“ಠಾಣೆ” ಚಿತ್ರದಿಂದ ಬಂತು ಸುಂದರ ಹಾಡು
by-ಕೆಂಧೂಳಿ
ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿರುವ, ,”ಠಾಣೆ” ಚಿತ್ರಕ್ಕಾಗಿ ಖ್ಯಾತ ಗಾಯಕಿ ಮಜಾಟಾಕೀಸ್ ಖ್ಯಾತಿಯ ರೆಮೊ ಅವರು ಬರೆದಿರುವ “ಬಾಳಿನಲ್ಲಿ ಭರವಸೆಯ ಬೆಳಕು” ಎಂಬ ಅರ್ಥಗರ್ಭಿತ ಹಾಡು ಇತ್ತೀಚೆಗೆ ಅನಾವರಣವಾಯಿತು. ಮಾನಸ ಹೊಳ್ಳ ಸಂಗೀತ ಸಂಯೋಜಿಸಿ, ಜ್ಞಾನ, ಅನುಷ್ಕ, ಜನ್ಯ ಆದರ್ಶ್ ಹಾಗೂ ಮೌಲ್ಯ ಅಚಿಂತ್ಯ ಎಂಬ ಬಾಲ ಪ್ರತಿಭೆಗಳು ಹಾಡಿರುವ ಈ ಸುಂದರ ಹಾಡನ್ನು ನಟ ರಿಷಿ, ಪೊಲೀಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಹಾಗೂ ಡಿ.ಎಸ್.ಮ್ಯಾಕ್ಸ್ ನ ದಯಾನಂದ್ ಅವರು ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಮ್ಮ ಚಿತ್ರದಲ್ಲಿ ಎರಡು ಹಾಡುಗಳಿದೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ. ಮತ್ತೊಂದು ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಖ್ಯಾತ ಗಾಯಕ ರಾಜೇಶ್ ಕೃಷ್ಣ ಆ ಹಾಡನ್ನು ಹಾಡಿದ್ದಾರೆ ಎಂದು ಮಾನಸ ಹೊಳ್ಳ ಮಾಹಿತಿ ನೀಡಿದರು. ಹಾಡು ಹುಟ್ಟಿದ ಸಮಯ ಬಗ್ಗೆ ಮಜಾ ಟಾಕೀಸ್ ಖ್ಯಾತಿಯ ರೆಮೊ ಹೇಳಿದರು. ಬಾಲ ಗಾಯಕಿಯರು ವೇದಿಕೆಯಲ್ಲೂ ಹಾಡಿ ರಂಜಿಸಿದರು. ಛಾಯಾಗ್ರಾಹಕ ಪ್ರಶಾಂತ್ ಸಾಗರ್ ಸೇರಿದಂತೆ ಠಾಣೆ ಚಿತ್ರದ ಕಲಾವಿದರು ,ತಂತ್ರಜ್ಞರು ಸಮಾರಂಭದಲ್ಲಿದ್ದರು. ನಿರ್ಮಾಪಕಿ ಗಾಯತ್ರಿ ಇದ್ದರು.