ಸನ್‌ರೈಸ್‌ವಿರುದ್ಧಗೆದ್ದುಬೀಗಿದ ಕೋಲ್ಕತ್ತ

Share

ಸನ್‌ರೈಸ್‌ವಿರುದ್ಧಗೆದ್ದುಬೀಗಿದ ಕೋಲ್ಕತ್ತ

by-ಕೆಂಧೂಳಿ

ಕೋಲ್ಕತ್ತ ,ಏ,೦೪-ವೆಂಕಟೆಶ್ ಅಯ್ಯರ್ ಮತ್ತು ರಘುವಂಶಿ ಅವರ ಸೊಗಸಾದಜೊತೆಯಾಟದಿಂದ ಸನ್‌ರೈಸ್ ಹೈದರಾಬಾದ್ ತಂಡವನ್ನು ಕೋಲ್ಕತ್ತಾ ತಂಡ ಸೋಲಿಸುವ ಮೂಲಕ ಎರಡನೇ ಗೆಲುವು ಸಾಧಿಸಿತು.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ೮೦ ರನ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸದೆಬಡಿಯಿತು.ಹಾಲಿ ಚಾಂಪಿಯನ್ ಕೋಲ್ಕತ್ತ ತಂಡವು ನಾಲ್ಕು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಐದನೇ ಸ್ಥಾನಕ್ಕೆ ಏರಿತು. ಮತ್ತೊಂದೆಡೆ ಹಾಲಿ ರನ್ನರ್ಸ್ ಅಪ್ ಹೈದರಾಬಾದ್ ತಂಡವು ಹ್ಯಾಟ್ರಿಕ್ ಸೋಲಿನೊಡನೆ ಕೊನೆಯ ಸ್ಥಾನಕ್ಕೆ ಜಾರಿತು.

ಕಳೆದ ಆವೃತ್ತಿಯ ಫೈನಲ್ ಪಂದ್ಯ ಸೇರಿದಂತೆ ಕೋಲ್ಕತ್ತ ವಿರುದ್ಧ ಸನ್‌ರೈಸರ್ಸ್ ತಂಡಕ್ಕೆ ಇದು ಸತತ ಐದನೇ ಸೋಲಾಗಿದೆ.ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೋಲ್ಕತ್ತ ತಂಡವು ವೆಂಕಟೇಶ್ (೬೦; ೨೯ಎ, ೪x೭, ೬x೩) ಮತ್ತು ರಘುವಂಶಿ (೫೦; ೩೨ಎ, ೪ಘಿ೫, ೬ಘಿ೨) ಅವರ ಅರ್ಧಶತಕಗಳ ಬಲದಿಂದ ೨೦ ಓವರ್‌ಗಳಲ್ಲಿ ೬ ವಿಕೆಟ್‌ಗಳಿಗೆ ೨೦೦ ರನ್ ಗಳಿಸಿತು.ಈ ಸವಾಲಿನ ಗುರಿಯನ್ನು ಬೆನ್ನತ್ತಿದ ಹೈದರಾಬಾದ್ ತಂಡವು ೧೬.೪ ಓವರ್‌ಗಳಲ್ಲಿ ೧೨೦ ರನ್‌ಗಳಿಸಿ ಯಾವುದೇ ಹಂತದಲ್ಲಿ ಹೋರಾಟ ತೋರದೆ ಸೋಲೊಪ್ಪಿಕೊಂಡಿತು. ವೇಗಿಗಳಾದ ವೈಭವ್ ಮತ್ತು ಹರ್ಷಿತ್ ಠಾಣಾ (೧೫ಕ್ಕೆ ೧) ದಾಳಿಗೆ ಹೈದರಾಬಾದ್ ತಂಡವು ಆರಂಭದಲ್ಲೇ ಕುಸಿಯಿತು. ತಂಡವು ೯ ರನ್ ಗಳಿಸುವಷ್ಟರಲ್ಲಿ ಟ್ರಾವಿಸ್ ಹೆಡ್ (೪), ಅಭಿಷೇಕ್ ಶರ್ಮಾ (೨) ಮತ್ತು ಇಶಾನ್ ಕಿಶನ್ (೨) ಪೆವಿಲಿಯನ್ ಸೇರಿದ್ದರು.ನಿತೀಶ್ ಕುಮಾರ್ ರೆಡ್ಡಿ (೧೯), ಕಮಿಂದು ಮೆಂಡಿಸ್ (೨೭;೨೦ಎ) ಮತ್ತು ಹೆನ್ರಿಚ್ ಕ್ಲಾಸೆನ್ (೩೩;೨೧ಎ) ಕೊಂಚ ಹೋರಾಟ ತೋರಿದರು. ನಂತರದಲ್ಲಿ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ (೨೨ಕ್ಕೆ ೩), ಆಂಡ್ರ್ಯೆ ರಸೆಲ್ (೨೧ಕ್ಕೆ ೨) ಮತ್ತು ಸುನಿಲ್ ನಾರಾಯಣ್ (೩೧ಕ್ಕೆ ೧) ಕೈಚಳಕದ ಮುಂದೆ ಸನ್‌ರೈಸರ್ಸ್ ಬ್ಯಾಟರ್‌ಗಳು ನಿರುತ್ತರರಾದರು.

ಇದಕ್ಕೂ ಮೊದಲು ಕೋಲ್ಕತ್ತ ತಂಡದ ಆರಂಭಿಕ ಜೋಡಿ ಕ್ವಿಂಟನ್ ಡಿ ಕಾಕ್ ಮತ್ತು ಸುನಿಲ್ ನಾರಾಯಣ್ ೩ನೇ ಓವರ್ ಮುಗಿಯುವ ಮುನ್ನವೇ ಪೆವಿಲಿಯನ್‌ಗೆ ಮರಳಿದರು. ವೇಗಿ ಮೊಹಮ್ಮದ್ ಶಮಿ ಎಸೆತದಲ್ಲಿ ಸುನಿಲ್ ಅವರು ಕ್ಲಾಸೆನ್‌ಗೆ ಕ್ಯಾಚ್ ಆದರು. ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲಿ ಕ್ವಿಂಟನ್ ಡಿಕಾಕ್ ಅವರು ಜೀಶನ್ ಅನ್ಸಾರಿಗೆ ಕ್ಯಾಚಿತ್ತರು.ಕೋಲ್ಕತ್ತ ತಂಡದ ನಾಯಕ ಅಜಿಂಕ್ಯ ರಹಾನೆ (೩೮; ೨೭ಎ, ೪ಘಿ೧, ೬ಘಿ೪) ಇನಿಂಗ್ಸ್‌ಗೆ ಸ್ಥಿರತೆ ಒದಗಿಸಿದರು. ಅವರಿಗೆ ಉತ್ತಮ ಜೊತೆ ನೀಡಿದ ರಘುವಂಶಿ ಕೂಡ ಬೀಸಾಗಿ ಆಡಿದರು. ಇವರಿಬ್ಬರೂ ೩ನೇ ವಿಕೆಟ್ ಜೊತೆಯಾಟದಲ್ಲಿ ೮೧ ರನ್ ಸೇರಿಸಿದರು.
ಹಿಂದಿನ ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದ ವೆಂಕಟೇಶ್ ಈ ಪಂದ್ಯದಲ್ಲಿ ಕೊನೆಗೂ ಲಯ ಕಂಡುಕೊಂಡರು. ವೆಂಕಟೇಶ್ ಮತ್ತು ರಿಂಕು ಸಿಂಗ್ (ಔಟಾಗದೇ ೩೨; ೧೭ಎ, ೪ಘಿ೪, ೬ಘಿ೧) ಅವರ ಆರ್ಭಟಕ್ಕೆ ರನ್‌ಗಳು ವೇಗವಾಗಿ ಹರಿದುಬಂದವು. ಅವರ ಆಟದ ವೇಗಕ್ಕೆ ಇನಿಂಗ್ಸ್‌ನ ಕೊನೆಯ ೫ ಓವರ್‌ಗಳಲ್ಲಿ ೭೮ ರನ್‌ಗಳು ಸೇರಿದವು.ಇವರಿಬ್ಬರೂ ಐದನೇ ವಿಕೆಟ್ ಜೊತೆಯಾಟದಲ್ಲಿ ೯೧ (೪೧ಎಸೆತ) ರನ್ ಸೇರಿಸಿದರು.

 

Girl in a jacket
error: Content is protected !!