Girl in a jacket

Daily Archives: September 26, 2021

ಹರ್ಷಲ್ ಹ್ಯಾಟ್ರಿಕ್ ಕಮಾಲ್, ರೋಹಿತ್ ಪಡೆಗೆ ಸೋಲು..!

Reported By: H.D.Savita ಮುಂಬೈ ಇಂಡಿಯನ್ಸ್ ವಿರುದ್ಧ 17 ರನ್ ನೀಡಿ ನಾಲ್ಕು ವಿಕೆಟ್ ಪಡೆದ ಹರ್ಷಲ್ ಪಟೇಲ್ ಆರ್ಸಿಬಿಗೆ ಗೆಲುವಿಗೆ ಕಾರಣರಾದರು. ಹರ್ಷಲ್ ಮಾರಕ ಬೌಲಿಂಗ್ ಗೆ ತತ್ತರಿಸಿದ ರೋಹಿತ್ ಶರ್ಮಾ ಪಡೆ ಕೇವಲ 111 ರನ್ ಗಳಿಗೆ ಆಲ್​ಔಟ್ ಆಯ್ತು. ಅಲ್ದೇ ಮೊದಲು ಹ್ಯಾಟ್ರಿಕ್ ಸಾಧನೆ ಮಾಡಿದರು. ನಂತರ ಅವರ ಕೊನೆಯ ಓವರ್‌ನಲ್ಲಿ ಆಡಮ್ ಮಿಲ್ನೆ ಅವರನ್ನು ಔಟ್ ಮಾಡುವ ಮೂಲಕ ನಾಲ್ಕನೇ ವಿಕೆಟ್ ಪಡೆದರು. ಹರ್ಷಲ್ ಅವರ ಅದ್ಭುತ ಆಟದಿಂದಾಗಿ, ಮುಂಬೈ ತಂಡವು…

ಸೂರ್ಯ ಎಲಿಗೆನ್ಸ್ ಬಹು ಮಹಡಿ ಕಟ್ಟಡ ಲೋಕಾರ್ಪಣೆ

ಬೆಂಗಳೂರು ಸೆ. 26: ಪ್ರಧಾನಮಂತ್ರಿಗಳ ಅವಾಸ್ ಯೋಜನೆಯಡಿ ಎಲ್ಲರಿಗೂ ಸೂರು ಕಲ್ಪಿಸುವಲ್ಲಿ ಬೆಂಗಳೂರು ನಗರ ಜಿಲ್ಲೆ ಮೊದಲು ಸ್ಥಾನದಲ್ಲಿದೆ ಎಂದು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ವಿ . ಸೋಮಣ್ಣ ಹೇಳಿದರು. ಕರ್ನಾಟಕ ಗೃಹ ಮಂಡಳಿಯಿಂದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಚಂದಪುರ ಸೂರ್ಯನಗರದಲ್ಲಿ 1ನೇ ಹಂತದ ನೂತನವಾಗಿ ನಿರ್ಮಿಸಿಲಾಗಿರುವ ಸೂರ್ಯ ಎಲಿಗೆನ್ಸ್ ಬಹುಮಹಡಿ ವಸತಿ ಸಮುಚ್ಚಯವನ್ನು ಲೋಕಾರ್ಪಣೆ ಮಾಡಿ ಹತ್ತು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು‌.…

ಸಿದ್ದರಾಮಯ್ಯ ರ ‘ಅಕ್ಕಿ ರಾಜಕೀಯ’ಕ್ಕೆ ತಿರುಗೇಟು ಕೊಟ್ಟ ಕುಮಾರಸ್ವಾಮಿ

ಬೆಂಗಳೂರು,ಸೆ,26: ಬಡವರಿಗೆ ನೀಡಲಾಗುತ್ತಿದ್ದ ಅಕ್ಕಿಯ ಪ್ರಮಾಣವನ್ನು 7 ಕೆಜಿಯಿಂದ 5 ಕೆಜಿಗೆ ಕಡಿತ ಮಾಡಿದ್ದ ಬಗ್ಗೆ ತಮ್ಮ ವಿರುದ್ಧ ಸುಳ್ಳಿನ ಆರೋಪ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಎಚ್ಡಿಕೆ ಅವರು; “ಸಿದ್ದರಾಮಯ್ಯ ಅವರು ಸತ್ಯವನ್ನು ಮರೆಮಾಚಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ. ಟ್ವೀಟ್ ಮೂಲಕ ಅವರು ಸಿದ್ದರಾಮಯ್ಯ ಅವರಿಗೆ ನೀಡಿರುವ…

ಬಿಜೆಪಿ ಸುಳ್ಳಿನ ಕಾರ್ಖಾನೆ;ಸಿದ್ದರಾಮಯ್ಯ ಲೇವಡಿ

ಬೆಂಗಳೂರು,ಸೆ,26: ಬಿಜೆಪಿ ಸುಳ್ಳಿನ ಕಾರ್ಖಾನೆ ಇದ್ದಂತೆ. ಸುಳ್ಳಿನ ಕಂತೆಗಳನ್ನು ಅಲ್ಲಿ ತಯಾರು ಮಾಡಿ ಮಾರ್ಕೆಂಟಿಂಗ್ ಮಾಡುವವರು ಆ ಪಕ್ಷದ ನಾಯಕರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ. ಮಾಜಿ ಮುಖ್ಯಮಂತ್ರಿ, ದಿವಂಗತ ಅರ್. ಗುಂಡೂರಾವ್ ಅವರ ಜನ್ಮದಿನದ ಅಂಗವಾಗಿ ಗಾಂಧಿನಗರ ವಿಧಾನಸಭೆ ಕ್ಷೇತ್ರದ ಆಟದ ಮೈದಾನದಲ್ಲಿ ಇಂದು ಆಯೋಜಿಸಿದ್ದ ದಿನಸಿ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಿದ್ದರಾಮಯ್ಯ ಅವರು ಮಾತನಾಡಿದರು. ಬಡವರ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು ಎಂಬ ಕಾರಣಕ್ಕೆ…

ಡಿಸೆಂಬರ್ ವೇಳೆಗೆ ಬೆಳಗಾವಿಗೆ ಸರ್ಕಾರಿ ಕಚೇರಿಗಳ ಸ್ಥಳಾಂತರ;ಬಸವರಾಜ ಬೊಮ್ಮಾಯಿ

ಬೆಳಗಾವಿ, ಸೆ, 26: ಅಕ್ಟೋಬರ್ 3 ರಿಂದ ಸಕ್ಕರೆ ನಿರ್ದೇಶನಾಲಯ ಬೆಳಗಾವಿಯಲ್ಲಿ ಕಾರ್ಯಾರಂಭ ಮಾಡಲಿದೆ. ಡಿಸೆಂಬರ್ ನಲ್ಲಿ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲಾಗುವುದು. ಆ ವೇಳೆಗೆ ಸಾಧ್ಯವಿರುವಷ್ಟು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.2019- 20 ನೇ ಸಾಲಿನಲಿ ಬೆಳಗಾವಿಯಲ್ಲಿ ಅತ್ಯಧಿಕ ಮಳೆಯಾಗಿ ಮನೆಗಳು ಹಾಗೂ ಬೆಳೆಗಳು ಹಾನಿಗೊಳಗಾಗಿವೆ. ಆ ಸಂದರ್ಭದಲ್ಲಿ ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಹಲವು ಸೌಲಭ್ಯಗಳನ್ನು ಪ್ರಕಟಿಸಿದ್ದರು. ಒಟ್ಟು 44205…

ಪ್ರತಿ ನಗರಪಾಲಿಕೆಯಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆ:ಸಿಎಂ ಬೊಮ್ಮಾಯಿ

ಬೆಳಗಾವಿ, ಸೆ, 26: ಬೆಳಗಾವಿಯ ಇ- ಗ್ರಂಥಾಲಯ ಕಾರ್ಯವೈಖರಿಯನ್ನು ಗಮನಿಸಿ, ಅದು ಯಶಸ್ವಿಯಾದಲ್ಲಿ, ಇದೇ ಮಾದರಿಯಲ್ಲಿ ಪ್ರತಿಯೊಂದು ಮಹಾನಗರ ಪಾಲಿಕೆಯಲ್ಲಿ ಇ- ಗ್ರಂಥಾಲಯ ತೆರೆಯಲು ಸರ್ಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಳಗಾವಿಯಲ್ಲಿ ದೇಶಭಕ್ತ ರವೀಂದ್ರ ಕೌಶಿಕ್ ಅವರ ಹೆಸರಿನಲ್ಲಿ ಇ- ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಇಂದು ಮಾತನಾಡುತ್ತಿದ್ದರು. ಡಿಜಿಟಲ್ ಗ್ರಂಥಾಲಯ ಓದುಗರಿಗೆ, ಬರಹಗಾರರಿಗೆ, ಜ್ಞಾನಪಡೆಯಲು ಬಯಸುವವರಿಗೆ ಜ್ಞಾನದ ರಹದಾರಿಯನ್ನು ತೆರೆದಿದೆ. ಇದರಿಂದ ಡಿಜಿಟಲ್ ಶಕ್ತಿಯನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗುತ್ತದೆ ಎಂದರು. ಜ್ಞಾನ…

ಗಣೇಶ ಹಬ್ಬ ಮತ್ತು ಸಾಂಸ್ಕೃತಿಕ ಉತ್ಸವದ ವೈಶಿಷ್ಟ್ಯ

ಗಣೇಶ ಹಬ್ಬ ಮತ್ತು ಸಾಂಸ್ಕೃತಿಕ ಉತ್ಸವದ ವೈಶಿಷ್ಟ್ಯ ಐದು ದಿನಗಳ ಕಾಲ ವಿಜೃಂಭಿಸಿದ ಪ್ರಥಮ ಸಾರ್ವಜನಿಕ ಗಣೇಶೋತ್ಸವದ ಯಶಸ್ವಿ ಮುಕ್ತಾಯದ ನಂತರ ಗುರುತ್ರ್ಯಯರೂ ಸೇರಿ ಗಣೇಶೋತ್ಸವ ಮಂಡಳಿಯ ಸಕಲ ಪದಾಧಿಕಾರಿಗಳಲ್ಲಿ ಹೊಸ ಚೈತನ್ಯವೊಂದು ಗರಿಗೆದರಿತ್ತು. ಅಂದುಕೊಂಡಕ್ಕಿಂತಲೂ ಹೆಚ್ಚಿನಮಟ್ಟದಲ್ಲಿ ಸಿಕ್ಕ ಯಶಸ್ಸು ಮುಂಬರುವ ವರ್ಷಗಳಲ್ಲಿ ನಡೆಯುವ ಉತ್ಸವಗಳ ಸಾಂಸ್ಕೃತಿಕ ಸಾಧ್ಯತೆಗಳನ್ನು ಬಹಳ ದೊಡ್ಡ ರೀತಿಯಲ್ಲಿ ವಿಸ್ತರಿಸಿತ್ತು. ಬರುವ ವರ್ಷದ ಉತ್ಸವದ ತಯಾರಿಯನ್ನು ಸರಿಸುಮಾರು ಎರಡು ತಿಂಗಳುಗಳ ಮೊದಲೇ ಶುರುಮಾಡಿಕೊಂಡಿದ್ದ ಸಮಿತಿ ಆ ವರ್ಷದ ಉತ್ಸವದ ಯಶಸ್ಸಿಗಾಗಿ ಬಹಳಷ್ಟು ಶ್ರಮಪಟ್ಟಿತ್ತು.…

ಬಾಯಿ ಬಿಟ್ಟರೆ ಬಣ್ಣಗೇಡಿ

ಸಿದ್ಧಸೂಕ್ತಿ :                  ಬಾಯಿ ಬಿಟ್ಟರೆ ಬಣ್ಣಗೇಡಿ. ಮಾತನಾಡಿದರೆ ಮರ್ಯಾದೆ ಹೋಯಿತು. ಮಾತು ಮಾಣಿಕ್ಯ-ಜ್ಯೋತಿರ್ಲಿಂಗ-ಬೆಳಕು.ಮಾನವನಿಗೆ ದೇವ ನೀಡಿದ ವರದಾನ. ಮಾತಿಲ್ಲದಿರೆ ಜಗ ಕತ್ತಲೆ. ಮಾತು ಸಂಬಂಧ ಬೆಳೆಸುವುದು, ಹಣ ಗಳಿಸುವುದು. “ನಾನಿರುವೆ” ಎಂಬೊಂದಭಯ ಮಾತು ಜೀವ ಉಳಿಸುವುದು! ಮಾತು ಅರಿತಾಡಬೇಕು. ಮಾತಿನ ಮರ್ಮವರಿಯದೇ ಎಲುಬಿಲ್ಲದ ನಾಲಿಗೆ ವಿರಾಮ-ಸಂಬಂಧವಿರದ ಬಿಟ್ಟಿ ಮಾತನು ಸುರಿಸುವುದು. ಕೆಲವರದು ಬಾಯಿ ತೆರೆದರೆ ಏಕವಚನ, ಅಶ್ಲೀಲ ಮಾತು, ಚುಚ್ಚಿ ಸಾಯಿಸುವ ಬಿರುನುಡಿ! ಅಂಥವರೆದುರು…

ಅಫ್ಘಾನಿಸ್ತಾನದ ಭಯೋತ್ಪಾದನೆ ವಿರುದ್ಧ ಮೋದಿ ವಾಗ್ಧಾಳಿ

ನ್ಯೂಯಾರ್ಕ್,ಸೆ,26,ಅಫ್ಘಾನಿಸ್ತಾನದ ಭೂಮಿಯನ್ನು ಭಯೋತ್ಪಾದನೆಗೆ ಬಳಸುವುದನ್ನು ಖಂಡಿಸಿರುವ ಮೋದಿ ಬೇರೆ ದೇಶಗಳು ತಮ್ಮ ರಾಜಕೀಯ ಷಡ್ಯಂತ್ರಗಳಿಗೆ ಅಫ್ಘಾನಿಸ್ತಾನವನ್ನು ಬಳಸಿಕೊಳ್ಳಬಾರದು ಎಂದು ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನ ಹಾಗೂ ಚೀನಾದ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಅಫ್ಘಾನ್ ನೆಲ ದುರುದ್ದೇಶಕ್ಕೆ ಬಳಕೆಯಾಗುತ್ತಿರುವುದನ್ನು ಉಲ್ಲೇಖಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಭೆಯ 76 ನೇ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದು ಉಗ್ರವಾದವನ್ನು ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೆ ತಿವಿದಿದ್ದಾರೆ. ಕೋವಿಡ್-19 ಗೆ ಬಲಿಯಾದವರಿಗೆ ಗೌರವ ಸಲ್ಲಿಸಿ ಭಾಷಣ ಪ್ರಾರಂಭಿಸಿದ ಮೋದಿ, ಕೋವಿಡ್-19, ಭಯೋತ್ಪಾದನೆ, ಭಾರತದ ಪ್ರಜಾಪ್ರಭುತ್ವ, ಆರ್ಥಿಕತೆ, ಅಫ್ಘಾನಿಸ್ತಾನ…

Girl in a jacket