Girl in a jacket

Daily Archives: June 7, 2021

ಲಸಿಕೆ ವಿಳಂಬ ನೀತಿಯಿಂದ ಹಲವರ ಸಾವಿಗೆ ಕಾರಣರಾದ ಮೋದಿ-ಮಮತಾ ಟೀಕೆ

ಕೋಲ್ಕತ್ತ,ಜೂ,೦೭: ಮೋದಿಯವರು ಈಗ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತದೆಎಂಬ ನಿರ್ಧಾರವನ್ನು ಈ ಹಿಮದೆಯೇ ತಗೆದುಕೊಂಡಿದದರೆ ಜಿವ ಉಳಿಯುತ್ತಿತ್ತು ಇದರಿಂದ ಅನೇಕರ ಸಾವಿಗೆ ಕಾರನವಾಗಿದೆ ಎಂದು ಮೋದಿ ಹೇಳಿಕೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದರೆ. ಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ನಮ್ಮ ದೀರ್ಘಕಾಲದ ಬೇಡಿಕೆ ಬಗ್ಗೆ ಫೆಬ್ರುವರಿ ೨೧ರಂದು ಮತ್ತು ಹಲವು ಬಾರಿ ಪ್ರಧಾನಿಗೆ ಪತ್ರ ಬರೆದಿದ್ದೆ. ಇದನ್ನು ಕೇಳಲು ಅವರಿಗೆ ನಾಲ್ಕು ತಿಂಗಳು ಬೇಕಾಯಿತು. ಅಂತಿಮವಾಗಿ, ಬಹಳ ಒತ್ತಡದ ಬಂದ ಮೇಲೆ ಅವರು…

ಭಾರತ-ಶ್ರೀಲಂಕ ವೇಳಾಪಟ್ಟಿ ಪ್ರಕಟ

ನವದೆಹಲಿ,ಜೂ,07: ಶ್ರೀಲಂಕಾ ವಿರುದ್ಧ ಭಾರತದ ಪರ್ಯಾಯ ತಂಡವು ಆಡಲಿರುವ ತಲಾ ಮೂರು ಏಕದಿನ ಹಾಗೂ ಟ್ವೆಂಟಿ–20 ಪಂದ್ಯಗಳ ಕ್ರಿಕೆಟ್‌ ಸರಣಿಯು ಜುಲೈ 13ರಿಂದ 25ರವರೆಗೆ ನಡೆಯಲಿದೆ. ಆಯ್ಕೆಗಾರರು ಶಿಖರ್ ಧವನ್ ಅಥವಾ ಹಾರ್ದಿಕ ಪಾಂಡ್ಯ ನಾಯಕತ್ವದಲ್ಲಿ ಸಾಕಷ್ಟು ಯುವ ಆಟಗಾರರನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ. ಸಂಪೂರ್ಣ ಫಿಟ್ ಆಗಿರುವ ಶ್ರೇಯಸ್ ಅಯ್ಯರ್‌ ಕೂಡ ನಾಯಕತ್ವದ ರೇಸ್‌ನಲ್ಲಿದ್ದಾರೆ. ಸೋನಿ ಸ್ಪೋರ್ಟ್ಸ್ ವಾಹಿನಿಯು ಜಾಲತಾಣಗಳ ಮೂಲಕ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೂರು ಏಕದಿನ ಪಂದ್ಯಗಳು ಕ್ರಮವಾಗಿ ಜುಲೈ 13, 16…

ಭಾರತದಲ್ಲಿ ಹೊಸ ಮಾದರಿಯ ವೈರಸ್ ಪತ್ತೆ

ಪುಣೆ, ಜೂ,7: ನಿಧಾನಕ್ಕೆ ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗುತ್ತಿರುವ ಈ ವೇಳೆ ಹೊಸ ಮಾದರಿಯ ವೈರಸ್ ಪತ್ತೆಯಾಗಿದೆ. ಇದನ್ನು B.1.1.28.2 ಕೊರೊನಾವೈರಸ್‌ ಎಂದು ಕರೆಯಲಾಗಿದ್ದು ಪುಣೆಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಪತ್ತೆ ಹಚ್ಚಿದೆ. ಬ್ರೆಜಿಲ್ ಮತ್ತು ಯುಕೆಯಿಂದ ಆಗಮಿಸಿದ ಪ್ರಯಾಣಿಕರಲ್ಲಿ ಸಂಗ್ರಹಿಸಿದ ಗಂಟಲು ಮತ್ತು ಮೂಗಿನ ದ್ರವಗಳಲ್ಲಿ ಈ ಹೊಸ ರೂಪಾಂತರಿ ಕೊರೊನಾ ವೈರಸ್‌ ಪತ್ತೆಯಾಗಿದೆ. ಸಿರಿಯನ್ ಹ್ಯಾಮ್ಸ್ಟರ್ ಮಾದರಿಯಲ್ಲಿ ಪತ್ತೆಯಾದ ರೂಪಾಂತರಿ ವೈರಸ್‌ನ ತೀವ್ರತೆಯನ್ನು ಪರೀಕ್ಷಿಸಲಾಗುತ್ತಿದ್ದು D614G ರೂಪಾಂತರಿಯೊಂದಿಗೆ ಹೋಲಿಕೆ ಮಾಡಲಾಗಿದೆ. ಹೊಸ…

ಜೂನ್ 21 ರ ನಂತರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ- ಮೋದಿ

ನವದೆಹಲಿ,ಜೂ,07:ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾಡೊದ ಭಾಷಣದಲ್ಲಿ ಬಹುತೇಕ ವ್ಯಾಕ್ಸಿನ್ ಬಗ್ಗೆಯೇ ಮೀಸಲಿಟ್ಟಿದ್ದು ಸಲಿಕೆಯನ್ನು ನವೆಂಬರ್ ಹೊತ್ತಿಗೆ ಎಲ್ಲರಿಗೂ ಲಸಿಕೆ ಹಾಕಲಾಗುತ್ತದೆ ಎಂದರು. ಇನ್ನೂ ಲಸಿಕೆ ಬಗ್ಗೆ ಟೀಕಿಸುತ್ತಿದ್ದವರಿಗೆ ಉತ್ತರ ನೀಡಿದ ಮೋದಿ ಜೂನ್ 21 ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುವುದು ಎಂದು ಹೇಳಿದರು. ಈ ಮೊದಲು ಲಸಿಕೆ ವಿತರಣೆ ಸಂಬಂಧ ರಾಜ್ಯಗಳಿಗೆ ಶೇ. 50 ಜವಾಬ್ದಾರಿ ವಹಿಸಲಾಗಿತ್ತು. ಆದರೆ ಲಸಿಕೆ ವಿತರಣೆ ಕುರಿತು ಒಂದಷ್ಟು ಟೀಕೆಗಳು ವ್ಯಕ್ತವಾದ್ದರಿಂದ…

ಹನಿಗಳೆಂಬ ಸಿಹಿ ಜೇನ ಬಟ್ಟಲು…

ಡಾ.ಶಿವಕುಮಾರ್ ಕಂಪ್ಲಿ ಸಹಾಯಕ ಪ್ರಾಧ್ಯಾಪಕರು ದಾವಣಗೆರೆ ಪ್ರಥಮದರ್ಜೆ ಕಾಲೇಜು. ಹನಿಗಳೆಂಬ ಸಿಹಿ ಜೇನ ಬಟ್ಟಲು… ಕಾಲದೊಂದಿಗೆ ಪಾದಗಳು ಹೊರಟಂತೆಲ್ಲಾ ಅದರ ಕಾಲಾನುಭವಗಳೂ ಭಿನ್ನವಾಗುತ್ತಲೇ ಬಂದಿವೆ. ಪದಗಳ ಬೆಚ್ಚಗಿನ ತೆಕ್ಕೆಯಲ್ಲಿ ದಾಖಲೆಗೊಂಡ ಚಿಗುರು ಹೆಜ್ಜೆಗಳಿಗೆ ಬುತ್ತಿಯಾಗಿ,ಪ್ರೀತಿಯ ಕೈ ತುತ್ತಾಗಿ, ಕಿರುಬೆರಳು ಹಿಡಿದು ಬೆಳಕಿನ ಹಾದಿಯಾಗುವಂತಿವೆ. ಬದಲಾಗಿದ್ದು ಕಾಲವೋ? ಕಾಲಾನುಕ್ರಮದ ಬದುಕೋ? ಎಂದು ಪ್ರಶ್ನಿಸಿಕೊಂಡರೆ ಉತ್ತರ ಬಳುಕಿ ಮುಸಿ ಮುಸಿ ನಕ್ಕು ಬದಲಾದದ್ದು ಕಾಲವಲ್ಲ ನಮ್ಮಯ ಬದುಕು ಎಂಬ ಸಂಗತಿಯನ್ನ ನೀಡುತ್ತದೆ.ಹೌದು ನಿಸರ್ಗ ಸಹಜವಾಗಿದ್ದ ಬದುಕುಗಳು ಇಂದು…

ಕನ್ನಡಕ್ಕಾದ ಅನ್ಯಾಯದ ಕುರಿತು ಕೇಂದ್ರೀಕರಿಸಬೇಕು-ಎಚ್‌ಡಿಕೆ

ಬೆಂಗಳೂರು,ಜೂ,೦೭: ಇತ್ತೀಚೆಗೆ ಅಮೇಜಾನ್ ಮತ್ತು ಗೂಗಲ್‌ನಲ್ಲಿ ಕನ್ನಡ ಭಾಷೆಯನ್ನು ಅವಹೇಳನಕಾರಿಯಾಗಿ ಬಿಂಬಿಸಿದ್ದ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು ಆದರೆ ಈ ವಿಚಾರ ಕೇವಲ ಚರ್ಚೆಗಷ್ಟೆ ಸೀಮಿತ ಮಾಡದೆ ಈ ಬಗ್ಗೆ ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯದ ವಿಚಾರದಲ್ಲಿ ಕೇಂದ್ರೀಕೃತವಾಗಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರ ಸ್ವಾಮಿ, ರಾಜಕೀಯದಲ್ಲಿನ ಹಿಂದಿ ಪಾರಮ್ಯವನ್ನು ಕಣ್ಣಾರೆ ಕಂಡವನು ನಾನು. ಕನ್ನಡಿಗ ಎಚ್.ಡಿ ದೇವೇಗೌಡರು ೧೧ ತಿಂಗಳು ಪ್ರಧಾನ ಮಂತ್ರಿಯಾಗಿದ್ದರು. ಭಾಷೆಯ ವಿಚಾರದಲ್ಲಿ ಅವರೆಷ್ಟು ನೋವು…

ಬಿಎಸ್‌ವೈ ಹೇಳಿಕೆ;ದೆಹಲಿಯಲ್ಲಿ ನಡೆಯುತ್ತಿವೆ ಸರಣಿ ಸಭೆ

post-mallikarjuna hiremat ಬೆಂಗಳೂರು,ಜೂ,೦೭: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಹೈಕಮಾಂಡ್ ಹೇಳಿದರೆ ಸಿಎಂ ಸ್ಥಾನದಿಂದ ಇಳಿಯಲು ಸಿದ್ದ ಎಂದು ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ವಿವಿಧ ಬೆಳವಣಿಗೆಗೆ ಕಾರಣವಾಗಿದೆ ಈ ಮಧ್ಯೆ ದೆಹಲಿಯಲ್ಲಿ ಮೇಲಿಂದ ಮೇಲೆ ಸಭೆಗಳು ನಡೆಯುತ್ತಿವೆ. ರಾಜ್ಯದಲ್ಲಿ ದಿನಕ್ಕೊಬ್ಬರು ನಾಯಕತ್ವ ಬದಲಾವಣೆ ಕುರಿತಂತೆ ನೀಡುತ್ತಿರುವ ಹೇಳಿಕೆಗೆ ಮನನೊಂದು ಹೈಕಮಾಂಡ್‌ಗೆ ಮತ್ತು ತಮ್ಮ ವಿರೋಧಿ ಬಣಗಳಿಗೆ ಸಂದೇಶ ರವಾನಿಸಲು ಮುಖ್ಯಮಂತ್ರಿ ನೀಡಿದ ಈ ಹೇಳಿಕೆ ರಾಜಕೀಯ ಬೆಳವಣಿಗೆಗಳ ತೀವ್ರಗತಿಯಲ್ಲಿ ಸಾಗುತ್ತಿವೆ. ಈ ಮಧ್ಯೆ ಸಿಎಂ ವಿರೋಧಿ…

ಮಾಜಿ ಸಚಿವ ಮುಮ್ತಾಜ್ ಅಲಿಖಾನ್ ನಿಧನ

ಬೆಂಗಳೂರು,ಜೂ,೦೭: ಮಾಜಿ ಸಚಿವ ಪ್ರೊ ಮುಮಾಜ್ ಆಲಿಖಾನ್ ಇಂದು ಬೆಳಿಗ್ಗೆ ನಿಧನಹೊಂದಿದಾರೆ. ಅವರಿಗೆ ೯೪ ವರ್ಷ ವಯಸ್ಸಾಗಿತ್ತು ಇಂದು ಬಳಿಗ್ಗೆ ಅವರು ಗಂಗಾನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಯೋಸಹಜ ಕಾಯಿಲಿಯಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ ಪತ್ನಿ, ಮಗಳು ಇದ್ದಾರೆ. ೨೦೦೮ರಲ್ಲಿ ಬಿ.ಎಸ್. ಯಡಿಯಾರಪ್ಪ ನೇತೃತ್ವದ ಸರ್ಕಾರದಲ್ಲಿ ಅವರು ಅಲ್ಪಸಂಖ್ಯಾತ ಕಲ್ಯಾಣ, ಹಜ್, ವಕ್ಫ್ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ೩೦ ವರ್ಷಗಳಿಂದ ಬೆಂಗಳೂರು ನಗರದ ಆರ್‌ಟಿನಗರದಲ್ಲಿ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ನಡೆಸುತ್ತಿದ್ದು,…

ತಿಳಿದು ಬಾಳು ಮಾನವಾ..!

ಶ್ರೀಧರ್.ಡಿ ಬೆಂಗಳೂರು ದಕ್ಷಿಣ ತಿಳಿದು ಬಾಳು ಮಾನವಾ..! ಮಾನವ ನಿನ್ನ ಚಂಚಲವಾದ ನಾಲಿಗೆ ಸದಾಕಾಲವೂ ಒದ್ದೆಯಾದ ಸ್ಥಳದಲ್ಲೇ ಇರುವುದರಿಂದ ಸುಲಭವಾಗಿ ಮಾತುಗಳು ಜಾರುತ್ತದೆ ಎಚ್ಚರಿಕೆ ಯಿಂದ ನುಡಿ- ಮುತ್ತಿನಂತೆ ಮಾತನು ಮತ್ತೊಬ್ಬರನ್ನು ನೋಯಿಸದಂತೆ ಮಾನವಾ.. ಬೆಣ್ಣೆಯು ಮೃತುವೆಂದು ಹೇಳುವರು ಆದರೆ ಸಜ್ಜನನ ಹೃದಯವು ಅದಕ್ಕಿಂತಲೂ ಮೃದುವಾದದು ಅಗ್ನಿಯು ಮಾತಾಡದೆ ಅನ್ನಬೇಯಿಸುವಂತೆ ಸೂರ್ಯನು ಸದ್ದು ಮಾಡದೇ ಲೋಕವನೆ ಬೆಳಗುವಂತೆ ಸಜ್ಜನರ ಸಂಘ ನಿನ್ನ ದುರ್ಬುದ್ಧಿಯನು ಹೋಗಲಾಡಿಸುವುದು ಜ್ಞಾನ ಸಂಪತ್ತಿನ ಕಡೆ ನಡೆ ಮಾನವಾ.. ಸಕಲ ವೇದಗಳ…

ಬಾಹ್ಯಾಕಾಶ ನೌಕೆಯ ಬೆನ್ನಲುಬಾಗಿ ನಿಂತವರು ಭಾರತೀಯ ಮಹಿಳೆ

ಮೆಲ್ಬರ್ನ್,ಜೂ,07:ಭಾರತೀಯ ಮೂಲದ ಎಂಜಿನಿಯರ್ ಸುಭಾಷಿಣಿ ಅಯ್ಯರ್ ನಾಸಾ ಮಹತ್ವಾಕಾಂಕ್ಷೆ ಯೋಜನೆಯಾದ ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆಯನ್ನು ಕಳಿಸುವ ಬೆನ್ನಲುಬಾಗಿ ನಿಂತಿದ್ದಾರೆ. ಒರಿಯನ್‌ ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿಗೆ ಹೊತ್ತೂಯ್ಯಲಿರುವ ಆರ್ಟೆಮಿಸ್‌ 1 ಯೋಜನೆಯ ಬಿಡಿ ಭಾಗಗಳ ನಿರ್ಮಾಣ ಹಾಗೂ ಆರಂಭಿಕ ಹಂತದ ನಿರ್ವಹಣೆಯನ್ನು ನೋಡಿಕೊಳ್ಳುವ ತಂಡದಲ್ಲಿ ಸುಭಾಷಿಣಿ ಕೂಡ ಒಬ್ಬರು. ರಾಕೆಟ್‌ನ ಕೋರ್‌ ಸ್ಟೇಜ್‌ ನಿರ್ಮಾಣ ಪೂರ್ಣಗೊಂಡು, ಅದನ್ನು ಹಸ್ತಾಂತರಿಸುವವರೆಗೆ ನಾಸಾಗೆ ಎಲ್ಲ ರೀತಿಯ ಸಹಾಯ ಮಾಡುವ ಜವಾಬ್ದಾರಿಯೂ ಅವರ ಮೇಲಿದೆ. ತಮಿಳುನಾಡಿನ ಕೊಯಮತ್ತೂರಿನವರಾದ ಸುಭಾಷಿಣಿ ಕಳೆದ 2 ವರ್ಷಗಳಿಂದ…

ಸತ್ಯಕ್ಕೆ ಸಾವಿಲ್ಲ,ಸುಳ್ಳಿಗೆ ಸುಖವಿಲ್ಲ

. ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಬಸಿದ್ಧಸೂಕ್ತಿ : ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ. ಸತ್ಯ =ಇರುವುದು, ಭೂತ ವರ್ತಮಾನ ಭವಿಷ್ಯ, ಸೃಷ್ಟಿ ಸ್ಥಿತಿ ಲಯಕಾಲಗಳಲ್ಲಿ ಇರುವುದು. ಸುಳ್ಳು =ಇಲ್ಲದಿರುವುದು, ಇಲ್ಲದ್ದು ಇದ್ದು ಇಲ್ಲದಂತಾಗುವುದು. ಪರಮಾತ್ಮನು ಎಲ್ಲ ಚೇತನ – ಅಚೇತನಗಳಲ್ಲಿ ವಿಶೇಷ-ಸಾಮಾನ್ಯ ಚೈತನ್ಯರೂಪದಲ್ಲಿರುವುದರಿಂದ ಆತ ನಿಜ ಸತ್ಯ! ನಮ್ಮ ಸತ್ಯಗಳು ಪ್ರಾಪಂಚಿಕ. ಸತ್ಯ ಬಹುಕಾಲ ಮುಚ್ಚಿಡಲಾಗದು. ಹತ್ತು ಹತ್ಯಗೈದು ಸಿಲುಕದವ ಹನ್ನೊಂದರಲ್ಲಿ ಸಿಲುಕಿ ಸತ್ಯ ಬಾಯ್ಬಿಟ್ಟ! ಪರಮಾತ್ಮನಲ್ಲಿ ತೋರುವ ಜಗತ್ತು ಸುಳ್ಳು. ಶಾಶ್ವತವಲ್ಲ. ಹುಟ್ಟಿದ್ದು ತೋರಿದ್ದು ನಶಿಸುತ್ತಿದೆಯಲ್ಲ!…

100 ಗಡಿ ದಾಟಿದ ಪೆಟ್ರೋಲ್

ಬೆಂಗಳೂರು,ಜೂ,07:ತೈಲ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿರುವ ಕಾರಣ ರಾಜ್ಯದ ಕೆಕ ಜಿಲ್ಲೆಗಳು ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ಗಡಿ ದಾಟಿದೆ. ಕಳೆದ ವಾರವೇ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ 100 ಗಡಿ ದಾಟಿದ್ದು ಈಗ ರಾಜ್ಯದ ಕೆಲ ಜಿಲ್ಲೆಗಳಲ್ಲಿ 100 ಗಡಿ ದಟಿದೆ. ಬಳ್ಳಾರಿ ಮತ್ತು ಶಿರಸಿಯಲ್ಲಿ ಪೆಟ್ರೋಲ್ ದರವು ಭಾನುವಾರ ₹100ರ ಗಡಿ ದಾಟಿದೆ. ಬಳ್ಳಾರಿಯಲ್ಲಿ ಲೀಟರ್ ಪೆಟ್ರೋಲ್ ದರ ₹100.08, ಶಿರಸಿಯಲ್ಲಿ ₹100.28 ಆಗಿದೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ ₹100ಕ್ಕಿಂತ…

Girl in a jacket