ಓಂಪ್ರಕಾಶ್ ರಾವ್ ನಿರ್ದೇಶನದ”ಫೀನಿಕ್ಸ್”ಚಿತ್ರೀಕರಣ ಪೂರ್ಣ
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಓಂಪ್ರಕಾಶ್ ರಾವ್ ನಿರ್ದೇಶನದ 49 ನೇ ಚಿತ್ರ “ಫೀನಿಕ್ಸ್”.ಆರ್ ವಾಸುದೇವ ರೆಡ್ಡಿ ಅರ್ಪಿಸುವ,ಶ್ರೀಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ಅವರು ನಿರ್ಮಾಣ ಮಾಡುತ್ತಿರುವ ಮಹಿಳಾ ಪ್ರಧಾನ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಉತ್ತರ ಕರ್ನಾಟಕದ ಹಲವು ಕಡೆ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಮುಗಿಸಿರುವ “ಫೀನಿಕ್ಸ್” ಈಗ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿಯಾಗಿದೆ. ಬಹಳ ದಿನಗಳ ನಂತರ…