Girl in a jacket

Daily Archives: May 15, 2021

ತೌಕ್ತೆ ಚಂಡಮಾರುತ ಎದುರಿಸಲು ೧ ಸಾವಿರ ಜನ ಸಿಬ್ಬಂದಿ ನೇಮಕ – ಬೊಮ್ಮಾಯಿ

ಬೆಂಗಳೂರು,ಮೇ,15:    ತೌಕ್ತೆ ಚಂಡಮಾರುತವನ್ನು ಸಮರ್ಥವಾಗಿ ಎದುರಿಸಲು NDRF, SDRF ಸೇರಿದಂತೆ ಒಟ್ಟು ಒಂದು ಸಾವಿರ ನುರಿತ ರೆಸ್ಕ್ಯೂ ಆಪರೇಷನ್ ಟೀಮ್ ಅನ್ನು ನಿಯೋಜಿಸಲಾಗಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಶನಿವಾರ ಬೆಂಗಳೂರಿನಲ್ಲಿ ಟೌಟೆ ಚಂಡಮಾರುತ ಎದುರಿಸಲು ಮಾಡಿಕೊಳ್ಳಲಾಗಿರುವ ಸಿದ್ಧತೆಗಳ ಕುರಿತು ಉನ್ನತಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು. ರಾಜ್ಯದಲ್ಲಿ ಒಟ್ಟು 434 ಜನ sdrf ತಂಡದಲ್ಲಿದ್ದಾರೆ. ಕಲಬುರ್ಗಿ ಮತ್ತು…

ಅಮೂಲಾಗ್ರ ಸುಧಾರಣೆಗೆ ಕ್ರಮ;ಅಶ್ವತ್ಥ ನಾರಾಯಣ

ಬೆಂಗಳೂರು,ಮೇ,15: ಸುಮಾರು ಒಂದೂವರೆ ಕೋಟಿಗೂ ಹೆಚ್ಚು ಜನರಿರುವ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಇರುವ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಸುಧಾರಿಸಲು ರಾಜ್ಯ ಕೋವಿಡ್‌ ಕಾರ್ಯಪಡೆಯು ತಜ್ಞರರದಿ ಪಡೆಯಲು ನಿರ್ಧರಿಸಿದೆ. ಬೆಂಗಳೂರಿನಲ್ಲಿ ಶನಿವಾರ ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ ನೇತೃತ್ವದಲ್ಲಿ ನಡೆದ ಕಾರ್ಯಪಡೆ ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಆರೋಗ್ಯ ವ್ಯವಸ್ಥೆಯನ್ನು ಬಿಬಿಎಂಪಿ ವ್ಯಾಪ್ತಿಯಿಂದ ತೆಗೆದು ಆರೋಗ್ಯ…

ಕಾಂಗ್ರೆಸ್ ಜನಪ್ರತಿನಿಧಿಗಳ ಪ್ರಧೇಶಾಭಿವೃದ್ಧಿ ಹಣ ಬಿಡುಗಡೆಗೆ ಸಿದ್ದು ಸಿಎಂಗೆ ಪತ್ರ

ಬೆಂಗಳೂರು,ಮೇ,೧೫: ಕಾಂಗ್ರೆಸ್ ಪಕ್ಷದ ಶಾಸಕರು, ವಿಧಾನಸಭಾ ಸದಸ್ಯರ,ಸಂಸದರು ಮತ್ತು ರಾಜ್ಯಸಭಾ ಸದಸ್ಯರ ಪ್ರದೇಶಾಭಿವೃದ್ಧಿ ತಲಾ ಒಂದು ಕೋಟಿರೂ ಗಳನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಕೋರಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಸದಸ್ಯರ ಕ್ಷೇತ್ರಗಳ ಅಭಿವೃದ್ಧಿಗೆಂದು ನೀಡಲಾಗುವ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ತಲಾ ೧ ಕೋಟಿ ರೂಪಾಯಿಗಳನ್ನು ಲಸಿಕೆ ಖರೀದಿಸಿ ಜನರಿಗೆ ನೀಡಲು ಉದ್ದೇಶಿಸಿದ್ದೇವೆ. ಇದರಿಂದ ಸುಮಾರು ೯೦ ಕೋಟಿ ರೂಗಳಷ್ಟು ಸಂಗ್ರಹವಾಗುತ್ತದೆ. ಇನ್ನುಳಿದ ಹತ್ತು ಕೋಟಿ ರೂಗಳನ್ನು ಪಕ್ಷದ…

ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದ ೩೫ ಶಿಕ್ಷಕರು ಕೊರೊನಾಗೆ ಬಲಿ

ಬೆಂಗಳೂರು,ಮೇ, ೧೫; ಇತ್ತೀಚಗೆ ರಾಜ್ಯದಲ್ಲಿ ನಡೆದ ಲೋಕಸಭೆ ಹಾಗೂ ವಿಧಾನ ಸಭೆಗಳ ಉಪ ಚುನಾವಣೆಗಳ ಕಾರ್ಯನಿರ್ವಹಿಸಿದ ೩೫ ಶಿಕ್ಷಕರು ಸೋಂಕಿಗೆ ಬಲಿಯಾಗಿದ್ದಾರೆ ಎನ್ನುವ ಅಘಾತಕಾರ ಮಾಹಿತಿ ಹೊರಬಿದ್ದಿದೆ. ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೆಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದ ೩೫ ಮಂದಿ ಕೊರೊನಾದಿಂದ ಸಾವನ್ನಪ್ಪಿರುವ ಬಗ್ಗೆ ಶಿಕ್ಷಣ ಇಲಾಖೆ ವರದಿ ನೀಡಿದೆ. ಎಸ್.ಎಸ್.ಭರಾಟೆ (೪೨), ರವೀಂದ್ರನಾಥ್ ಬಶಟ್ಟಿ (೫೮), ಸಂಗಪ್ಪ ವಾನೆ (೪೩), ರಾಜೇಶ್ವರಿ (೪೧), ಶ್ರೀದೇವಿ (೫೨), ಪ್ರಶಾಂತ್ ಮಂತ್ರೆ (೩೬),…

ರಾಜ್ಯದಲ್ಲಿ ಭಾರಿ ಮಳೆ ಸೂಚನೆ- ೭ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬೆಂಗಳೂರು,ಮೇ, ೧೫ : ಕರ್ನಾಟಕಕ್ಕೆ ತೌಕ್ತೆ ಚಂಡಮಾರುತ ಆಗಮಿಸುವ ಹಿನ್ನೆಲೆಯಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು ಇಂದಿನಿಂದ ಮೇ ೧೭ ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಸಂಭವವಿರು ಕಾರಣ ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಕರಾಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಗಾಲದ ವಾತಾವರಣ ನಿರ್ಮಾಣವಾಗಿದ್ದು, ಗುಡುಗು, ಮಿಂಚು ಸಹಿತ ಮಳೆ…

ಬೈಡನ್ ಸಲಹೆಗಾರರಾಗಿ ಭಾರತೀಯ ಮೂಲದ ತಂಡನ್ ನೇಮಕ

ವಾಷಿಂಗ್ಟನ್,ಮೇ,೧೫: ಅಮೆರಿಕಾ ಅಧ್ಯಕ್ಷ ಜೋಬೈಡನ್ ಅವರ ಹಿರಿಯ ಸಲಹೆಗಾರರಾಗಿ ಭಾರತೀಯ ಮೂಲದ ಸಂಜಾತೆ ನೀರಾ ತಂಡನ್ ಅವರು ನೇಮಕವಾಗಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೆ ರಿಪಬ್ಲಿಕನ್ ಸೆನೆಟರ್‌ಗಳ ತೀವ್ರ ವಿರೋದಿಂಧ ಶ್ವೇತ ಭವನದ ಬಜೆಟ್ ನಿರ್ವಹಣಾ ಕಚೇರಿಯ ನಿರ್ದೇಶಕಿ ಸ್ಥಾನದ ನಾಮನಿರ್ದೇಶನವನ್ನು ತಂಡನ್ ಹಿಂಪಡೆದಿದ್ದರು. ಅಮೆರಿಕದ ಡಿಜಿಟಲ್ ಸೇವೆಯ ಪರಿಶೀಲನೆ ನಡೆಸುವುದು. ‘ಅಫೋರ್ಡಬಲ್ ಕೇರ್ ಆಕ್ಟ್’ ಅನ್ನು ರದ್ದುಪಡಿಸಬೇಕೆಂದು ಕೋರಿ ರಿಪಬ್ಲಿಕನ್ ಪಕ್ಷದವರಿಂದ ಸಲ್ಲಿಕೆಯಾಗುವ ದಾವೆಗಳ ಕುರಿತಂತೆ ಸುಪ್ರೀಂ ಕೋರ್ಟ್ ನೀಡುವ ತೀರ್ಪಿಗೆ ತಕ್ಕಂತೆ ಯೋಜನೆ ರೂಪಿಸುವ ಎರಡು…

ಯುವ ಚಳವಳಿಗಾರರನ್ನು ಕೇಂದ್ರ ಹತ್ತಿಕ್ಕುತ್ತಿದೆ-ಡಿಕೆಶಿ

ಬೆಂಗಳೂರು,ಮೇ,೧೫: ಕೋವಿಡ್ ಪರಿಹಾರ ಕಾರ್ಯದಲ್ಲಿ ನಿರತರಾದವರನ್ನು ಹಾಗೂ ಯುವ ಚಳವಳಿಗಾರರನ್ನು ಕೇಂದ್ರ ಸರ್ಕಾರ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಕೆಪಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಕೊರೊನಾ ಸೋಂಕಿತರಿಗೆ ಪರಿಹಾರ ಕಾರ್ಯದಲ್ಲಿ ನಿರತರಾಗಿರುವ ಭಾರತೀಐ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಅವರನ್ನು ದೆಹಲಿ ಪೊಲೀಸರು ವಿಚಾರಣೆಗೊಳಪಡಿಸಿರುವುದು ಖಂಡನೀಯ ಎಂದಿದ್ದಾರೆ ಈ ಮೂಲಕ ಯುವಕರ ಚಳವಳಿಗಳನ್ನು ಹತ್ತಿಕ್ಕುವ ಹುನ್ನಾರ ನಡೆದಿದೆ ಎಂದು ಅವರು ದೂರಿದ್ದಾರೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಡಿ.ಕೆ,ಶಿವಕುಮಾರ್ ಅವರು , “ಯುವ ಚಳುವಳಿಯ ದೈತ್ಯರಲ್ಲಿ…

೨ನೇ ಕಂತಿನ ಆಮ್ಲಜನಕ ಹೊತ್ತು ತಂದ ಎಕ್ಸ್ ಪ್ರೆಸ್ ರೈಲು

ಬೆಂಗಳೂರು, ಮೇ,೧೫: ಕೋವಿಡ್-೧೯ ಚಿಕಿತ್ಸೆಗಾಗಿ ಆಕ್ಸಿಜನ್ ಕೊರತೆ ಮುಂದುವರೆದಿದ್ದು ಕೇಂದ್ರ ಸರ್ಕಾರ ೨ನೆ ಬಾರಿ ರಾಜ್ಯಕ್ಕೆ ಆಕ್ಸಿಜನ್ ರವಾನೆ ಮಾಡಿದೆ. ೧೨೦ ಮೆಟ್ರಿಕ್ ಟನ್ ಆಕ್ಸಿಜನ್ ಶನಿವಾರ ಬೆಳಿಗ್ಗೆ ಎಕ್ಸ್ ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ತಲುಪಿತು. ಕಳಿಂಗ ನಗರದಿಂದ ಬೇಂಗಳೂರಿಗೆ ಬೆಳಗಿನ ಜಾವ೩.೨೦ಕ್ಕೆ ತಲುಪಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ತಲಾ ೨೦ ಟನ್ ಆಕ್ಸಿಜನ್ ಸಾಮರ್ಥ್ಯದ ಒಟ್ಟು ಆರು ಕಂಟೇನರ್ ಗಳಲ್ಲಿ ಸುಮಾರು ೧೨೦ ಮೆಟ್ರಿಕ್ ಟನ್ ನಷ್ಟು ತೂಕದ ಆಮ್ಲಜನಕ ಹೊತ್ತು…

ಎಸ್.ಆರ್.ಪಾಟೀಲ್ ರಿಂದ ಉಚಿತ ಆಂಬುಲೆನ್ಸ್

ನಿಡಗುಂದಿ, ಮೇ,15:ದಿನೇ ದಿನೇ ಕೊರೊನಾ ಅಟ್ಟಹಾಸ ಜಾಸ್ತಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ,ತಾಲ್ಲೂಕು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಜನಪ್ರತಿನಿದಿಗಳು ಹಲವು ಸೇವೆಗಳನ್ನು ಮನನ ಅಡುತ್ತಿದ್ದಾರೆ. ನಿಡಗುಂದಿ ಆರೋಗ್ಯ ಸಮುದಾಯ ಕೇಂದ್ರಕ್ಕೆ ಅವಶ್ಯಕತೆ ಇದ್ದ ಆಂಬುಲೆನ್ಸ್ ಅನ್ನು ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ್ ಉಚಿತವಾಗಿ ನೀಡಿದ್ದಾರೆ. ಕೋವಿಡ್ ರೋಗಿಗಳಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಅಂಬುಲೆಸ್ಸ್ ನೀಡಿದ್ದು ಇದರ ಸದುಪಯೋಗ ಪಡೆಯುವಂತೆ ಅವರು ತಿಳಿಸಿದ್ದಾರೆ. ಇದೇ ವೇಳೆ ಎಸ್.ಆರ್.ಪಾಟೀಲ್ ಪರವಾಗಿ ಅವರ ಸಹೋದರ ಶಿವಾನಂದ ಮಾವಟಿ ಅವರಿಗೆ ಸನ್ಮಾನಿಸಲಾಯಿತು.

ಬಿಗ್ ಬಾಸ್ ಜೀವನ ಪಾಠ ಕಲಿಸಿತು; ಶುಭಾ ಪೂಂಜಾ

ಬಿಗ್ ಬಾಸ್ ನನಗೆ ಜೀವನ ಪಾಠಕಲಿಸಿತು ,ಒಂದು ಕುಟುಂಬದ ಅನುಭವ ನೀಡಿತು ಎಂದು ನಟಿ ಹಾಗೂ ಬಿಗ್ ಬಾಸ್ ನಿಂದ ಮನೆಗೆ ತೆರಳಿದ ಶುಭಾ ಪೂಂಜಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಕೋವಿಡ್ ಅಟ್ಟಹಾಸದ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದಾಗಿ ರಿಯಾಲಿಟಿ ಶೋ ಬಿಗ್ ಬಾಸ್ 8 ರ ಸೀಜನ್ ಅರ್ಧಕ್ಕೆ ನಿಲ್ಲಿಸಿದ ದಕಾರಣ ಮನೆಯಲ್ಲಿರುವ ಶುಭಾ ಪೂಂಜ್ ದೂರವಾಣಿ ಕರೆಮಾಡಿದಾಗ ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ. ನನಗೆ ಜೀವನದ ಅನುಭವ ಮತ್ತು ಸಂಯಮವನ್ನು ಕಲಿಸಿಕೊಟ್ಟಿದೆ ಅಲ್ಲದೆ ಒಂದು…

175ವೇಗದಲ್ಲಿ ಅಪ್ಪಳಿಸಲಿದೆ ತೌಕ್ಟೆ ಚಂಡಮಾರುತ

ನವದೆಹಲಿ,ಮೇ,15: ಅರಬ್ಬಿಸಮುದ್ರದಲ್ಲಿವಾಯುಭಾರ ಕುಸಿತದಿಂದ ಗುಜರಾತ್ ಗೆ ತೌಕ್ಟೆ ಚಡ್ಡಮಾರುತ ಅಪ್ಪಳಿಸಲಿದ್ದು ಕಡಲತೀರವನ್ನು ದಾಟಿಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಬೆಳಿಗ್ಗೆಯಿಂದಲೇ ತೌಕ್ಟೆ ಚಂಡಮಾರುತ ತೀವ್ರಗೊಳ್ಳಲಿದ್ದು ಇದೇ 16-19ವರೆಗೂ ಪ್ರತಿ ಗಂಟೆಗೆ160ರಿಂದ ಆರಂಭವಾಗಿ 175 ಕಿ.ವೇಗದಲ್ಲಿ ಚಂಡಮಾರುತ ಸಂಚರಿಸಲಿದೆ. ಮೇ.15 ರಂದು ಲಕ್ಷದ್ವೀಪದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಮೇ.15 ರಂದು ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಸುರಿಯಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಇನ್ನು…

Girl in a jacket