ಲಸಿಕೆ ವಿಚಾರದಲ್ಲಿ ಜನರ ಹಾದಿ ಸಪ್ಪಿಸಿದ ಕಾಂಗ್ರೆಸ್ ಕ್ಷಮೆ ಕೇಳಲಿ; ಸಿ.ಟಿ.ರವಿ

Share

 

ಬೆಂಗಳೂರು,ಮೇ,22: ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ದ್ವಂದ್ವ ನಿಲುವು ತಾಳಿದ್ದು..ಇದರಿಂದಲೇ ಜನರ ಹಾದಿ ತಪ್ಪಿಸಿದ್ದಾರೆ ಹೀಗಾಗಿ ಜನರ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿಕಾರಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೊರೋನಾ ಲಸಿಕೆ ವಿರೋಧಿಸಿಲ್ಲ ಅಂತಾ ಡಿ.ಕೆ ಶಿವಕುಮಾರ್, ಸಿದ್ಧರಾಮಯ್ಯ ಹೇಳುತ್ತಾರೆ. ಆದರೆ ನಮ್ಮ ಬಳಿ ಲಸಿಕೆ ವಿರೋಧಿ ಹೇಳಿಕೆಗಳು, ಟ್ವಿಟ್ಟರ್ ಗಳು ಸಾಕ್ಷಿಯಾಗಿ ಇವೆ. ಲಸಿಕೆ ವಿರೋಧಿಸುವವರು ದೇಶದ ಜನರ ಬಳಿ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.

ಪಿಎಂ ಕೇರ್ ಗೆ ಕಾಂಗ್ರೆಸ್ ಒಂದೇ ಒಂದು ರೂಪಾಯಿಯನ್ನೂ ನೀಡಿಲ್ಲ. ಎತ್ತಿನ ಗಾಡಿಯಿಂದ ರಾಜಕೀಯ ಆರಂಭಿಸಿದ ಕಾಂಗ್ರೆಸ್ ನ ಕೆಲವು ಮುಖಂಡರು ಈಗ ಖಾಸಗಿ ಜೆಟ್ ನಲ್ಲಿ ಹಾರಾಟ ನಡೆಸುವಷ್ಟು ಶ್ರೀಮಂತರಾಗಿದ್ದಾರೆ. ಆದರೆ, ಸ್ವಂತ ನೆಲೆಯಲ್ಲಿ ದೇಶಕ್ಕೆ ಮತ್ತು ದೇಶದ ಜನತೆಗೆ ಸಹಾಯ ಮಾಡಿಲ್ಲ ಎಂದು ಸಿ.ಟಿ ರವಿ ವಾಗ್ದಾಳಿ ನಡೆಸಿದರು.

ಮುಂದಿನ ದಿನಗಳಲ್ಲಿ ಆಕ್ಸಿಜನ್ ಕೊರತೆ ಯಾವತ್ತೂ ಕಾಡದಂತೆ ಉತ್ಪಾದನೆ- ವಿತರಣಾ ಜಾಲವನ್ನು ಪ್ರಧಾನಿಯವರು ಬಲಪಡಿಸಿದ್ದಾರೆ. ಕೋವಿಡ್ ಸಂಕಷ್ಟದ ವಿಚಾರ ಮಾತ್ರವಲ್ಲದೆ, ಅಪಪ್ರಚಾರದ ವಿರುದ್ಧ ನಾವು ಗೆಲ್ಲಲಿದ್ದೇವೆ. ಕಾಂಗ್ರೆಸ್ ಮುಖಂಡರು ಟೂಲ್ ಕಿಟ್ ಮೂಲಕ ಅಪಪ್ರಚಾರ ಮಾಡಿದರು ಎಂದು ಅವರು ದೂರಿದ್ದಾರೆ.

Girl in a jacket
error: Content is protected !!