ಸುರಕ್ಷಿತವಾಗಿ ಭೂಮಿಗೆ ಮರುಳಿದ ಸುನಿತ ವಿಲಯಮ್ಸ್

Share

ಸುರಕ್ಷಿತವಾಗಿ ಭೂಮಿಗೆ ಮರುಳಿದ ಸುನಿತ ವಿಲಯಮ್ಸ್

by-ಕೆಂಧೂಳಿ

ಕೇಪ್ ಕೆನರವೆಲ್,18-ಜಗತ್ತೆ ನಿಬ್ಬೆರಗಾಗಿ ನಿರೀಕ್ಷಿಸುತ್ತಿದ್ದ ಆ ಸಮಯ ಬಂದೆ ಬಿಟ್ಟಿತು,ತಾಂತ್ರಿಕ ತೊಂದರೆಗಳಿಂದ ಕಳೆದ ಒಂಬತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೆ ಇದ್ದ ಸುನೀತಾ ಮತ್ತು ಬುಚ್ ಭುಮಿಗೆ ಬಂದಿಳಿದಾಗ ಎಲ್ಲರೂ ನಿಟ್ಟಿಸಿರು ಬಿಟ್ಟರು..ಜಗತ್ತು ಅವರ ಜೀವಂತ ಆಗಮನಕ್ಕಾಗಿ ಕಾಯುತ್ತಿದ್ದರು.

ಇಬ್ಬರೂ ಕಳೆದ ವರ್ಷ ಜೂನ್‌ನಲ್ಲಿ ಬಾಹ್ಯಾಕಾಶಕ್ಕೆ ಪಯಣಿಸಿದ್ದರು. ತಾಂತ್ರಿಕ ತೊಂದರೆಗಳು ಮತ್ತು ವೇಳಾಪಟ್ಟಿಯಲ್ಲಿನ ಬದಲಾವಣೆಗಳಿಂದಾಗಿ ಅವರ ಮರಳುವಿಕೆ ವಿಳಂಬವಾಗಿತ್ತು. ಕೆಲವೇ ದಿನಗಳ ಈ ಕಾರ್ಯಾಚರಣೆ 9 ತಿಂಗಳಿಗೆ ವಿಸ್ತರಣೆಗೊಂಡಿತ್ತು.
ಸುನ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡ ನಾಸಾ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಮಂಗಳವಾರ ಭೂಮಿಗೆ ಮರಳಿದ್ದು, 9 ತಿಂಗಳ ನಂತರ ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27ಕ್ಕೆ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ.

ಕೇವಲ ಒಂದು ವಾರದ ಮಟ್ಟಿಗೆ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಅಲ್ಲಿಗೆ ಪ್ರಯಾಣಿಸಿದ್ದರು. ಆದರೆ, ಅವರಿದ್ದ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ದೋಷ ಕಂಡುಬಂದಿತ್ತು. ಇದರಿಂದಾಗಿ ಸುನೀತಾ ಮತ್ತವರ ಸಹ ಗಗನಯಾತ್ರಿಗಳು ನೌಕೆಯ ಮೂಲಕ ಹಿಂತಿರುಗುವುದು ಅಪಾಯ ಎಂದು ನಾಸಾ ತಿಳಿಸಿತ್ತು.

ಹಾಗಾಗಿ, ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳುವುದನ್ನು ಕಾಯಲಾಗುತ್ತಿತ್ತು. ಈ ಕಾಯುವಿಕೆ ಇದೀಗ ಇಬ್ಬರೂ ಸುರಕ್ಷಿತವಾಗಿ ಮರಳುವುದರೊಂದಿಗೆ ಕೊನೆಗೊಂಡಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹ್ಯಾಚ್ ಅನ್ನು ಮುಚ್ಚಿ ಅನ್‌ಡಾಕ್ ಮಾಡುವ ಮೂಲಕ ಭೂಮಿಯ ಕಡೆಗೆ ಪ್ರಯಾಣ ಪ್ರಾರಂಭಿಸಿತು. ಅದಾದ ನಂತರ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭೂಮಿಗೆ ಮರಳಲು ವಿಶೇಷ ವಿಧಾನ ಅಳವಡಿಸಿಕೊಂಡಿತು. ಇದರಿಂದಾಗಿ ನೌಕೆ ಭೂಮಿಯ ವಾತಾವರಣವನ್ನು ಸುರಕ್ಷಿತವಾಗಿ ಪ್ರವೇಶಿಸಿ, ಗೊತ್ತುಪಡಿಸಿದ ಸ್ಥಳದಲ್ಲಿಳಿಯಲು ಸಾಧ್ಯವಾಯಿತು.

ಸುನೀತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿಗಳ ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಈಗ ಅವರು ಹ್ಯೂಸ್ಟನ್‌ನಲ್ಲಿರುವ ನಾಸಾದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಗಳ ಪ್ರಧಾನ ಕಚೇರಿಯಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದಾರೆ.

ಕ್ರ್ಯೂ ಡ್ರ್ಯಾಗನ್‌ ಕ್ಯಾಪ್ಸೂಲ್‌ ಫ್ಲೋರಿಡಾದ ಸಮುದ್ರದ ಮೇಲೆ ಟಚ್‌ಡೌನ್‌ ಆಗಿದೆ. ಆಕಾಶದಿಂದ ವೇಗವಾಗಿ ಬರುವ ಕ್ಯಾಪ್ಸೂಲ್‌ ನಿಧಾನವಾಗಿ ಲ್ಯಾಂಡ್‌ ಆಯ್ತು. ಭೂಮಿ ಪ್ರವೇಶದ ಬಳಿಕ ಕ್ಯಾಪ್ಸೂಲ್‌ನಲ್ಲಿರುವ 4 ಪ್ಯಾರಾಚೂಟ್‌ಗಳು ತೆರೆದುಕೊಂಡಿತ್ತು. ಈ ಪ್ಯಾರಾಚೂಟ್‌ಗಳು ಕ್ಯಾಪ್ಸೂಲ್‌ ವೇಗವನ್ನು ತಗ್ಗಿಸಿತ್ತು. ವೇಗ ತಗ್ಗಿದಂತೆ ಕ್ಯಾಪ್ಸೂಲ್‌ ನಿಧನವಾಗಿ ಸಮುದ್ರದಲ್ಲಿ ಟಚ್‌ಡೌನ್‌ ಆಯ್ತು.

ನಂತರ ವಿಶೇಷ ದೋಣಿಯಲ್ಲಿ ಸ್ಪೇಸ್‌ ಎಕ್ಸ್‌ ಸಿಬ್ಬಂದಿ ನೌಕೆಯನ್ನು ರೋಪ್‌ ಬಳಸಿ ಹತ್ತಿರದಲ್ಲೇ ಇದ್ದ ದೊಡ್ಡ ಬೋಟ್‌ ಬಳಿ ತಂದರು. ಈ ನೌಕೆಯನ್ನು ಕ್ರೇನ್‌ ಬಳಸಿ ಬೋಟ್‌ ಒಳಗಡೆ ಇಡಲಾಯಿತು. ಬೋಟ್‌ ಒಳಗಡೆ ಇಟ್ಟ ನಂತರ ಕ್ಯಾಪ್ಸೂಲ್‌ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಿದ ಬಳಿಕ ಕೆಳಗಡೆ ಇರುವ ಬಾಗಿಲು(ಹ್ಯಾಚ್) ತೆರೆಯಲಾಯಿತು. ಈ ಬಾಗಿಲಿನ ಮೂಲಕ ಯಾನಿಗಳನ್ನು ಸ್ಪೇಸ್‌ ಎಕ್ಸ್‌ ಸಿಬ್ಬಂದಿ ಹೊರಗೆ ನಿಧಾನವಾಗಿ ಎಳೆದು ವಿಶೇಷವಾಗಿ ವಿನ್ಯಾಸ ಪಡಿಸಲಾಗಿರುವ ವೀಲ್‌ ಚೇರ್‌ನಲ್ಲಿ ಕುಳ್ಳಿರಿಸಿದರು.

ನಾಸಾದ ಸಹಭಾಗಿತ್ವದಲ್ಲಿ ಬೋಯಿಂಗ್ ರೂಪಿಸಿದ್ದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣದ ಭಾಗವಾಗಿ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಸುನಿತಾ ಮತ್ತು ಬುಚ್ ಇಬ್ಬರೂ ಗಗನಯಾತ್ರಿಗಳು ಜೂ.5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಎಂಟು ದಿನಗಳ ಕಾಲ ಅಲ್ಲಿದ್ದು ಜೂ.14 ರಂದು ಸ್ಟಾರ್‌ಲೈನರ್ ಮೂಲಕವೇ ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅವರು ಬಾಹ್ಯಾಕಾಶದಲ್ಲೇ ಉಳಿಯುವಂತಾಗಿತ್ತು.

Girl in a jacket
error: Content is protected !!