಂಗಳೂರು, ಜು,05-ಭಾರತದ ಕ್ರೀಡಾ ಇತಿಹಾಸದಲ್ಲೇ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ನಡೆದ “ನೀರಜ್ ಚೋಪ್ರಾ ಕ್ಲಾಸಿಕ್- 2025” ಜಾವೆಲಿನ್ ಎಸೆತ ಕ್ರೀಡಾಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ಅವರ ಜೊತೆಯಾಗಿ ಪಾಲ್ಗೊಂಡು, ವಿಶ್ವಶ್ರೇಷ್ಠ ಜಾವೆಲಿನ್ ಎಸೆತಗಾರರ ಕ್ರೀಡಾ ಪ್ರದರ್ಶನವನ್ನು ವೀಕ್ಷಿಸಿ, ವಿಜೇತರಿಗೆ ಪದಕ ಪ್ರದಾನ ಮಾಡಿ ಗೌರವಿಸಿದರು. 2 ಬಾರಿ ಒಲಿಂಪಿಕ್ ಪದಕ ವಿಜೇತ, ಹಾಲಿ ವಿಶ್ವಚಾಂಪಿಯನ್, ವಿಶ್ವನಂ. 1 ಜಾವಲಿನ್ ಪಟು ನೀರಜ್ ಚೋಪ್ರ ತಮ್ಮ ಹೆಸರಿನಲ್ಲಿ ಆರಂಭಿಸಿರುವ ಅಂತಾರಾಷ್ಟ್ರೀಯ…

ಆರಂಭದ ಪಂದ್ಯೆದಲ್ಲೇ ಎನ್‌ಸಿಕ್ಲಾಸಿಕ್ ಗೆದ್ದ ಚೋಪ್ರಾ

ಬೆಂಗಳೂರು,ಜು,೦೫-ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಉದ್ಟಾಟನಾ ಟೂರ್ನಿಯಲ್ಲೇ ವಿಶ್ವಚಾಂಪಿಯನ್ ನೀರಜ್ ಚೋಪ್ರಾ ಎನ್‌ಸಿ ಕ್ಲಾಸಿಕ್ ಅನ್ನು ಗೆಲ್ಲುವ ಮೂಲಕ ತಮ್ಮ ವಿಶ್ವದರ್ಜೆಯ ಈವೆಂಟ್ ಅನ್ನು ಆಯೋಜಿಸುವ ಕನಸನ್ನು ನನಸಾಗಿಸಿದರು. ೨೭ ವರ್ಷದ ಡಬಲ್ ಒಲಿಂಪಿಕ್ ಪದಕ ವಿಜೇತರು ತಮ್ಮ ಪೋಷಕರ ಸಮ್ಮುಖದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ೮೬.೧೮ ಮೀಟರ್ ದೂರ ಎಸೆಯುವ ಮೂಲಕ ವಿಜೇತರಾಗಿದ್ದಾರೆ. ಪ್ಯಾರಿಸ್ ಡೈಮಂಡ್ ಲೀಗ್ (ಜೂನ್ ೨೦) ಮತ್ತು ಪೋಲೆಂಡ್‌ನ ಒಸ್ಟ್ರಾವಾದಲ್ಲಿ (ಜೂನ್ ೨೪) ಗೋಲ್ಡನ್ ಸ್ಪೈಕ್ ನ್ನು ಗೆದ್ದ ನಂತರ ಇದು ಅವರ…

Girl in a jacket