Girl in a jacket

Daily Archives: April 1, 2025

ಇಂದಿನಿಂದ ಡಿಸೇಲ್ ಬೆಲೆ ಏರಿಕೆ

ಇಂದಿನಿಂದ ಡಿಸೇಲ್ ಬೆಲೆ  ಏರಿಕೆ by-ಕೆಂಧೂಳಿ ಬೆಂಗಳೂರು,ಏ,೦೨- ಹಾಲು,ವಿದ್ಯುತ್ ದರ ಏರಿಕೆ ಬೆನ್ನಲ್ಲೆ ಇದೀಗ ಡಿಸೇಲ್ ಬೆಲೆಯನ್ನು ರಾಜ್ಯ ಸರ್ಕಾರ ಹೆಚ್ಚು ಮಾಡುವ ಮೂಲಕ ಸಾರ್ವಜನಿಕರ ಜೇಬಿಗೆಮತ್ತಷ್ಟು ಕತ್ತರಿಹಾಕಿದೆ. ಈ ದರ ಮಧ್ಯ ರಾತ್ರಿಯಿಂದಲೇ ಜಾರಿಯಾಗಿದೆ ಕರ್ನಾಟಕ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನುನ್ನು ೧೮.೪೪% ರಿಂದ ೨೧.೧೭% ಗೆ ಏರಿಕೆ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿ ಪ್ರತಿ ಲೀಟರ್ ಡೀಸೆಲ್‌ಗೆ ೮೮.೯೩ ರೂ. ದರವಿದೆ. ತೆರಿಗೆ ಏರಿಕೆಯಿಂದ ದರ ೯೦.೯೩ ರೂ.ಗೆ ಆಗಲಿದೆ. ಪೆಟ್ರೋಲ್ ಮೇಲೆ ಮಾರಾಟ…

ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲು ಕೇಂದ್ರ ಸರಕಾರಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ

ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲು ಕೇಂದ್ರ ಸರಕಾರಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ by-ಕೆಂಧೂಳಿ ತುಮಕೂರು, ಏ.01-“ಜಾತಿ ಧರ್ಮಗಳ ತಾರತಮ್ಯವಿಲ್ಲದೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಸಮಾಜಕ್ಕೆ ಸಾವಿರಾರು ಮುತ್ತುರತ್ನಗಳನ್ನು ನೀಡಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ “ಭಾರತ ರತ್ನ” ಪುರಸ್ಕಾರ ನೀಡಿ ಗೌರವಿಸಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಂಗಳವಾರ ನಡೆದ ಶಿವೈಕ್ಯ ಡಾ.…

ಗುಂಡು ಹಾರಿಸಿ ಕುಂಟುಂಬದ ಮೂವರ ಕೊಲೆ-ತಾನೂ ಆತ್ಮಹತ್ಯೆ

ಗುಂಡು ಹಾರಿಸಿ ಕುಂಟುಂಬದ ಮೂವರ ಕೊಲೆ-ತಾನೂ ಆತ್ಮಹತ್ಯೆ by-ಕೆಂಧೂಳಿ ಬಾಳೆಹೊನ್ನೂರು,ಏ,೦೨- ವ್ಯಕ್ತಿಯೊಬ್ಬ ತಮ್ಮ ಕುಟುಂಬದ ನಾಲ್ವರ ಮೇಲೆ ಗುಂಡು ಹಾರಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ನಡೆದಿದೆ. ಕಡಬಗೆರೆಯ ಶಾಲೆಯೊಂದರಲ್ಲಿ ವಾಹನ ಚಾಲಕನಾಗಿದ್ದ ರತ್ನಾಕರ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಅತ್ತೆ ಜ್ಯೋತಿ(೫೦), ಮಗಳು ಮೌಲ್ಯ(೬) ಮತ್ತೆ ನಾದಿನಿ ಸಿಂಧು(೨೪) ಗುಂಡು ತಗುಲಿ ಮೃತಪಟ್ಟಿದ್ದಾರೆ. ನಾದಿನಿಯ ಗಂಡನ ಕಾಲಿಗೆ ಗುಂಡು ತಗಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.…

ಲಖನೌ ತಂಡವನ್ನು ಮಣಿಸಿದ ಪಂಜಾಬ್ ತಂಡಕ್ಕೆ ಎರಡನೇ ಗೆಲುವು

ಲಖನೌ ತಂಡವನ್ನು ಮಣಿಸಿದ ಪಂಜಾಬ್ ತಂಡಕ್ಕೆ ಎರಡನೇ ಗೆಲುವು  by-ಕೆಂಧೂಳಿ ಲಕ್ನೋ,ಏ,೦೨- ಪಂಜಾಪ್ ಕಿಂಗ್ಸ್ ತಂಡವು ಲಖನೌಸೂಪರ್ ಜೈಂಟ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದೆ. ಮೊದಲ ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ೨೦ ಓವರ‍್ಗಳಲ್ಲಿ ೭ ವಿಕೆಟ್‌ಗೆ ೧೭೧ ರನ್ ಗಳಿಸಿತು. ನಂತರ ಆಡಿದ ಪಂಚಾಪ್ ತಂಡ ಸುಲಭಗುರಿ ತಲುಪಿ ಎರಡನೇ ಜಯ ಸಾಧಿಸಿತು. . ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡ ೧೭೨ ರನ್‌ಗಳ ಗುರಿಯನ್ನು ನಿಗದಿಪಡಿಸಿತ್ತು. ಇದನ್ನು ಪಿಬಿಕೆಎಸ್ ೧೬.೨…

Girl in a jacket