ಎಂಇಎಸ್ ಅನ್ನು ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟನೆ
ಎಂಇಎಸ್ ಅನ್ನು ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟನೆ by-ಕೆಂಧೂಳಿ ಬೆಂಗಳೂರು, ಮಾ,16-ಬೆಳಗಾವಿಯಲ್ಲಿ ಮರಾಠಿ ಮೇಯರ್ ಮಾಡಿರುವುದನ್ನು ಖಂಡಿಸಿ ಎಂಇಎಸ್ ಅನ್ನು ನಿಷೇಧಿಸುವಂತೆ ಒತ್ತಾಯಿಸಿ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇದೇ ಮಾರ್ಚ್ 22 ರಂದು ಕರ್ನಾಟಕ ಬಂದ್ ನಡೆಸಲಿದ್ದು ಎಲ್ಲಾ ಸಂಘಟನೆಗಳು ವ್ಯಾಪಾರಿಗಳು ಸಹಕರಿಸುವಂತೆ ವಾಟಾಳ್ ನಾಗರಾಜ್ ಮನವಿ ಮಾಡಿದರು.ಈ ವೇಳೆ ಎಂ ಇಎಸ್ ನಿಷೇಧಿಸಬೇಕೆಂದು ಹಾಗೂ ಬೆಳಗಾವಿಯಲ್ಲಿ ಮರಾಠಿ ಮೇಯರ್ ಆಯ್ಕೆ ಮಾಡಿರುವುದನ್ನು ಖಂಡಿಸಿ ಎಂಇಎಸ್ ಫಲಕವನ್ನು ಸುಟ್ಟಿ…