ಛಿದ್ರ ಕತಾಸಂಕಲನದ ನಾವೀನ್ಯತೆ ಯ ಸೊಬಗು
ತುರುವನೂರು ಮಂಜುನಾಥ ಛಿದ್ರ ಕತಾಸಂಕಲನದ ನಾವೀನ್ಯತೆ ಯ ಸೊಬಗು ಒಬ್ಬ ಕತೆಗಾರನ ಭಾವನೆಗಳು ನಿರಾಳವಾಗಿ ಬರವಣೆಗಿಳಿದರೆ ಆ ಭಾವಗಳು ಬದುಕಿನ ಅನುಭಾವದ ಸಂಕೇತ ,ಸೂಚ್ಯ ಬದುಕಿನ ಅನಾವರಣಗೊಳ್ಳುತ್ಯವೆ.ಹಾಗೆ ಬರಹಗಾರ ತನ್ನ ಭಾವನೆಗಳನ್ನು ವಿಶ್ಲೇಷಿಸುತ್ತಾ ಜೀವನದಲ್ಲಿ ನಡೆದ ಅನುಭವಿಸಿದ ಹಾಗೂ ನೋಡಿದ ಘಟನೆಗಳನ್ನು ಅನುಸಂಧಾನಗೊಳಿಸಿದಾಗ ಬಹುಶಃ ಅಂತ ಕತೆಗಳು ಯಶಸ್ಸಿನ ಶಿಖರವೇರುತ್ತೇವೆ. ಹೌದು ಒಬ್ಬ ಬರಹಗಾರನಿಗೆ ಆ ಕಾಲಘಟ್ಟದ ಯುಗಧರ್ಮ ಪ್ರಾಮುಖ್ಯತೆ ಪಡೆದುಕೊಳ್ಳುತ್ತೆದೆಯಾದರೂ,ಕೆಲ ಬರಹಗಾರರು ಯುಗಧರ್ಮವನ್ನು ಮೀರಿ ತನ್ನದೇ ಆದ ಚಿಂತನೆ ಸೊಬಗನ್ನು ಹೊಸ ಲಯದಲ್ಲಿ ಲೀನವಾಗಿಸುತ್ತಾರೆ.…